Site icon Vistara News

20 ಕಿ.ಮೀ ರೇಸ್ ವಾಕ್​ನಲ್ಲಿ ಪ್ರಿಯಾಂಕಾಗೆ ಬೆಳ್ಳಿ, ವಿಕಾಸ್‌ಗೆ ಕಂಚಿನ ಪದಕ

Priyanka Goswami in the women’s 20km race walk in Asian Athletics Championships

ಬ್ಯಾಂಕಾಕ್: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(Asian Athletics Championships) ಭಾರತದ ಪ್ರಿಯಾಂಕಾ ಗೋಸ್ವಾಮಿ ಹಾಗೂ ವಿಕಾಸ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ 20 ಕಿ.ಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಉಭಯ ಆ್ಯತ್ಲೀಟ್​ಗಳು ಈ ಸಾಧನೆ ಮಾಡಿದರು.

ಮಹಿಳೆಯರ ವಿಭಾಗದ ರೇಸ್ ವಾಕ್ ಸ್ಪರ್ಧೆಯಲ್ಲಿ 27 ವರ್ಷದ ಪ್ರಿಯಾಂಕಾ ಅವರು 1 ಗಂಟೆ 34 ನಿಮಿಷ ಮತ್ತು 24 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಎರಡನೇ ಸ್ಥಾನ ಪಡೆದರು. ಚೀನಾದ ಯಾಂಗ್ ಲಿಯುಜಿಂಗ್ ಮೊದಲ ಸ್ಥಾನ ಪಡೆದರು.

ಪುರುಷರ 20 ಕಿಮೀ ಸ್ಪರ್ಧೆಯಲ್ಲಿ ವಿಕಾಸ್ ಅವರು 1 ಗಂಟೆ 29 ನಿಮಿಷ 32 ಸೆಂಕೆಟ್​ನಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಪಡೆದರು. ಜಪಾನ್‌ನ ಯುಟಾರೊ ಮುರಯಾಮಾ (1:24:40) ಚಿನ್ನ ಗೆದ್ದರೆ, ಚೀನಾದ ವಾಂಗ್ ಕೈಹುವಾ (1:25:29) ಬೆಳ್ಳಿ ಪದಕ ಪಡೆದರು. ಆದರೆ ರಾಷ್ಟ್ರೀಯ ದಾಖಲೆ ಹೊಂದಿದ ಅಕ್ಷದೀಪ್ ಸಿಂಗ್ ಅವರನ್ನು ತೀರ್ಪುಗಾರರು ಅನರ್ಹಗೊಳಿಸಿದ್ದರಿಂದ ಅವರಿಗೆ ಓಟವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಶನಿವಾರ ನಡೆದ 4 x400 ಮೀಟರ್ ಮಿಶ್ರ ರಿಲೇಯಲ್ಲಿ ಭಾರತ ತಂಡ(Asian Athletics Championships) ಜಪಾನ್ ಮತ್ತು ಶ್ರೀಲಂಕಾ ತಂಡವನ್ನು ಹಿಂದಿಕ್ಕಿ ಹಿಂದಿಕ್ಕಿ ಚಿನ್ನದ ಪದಕ ಗೆದ್ದಿತ್ತು. ರಾಜೇಶ್ ರಮೇಶ್, ಐಶ್ವರ್ಯಾ, ಮಿಶ್ರಾ, ಅಮೋಜ್ ಜಾಕೋಬ್ ಮತ್ತು ಶುಭಾ ವೆಂಕಟೇಶನ್ ಅವರ ರಿಲೇ ತಂಡವು 3.14.70 ರಾಷ್ಟ್ರೀಯ ದಾಖಲೆಯನ್ನು ಮುರಿದಿತ್ತು. 2018ರ ಏಷ್ಯನ್ ಗೇಮ್ಸ್ ನಲ್ಲಿ 3.15.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆ ಮಾಡಲಾಗಿತ್ತು.

ಭಾರತದ ಸರ್ವೇಶ್ ಎ ಕುಶಾರೆ ಹೈಜಂಪ್​ನಲ್ಲಿ 2.26 ಮೀಟರ್ ಎತ್ತರ ಜಿಗಿದು ಬೆಳ್ಳಿ ಗೆದ್ದರೆ, ತೇಜಸ್ವಿನ್ ಶಂಕರ್ ಪದಕದ ಸ್ಪರ್ಧೆಯಿಂದ ಹೊರಗುಳಿದರು. ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಸ್ವಪ್ನಾ ಬರ್ಮನ್ 5840 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಉಜ್ಬೇಕಿಸ್ತಾನದ ಎಕಟೆರಿನಾ ವೊರೊನಿನಾ 6098 ಅಂಕಗಳೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ Asian Games: ಏಷ್ಯನ್​ ಗೇಮ್ಸ್​ನಿಂದ ಹೊರಬಿದ್ದ ಹಿಮಾ ದಾಸ್‌

ಮುರಳಿ ಶ್ರೀಶಂಕರ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಟಿಕೆಟ್​ ಗಿಟ್ಟಿಸಿಕೊಂಡರು. ಚೈನೀಸ್ ತೈಪೆಯ ಯು ಟ್ಯಾಂಗ್ ಲಿನ್ (+0.3) 8.40 ಮೀಟರ್ (+0.3) ಗುರಿ ತಲುಪಿ ಚಿನ್ನ ಗೆದ್ದರೆ, ಶ್ರೀಶಂಕರ್ 8.37 ಮೀ (-1.1) ಜಿಗಿದು ರಜತ ಪದಕ ಗೆದ್ದರು. ಚೀನಾದ ಮಿಂಗ್ಕುನ್ ಜಾಂಗ್ 8.08 ಮೀಟರ್ ಜಿಗಿದು ಮೂರನೇ ಸ್ಥಾನ ಪಡೆದರು. ಕಾಮನ್ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತರಾಗಿರುವ ಅವರು ಸ್ಪರ್ಧೆಯಲ್ಲಿ 8 ಮೀಟರ್​ಗಿಂತ ಎತ್ತರ ಐದು ಜಿಗಿತಗಳನ್ನು ಜಗಿದರು. ಈ ಮೂಲಕ 2024 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Exit mobile version