Site icon Vistara News

Asia Cup: ಏಷ್ಯಾಕಪ್‌ಗೆ ತಂಡದ ಪಟ್ಟಿ ಫೈನಲ್‌; ಸಂಜು ಸ್ಯಾಮ್ಸನ್‌ ಔಟ್‌

Sanju Samson Indian cricketer

ಮುಂಬಯಿ: ಏಷ್ಯಾಕಪ್‌ ಕ್ರಿಕೆಟ್‌(Asia Cup) ಟೂರ್ನಿಗೆ ಭಾರತ ತಂಡದ ಆಟಗಾರರ(Team India) ಪಟ್ಟಿ ಫೈನಲ್‌ ಆಗಿದ್ದು ಆಗಸ್ಟ್‌ 20ಕ್ಕೆ ಅಧಿಕೃತವಾಗಿ ಪ್ರಕಟಿಸಲು ಬಿಸಿಸಿಐ(BCCI) ನಿರ್ಧರಿಸಿದೆ. ಈ ಪಟ್ಟಿ ಪ್ರಕಟಕ್ಕೂ ಮುನ್ನವೇ ಸಂಜು ಸ್ಯಾಮ್ಸನ್‌(sanju samson) ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಟೈಮ್ಸ್‌ ಆಪ್‌ ಇಂಡಿಯಾ ಈ ಕುರಿತು ವರದಿ ಮಾಡಿದ್ದು, ಸಂಜು ಅವರು ಹೊರಬಿದ್ದಿರುವುದಾಗಿ ಖಚಿತಪಡಿಸಿದೆ.

ಸಂಜು ಔಟ್‌

ಗುರುವಾರದಂದು ಏಷ್ಯಾ ಕಪ್‌ ತಂಡದ ಕುರಿತು ವರದಿ ಮಾಡಿರುವ ಟೈ,ಮ್ಸ್‌ ಆಫ್‌ ಇಂಡಿಯಾ, ಕನ್ನಡಿಗ ಕೆ.ಎಲ್‌.ರಾಹುಲ್‌(kl rahul) ಮತ್ತು ಶ್ರೇಯಸ್‌ ಅಯ್ಯರ್‌(shreyas iyer) ಅವರು ಶೇ.100 ಪ್ರತಿಶತ ಫಿಟ್‌ ಆಗಿದ್ದು ಉಭಯ ಆಟಗಾರರು ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿ ಮಾಡಿದೆ. ಇನ್ನು ಇಶಾನ್‌ ಕಿಶನ್‌ ಅವರು ಹೆಚ್ಚುವರಿ ಕೀಪರ್‌ ಆಗಿ ಆಯ್ಕೆಯಾದ ಕಾರಣ ಸಂಜು ಅವರನ್ನು ಕೈಬಿಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಆಯ್ಕೆ ಸಮಿತಿ ಗಮನ ಸೆಳೆಯದ ಸಂಜು

ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದಶನ ತೋರುದರೂ ಟೀಮ್‌ ಇಂಡಿಯಾದಲ್ಲಿ ಸಂಜು ಅವರಿಗೆ ಸರಿಯಾದ ಅವಕಾಶ ನೀಡುತ್ತಿಲ್ಲ ಎಂಬ ಕೂಗೂ ಹಲವು ಬಾರಿ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ವಿಂಡೀಸ್‌ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಅರ=ವರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರು ಇಲ್ಲಿ ಆಡಿದ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾಗಿದ್ದರು. ಕೇವಲ ಒಂದು ಅಥವಾ ಎರಡು ಸಿಕ್ಸರ್‌ ಬಾರಿಸಿ ಪೆಲಿಯನ್‌ ಪರೇಡ್‌ ನಡಿಸಿದ್ದರು. ಹೀಗಾಗಿ ಅವರನ್ನು ಏಷ್ಯಾಕಪ್‌ಗೆ ಪರಿಗಣನೆ ಮಾಡಿಲ್ಲ ಎಂದು ತಿಳಿದುಬಂದಿದೆ. ಒಂದೊಮ್ಮೆ ರಾಹುಲ್‌ ಅವರು ಆಡದೇ ಇದ್ದರೆ ಆಗ ಇಶಾನ್‌ ಕಿಶನ್‌ ಜತೆ ಹೆಚ್ಚುವರಿ ಕೀಪರ್‌ ಆಗಿ ಆಯ್ಕೆಯಾಗುವ ಸಾಧ್ಯತೆ ಇತ್ತು. ಆದರೆ ರಾಹುಲ್‌ ಫಿಟ್‌ ಆಗಿರುವ ಕಾರಣ ಇದು ಅಸಾಧ್ಯ.

ವಿಂಡೀಸ್‌ ವಿರುದ್ಧ ಮೂರು ಟಿ20 ಪಂದ್ಯ ಆಡಿದ್ದ ಸಂಜು ಸ್ಯಾಮ್ಸನ್‌ ಕ್ರಮವಾಗಿ 12, 7 ಮತ್ತು 13 ರನ್‌ಗಳನ್ನು ಗಳಿಸಿದ್ದರು. ಏಕದಿನ ಸರಣಿಯ 2 ಪಂದ್ಯಗಳಲ್ಲಿ ಆಡಿ 9 ಮತ್ತು 51 ರನ್‌ ಕೊಡುಗೆ ನೀಡಿದ್ದರು. ಅವರ ಮೇಲಿಟ್ಟಿದ್ದ ನಿರೀಕ್ಷೆಗೆ ತಕ್ಕ ಆಟ ಕಂಡು ಬಾರದ ಕಾರಣ ಆಯ್ಕೆ ಸಮಿತಿ ಅವರ ಆಯ್ಕೆಗೆ ಹಿಂದೇಟು ಹಾಕಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ Asia Cup: ಭಾರತ-ಪಾಕ್‌ ಏಷ್ಯಾಕಪ್‌ ಪಂದ್ಯದ ಟಿಕೆಟ್‌ ಬುಕಿಂಗ್‌ಗೆ ಕ್ಷಣಗಣನೆ; ಇಲ್ಲಿ ಬುಕ್‌ ಮಾಡಿ

ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವರಿಗೂ ಏಷ್ಯಾ ಕಪ್‌ನಲ್ಲಿ ಅವಕಾಶ ಸಿಗಲಿದೆ ಎಂದು ತಿಳಿದುಬಂದಿದೆ. ಗಾಯದಿಂದ ಚೇತರಿಕೆ ಕಂಡಿರುವ ಅವರು ಐರ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಳ್ಳ.ಲಿದ್ದಾರೆ. ಏಷ್ಯಾ ಕಪ್‌ನಲ್ಲಿ ಹೆಚ್ಚುವರಿ ಬೌಲರ್‌ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Exit mobile version