Site icon Vistara News

Asia Cup: ಸ್ಟಾರ್‌ ಆಟಗಾರರನ್ನು ಹೊರಗಿಟ್ಟು ಏಷ್ಯಾ ಕಪ್‌ಗೆ ತಂಡ ಪ್ರಕಟಿಸಿದ ರವಿಶ್ರಾಸ್ತ್ರಿ

former head coach of the India national cricket team

ಮುಂಬಯಿ: ಪಾಕಿಸ್ತಾನ ಆತಿಥ್ಯದಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ನಡೆಯುವ ಏಷ್ಯಾಕಪ್(Asia Cup) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಪಾಕ್‌,ನೇಪಾಳ ಮತ್ತು ಬಾಂಗ್ಲಾದೇಶ ಟೂನಿಗೆ ತಂಡವನ್ನು ಪ್ರಕಟಿಸಿದೆ. ಆದರೆ ಭಾರತ ಮಾತ್ರ ಇನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಇದಕ್ಕೂ ಮುನ್ನ ಟೀಮ್‌ ಇಂಡಿಯಾದ ಮಾಜಿ ಆಟಗಾರ ಮತ್ತು ಕೋಚ್‌ ಆಗಿದ್ದ ರವಿಶಾಸ್ತ್ರಿ(Ravi Shastri) ಅವರು ಯಾವ ಆಟಗಾರನನ್ನು ಆಡಿಸಿದರೆ ಸೂಕ್ತ ಎಂದು ಹೇಳಿ ತಂಡವೊಂದನ್ನು ಪ್ರಕಟಿಸಿದ್ದಾರೆ.

ಏಷ್ಯಾ ಕಪ್‌ ಟೂನಿಯಲ್ಲಿ ಭಾರತ ಪಾಲ್ಗೊಳ್ಳುವ ಬಗ್ಗೆ ಮುಕ್ತವಾಗಿ ಮಾತನಾಡಿದ ರವಿಶಾಸ್ತ್ರಿ, ಜಸ್‌ಪ್ರೀತ್‌ ಬುಮ್ರಾ ಅವರು ತಂಡಕ್ಕೆ ಮರಳಿದ್ದು ತಂಡಕ್ಕೆ ಹೆಚ್ಚು ಬಲ ಬಂದಿದೆ. ಆದರೆ ಕೆ.ಎಲ್‌ ರಾಹುಲ್‌(kl rahul) ಮತ್ತು ಶ್ರೇಯಸ್‌ ಅಯ್ಯರ್‌(shreyas iyer) ಅವರನ್ನು ಏಷ್ಯಾಕಪ್‌ಗೆ ಪರಿಗಣನೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಕೂಡ ಅವರು ತಿಳಿಸಿದ್ದಾರೆ.

ಹಿಂದಿನ ಲಯ ಅಸಾಧ್ಯ

ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಸುದೀರ್ಘ ಸಮಯದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರನ್ನು ನೇರವಾಗಿ ಈ ಟೂನಿಯಲ್ಲಿ ಆಡಿಸುವುದು ಸೂಕ್ತವಲ್ಲ. ಚೇತರಿಕೆ ಬಳಿಕ ತಂಡಕ್ಕೆ ಮರಳಿದ ಆರಂಭದಲ್ಲಿ ಹಿಂದಿನ ಫಾರ್ಮ್‌ ಇರುವುದಿಲ್ಲ. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಹೀಗಾಗಿ ಅವರನ್ನು ಏಷ್ಯಾ ಕಪ್‌ಗೆ ಆಯ್ಕೆ ಮಾಡ ಬಾರದು, ಒಂದೊಮ್ಮೆ ಅವರು ಐರ್ಲೆಂಡ್‌ ವಿರುದ್ಧದ ಸರಣಿ ಆಡಿ ಏಷ್ಯಾ ಕಪ್‌ ಆಡುತ್ತಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಿಲಕ್‌ ವಮಾ ಸೂಕ್ತ ಆಟಗಾರ

ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದಶನ ತೋರಿದ ತಿಲಕ್ ವರ್ಮಾಗೆ ಏಷ್ಯಾಕಪ್‌ ತಂಡದಲ್ಲಿ ಸ್ಥಾನ ನೀಡಿದರೆ ಉತ್ತಮ. ಏಕೆಂದರೆ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ತೋಪಡಿಸಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿಯೂ ನಿರಿಕ್ಷಿತ ಮಟ್ಟದ ಬ್ಯಾಟವಿಂಗ್‌ ಮಾಡಿದ್ದಾರೆ. ಜತೆಗೆ ನಾಲ್ಕನೇ ಕ್ರಮಾಂಕಕ್ಕೂ ಹಾಹೂ ಎಡಗೈ ಆಟಗಾರನಾಗಿರುವ ಕಾರಣ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಇದನ್ನೂ ಓದಿ Asia Cup: ಏಷ್ಯಾ ಕಪ್​ಗೆ ಇಂದು ಭಾರತ ತಂಡ ಪ್ರಕಟ; ಸ್ಟಾರ್​ ಆಟಗಾರರ ಕಮ್​ಬ್ಯಾಕ್​

ವಿಶ್ವಕಪ್‌ನಲ್ಲಿ 4ನೇ ಸ್ಥಾನಕ್ಕೆ ಕೊಹ್ಲಿ ಸೂಕ್ತ

ನಾಲ್ಕನೇ ಕ್ರಮಾಂಕದಲ್ಲಿ ಕೊಹ್ಲಿಯ ದಾಖಲೆಯನ್ನು ಉಲ್ಲೇಖಿಸಿ, ಸ್ಟಾರ್ ಭಾರತೀಯ ಬ್ಯಾಟರ್ ಏಳು ಶತಕಗಳೊಂದಿಗೆ 55.21 ಸರಾಸರಿಯಲ್ಲಿ 1767 ರನ್ ಗಳಿಸಿದರು, ಶಾಸ್ತ್ರಿ ಅವರು ಅಗ್ರ ನಾಲ್ಕು ಆಟಗಾರರು ಹೊಂದಿಕೊಳ್ಳಲು ಬಯಸಿದ್ದರು ಮತ್ತು ಕೊಹ್ಲಿ ತಂಡಕ್ಕೆ ಅಗತ್ಯವಿರುವಲ್ಲೆಲ್ಲಾ ಬ್ಯಾಟಿಂಗ್ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದರು.

ರವಿಶಾಸ್ತ್ರಿ ಪ್ರಕಟಿಸಿದ ತಂಡ

ಶುಭಮನ್‌ ಗಿಲ್‌, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ತಿಲಕ್​ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಕುಲ್‌ದೀಪ್‌ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್‌ ಬುಮ್ರಾ.

Exit mobile version