ಬೆಂಗಳೂರು: ಏಷ್ಯಾಕ್ ಟೂರ್ನಿ(Asia Cup 2023) ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿದೆ. ಆಗಸ್ಟ್ 31ರಿಂದ ಸೆಪ್ಟಂಬರ್ 17ರ ತನಕ ಟೂರ್ನಿ ನಡೆಯಲಿದೆ. ಈ ಮಹತ್ವದ ಕೂಟಕ್ಕೆ ಭಾನುವಾರ ಭಾರತ ತಂಡ(team india) ಪ್ರಕಟಗೊಳ್ಳಲಿದೆ ಎಂದು ಬಿಸಿಸಿಐ(BCCI) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ರಾಹುಲ್ ಫಿಟ್ ಅಯ್ಯರ್ ಡೌಟ್
ಕೆ.ಎಲ್ ರಾಹುಲ್(KL Rahul) ಅವರ ಫಿಟ್ನೆಸ್ ವರದಿ ಹೊರಬಿದ್ದಿದ್ದು, ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಪಿಟಿಐ(PTI) ವರದಿ ಮಾಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟ ರಾಹುಲ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡಲು ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರು ಏಷ್ಯಾ ಕಪ್ನಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಪಿಟಿಐ ತಿಳಿಸಿದೆ. ಆದರೆ ಶ್ರೇಯಸ್ ಅಯ್ಯರ್ ಅವರು ಬೆನ್ನು ನೋವಿನಿಂದ ಸಂಪೂರ್ಣ ಚೇತರಿಕೆ ಕಂಡಿಲ್ಲ ಅವರಿಗೆ ಇನ್ನು ಕೆಲ ದಿನಗಳ ವಿಶ್ರಾಂತಿ ಬೇಕಿದೆ ಎಂದು ವರದಿಯಾಗಿದೆ.
ಶ್ರೇಯಸ್ ಅಯ್ಯರ್(Shreyas Iyer) ಅವರು ಏಷ್ಯಾಕಪ್‌ಗೆ ಆಡುವುದು ಅನುಮಾನ ಅವರು ಇನ್ನೂ ಕೂಟ ಫಿಟ್ ಆಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆಗೆ ಅವರು ಫಿಟ್ ಆಗಲಿದ್ದಾರೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ರಾಹುಲ್ ಮತ್ತು ಅಯ್ಯರ್ ಅವರ ಫಿಟ್ನೆಸ್ಗೋಸ್ಕರ ಬಿಸಿಸಿಐ ಇದುವರೆಗೆ ಏಷ್ಯಾ ಕಪ್ಗೆ ತಂಡ ಪ್ರಕಟಿಸಲು ತಡವರಿಸಿತ್ತು. ಇದೀಗ ಉಭಯ ಆಟಗಾರರ ಫಿಟ್ನೆಸ್ ವರದಿ ಪ್ರಕಾರ ರಾಹುಲ್ ಆಡಲು ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ Asia Cup: ಏಷ್ಯಾಕಪ್‌ಗೆ ತಂಡದ ಪಟ್ಟಿ ಫೈನಲ್; ಸಂಜು ಸ್ಯಾಮ್ಸನ್ ಔಟ್
ತಿಲಕ್ ವರ್ಮಾಗೆ ಅವಕಾಶ
ವಿಂಡೀಸ್ ವಿರುದ್ಧ ಆಡಿದ ಟಿ20 ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿದ ತಿಲಕ್ ವರ್ಮಾ ಅವರ ಮೇಲೂ ಆಯ್ಕೆ ಸಮಿತಿಯೊಂದು ಕಣ್ಣಿಟ್ಟಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ತಿಲಕ್ ವರ್ಮ(tilak varma) ಅವರನ್ನು ಏಷ್ಯಾಕಪ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯೂ ದಟ್ಟವಾಗಿದೆ. ಈ ಮೂಲಕ ವಿಶ್ವಕಪ್ಗೂ ಮುನ್ನ ಪ್ರಯೋಗವೊಂದನ್ನು ನಡೆಸಲು ಆಯ್ಕೆ ಸಮಿತಿ ಮುಂದಾಗಿದೆ.
ಮಾಜಿ ಆಟಗಾರರ ವಿರೋಧ
ಏಷ್ಯಾ ಕಪ್ಗೆ ತಂಡ ಪ್ರಕಟಿಸಲು ತಡವರಿಸುತ್ತಿರುವ ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ಧ ಹಲವು ಮಾಜಿ ಆಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಅರದಲ್ಲೂ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ಗೆ ಈ ಟೂರ್ನಿಯಲ್ಲಿ ಅವಕಾಶ ನೀಡಬಾರದೆಂದು ರವಿ ಶಾಸ್ತ್ರಿ ಮತ್ತು ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಸಾಬಾ ಕರೀಂ ವಿರೋಧ ವ್ಯಕ್ತಪಡಿಸಿದ್ದಾರೆ. ಫಿಟ್ನೆಸ್ ವರದಿಯ ಆಧಾರದಲ್ಲಿ ಮಹತ್ವದ ಪಂದ್ಯಕ್ಕೆ ಅವರನ್ನು ನೇರವಾಗಿ ಆಯ್ಕೆ ಮಾಡುವುದು ಸರಿಯಲ್ಲ ಇದರ ಬದಲಾಗಿ ಪ್ರಸ್ತುತ ತಂಡದಲ್ಲಿ ಆಡುತ್ತಿರುವ ಆಟಗಾರರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.
6 ತಂಡಗಳ ಸೆಣಸಾಟ
ಈಗಾಗಲೇ ಈ ಟೂರ್ನಿಯ ಆತಿಥೇಯ ಪಾಕಿಸ್ತಾನ ಸೇರಿ ಬಾಂಗ್ಲಾದೇಶ ಮತ್ತು ನೇಪಾಳ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್ ನಡುವಣ ಪಂದ್ಯ ಸೆಪ್ಟಂಬರ್ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. 50 ಓವರ್ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.