Site icon Vistara News

Badminton: ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌; ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದ ಭಾರತ

pv sindhu

#image_title

ನವದೆಹಲಿ: ದುಬೈನಲ್ಲಿ ನಡೆಯಲಿರುವ ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್(Badminton) ಚಾಂಪಿಯನ್‌ಶಿಪ್‌ನಲ್ಲಿ(Badminton Asia Mixed Team Championships 2023) ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪಿನಲ್ಲಿರುವ ಉಳಿದ ತಂಡಗಳೆಂದರೆ ಮಲೇಷ್ಯಾ, ಯುಎಇ ಮತ್ತು ಕಜಕಿಸ್ತಾನ. ಈ ಟೂರ್ನಿ ಫೆಬ್ರವರಿ 14ರಿಂದ 19ರ ವರೆಗೆ ನಡೆಯಲಿದೆ.

ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಅವರ ಸಾರಥ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಟೂರ್ನಿಯಲ್ಲಿ 17 ತಂಡಗಳು ಭಾಗವಹಿಸಲಿವೆ. ಕೊರೊನಾ ಸಂಕಷ್ಟದಿಂದ ಈ ಪಂದ್ಯಾವಳಿಯನ್ನು 2021 ರಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲ.

ಹಾಲಿ ಚಾಂಪಿಯನ್ ಚೀನ, ಕೊರಿಯಾ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎಲ್ಲ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಿದ್ದು, ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಹೋಗಲಿವೆ. ಪ್ರತಿ ಪಂದ್ಯದಲ್ಲಿ ಎರಡು ಸಿಂಗಲ್ಸ್ ಹಾಗೂ ಮೂರು ಡಬಲ್ಸ್ ಪಂದ್ಯಗಳು ನಡೆಯಲಿವೆ.

ಭಾರತ ತಂಡದಲ್ಲಿ ಪಿ.ವಿ ಸಿಂಧು, ಆಕರ್ಷಿ ಕಶ್ಯಪ್, ಲಕ್ಷ್ಯ ಸೇನ್, ಎಚ್‌.ಎಸ್ ಪ್ರಣಯ್​, ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಕೃಷ್ಣ ಪ್ರಸಾದ್ ಗಾರ್ಗ್ ಮತ್ತು ವಿಷ್ಣುವರ್ಧನ್ ಗೌಡ್ ಪಿ, ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್, ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಕಾಣಿಸಿಕೊಂಡಿದ್ದಾರೆ. ಆದರೆ ಗಾಯಗೊಂಡಿರುವ ಸಾತ್ವಿಕ್‌ ಸಾಯಿರಾಜ್ ಮತ್ತು ಅವರ ಜತೆಗಾರ ಚಿರಾಗ್ ಶೆಟ್ಟಿ ಈ ಟೂರ್ನಿಯಲ್ಲಿ ಆಡುವುದು ಇನ್ನಷ್ಟೇ ಖಚಿತವಾಗಬೇಕಿದೆ.

ಇದನ್ನೂ ಓದಿ Malaysia Open | ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌; ಸೆಮಿಫೈನಲ್​ನಲ್ಲಿ ಸೋಲು ಕಂಡ ಸಾತ್ವಿಕ್‌-ಚಿರಾಗ್‌ ಜೋಡಿ!

ಭಾರತವು ಈ ಟೂರ್ನಿಯಲ್ಲಿ 2017 ರಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶ ಪಡೆದಿದ್ದೇ ಇದುವರೆಗಿನ ಉತ್ತಮ ಸಾಧನೆಯಾಗಿದೆ. ಈ ಬಾರಿ ಭಾರತೀಯ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

Exit mobile version