Site icon Vistara News

Asian Champions: 4ನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡಕ್ಕೆ ಭರ್ಜರಿ ನಗದು ಬಹುಮಾನ ಘೋಷಿಸಿದ ಸಿಎಂ ಸ್ಟಾಲಿನ್

asian champions trophy hockey Final

ಚೆನ್ನೈ: ಶನಿವಾರ ರಾತ್ರಿ ಇಲ್ಲಿ ನಡೆದ ಅತ್ಯಂತ ರೋಚಕ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ(Asian Champions Trophy Hockey) ಪಂದ್ಯಾವಳಿಯ ಫೈನಲ್​ನಲ್ಲಿ ಮಲೇಷ್ಯಾ ವಿರುದ್ಧ 4-3 ಗೋಲ್​ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಹಾಕಿ ತಂಡಕ್ಕೆ ತಮಿಳುನಾಡು ಸರ್ಕಾರ ಭರ್ಜರಿ ಮೊತ್ತದ ಘೋಷಣೆ ಮಾಡಿದೆ. ಮುಖ್ಯಮಂತ್ರಿ(Chief Minister of Tamil Nadu) ಎಂಕೆ ಸ್ಟಾಲಿನ್(M. K. Stalin)​ ಅವರು 1.1 ಕೋಟಿ.ರೂ ಮೊತ್ತವನ್ನು ಘೋಷಿಸಿದ್ದಾರೆ.

ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯ ಹೊರತಾಗಿಯೂ ಅಂತಿಮ ಹಂತದಲ್ಲಿ ಶಕ್ತಿ ಮೀರಿ ತೋತಿದ ಪ್ರದರ್ಶನದಿಂದ ಭಾರತ ಗೆದ್ದು ಟೂರ್ನಿಯಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಸಾಧನೆ ಮಾಡಿತು. ಇದೇ ವೇಳೆ ಬದ್ಧ ಎದುರಾಳಿ ಪಾಕಿಸ್ತಾನವನ್ನು ಹಿಂದಿಕ್ಕಿತು. ಪಾಕ್​ ಮತ್ತು ಭಾರತ ಮೂರು ಬಾರಿ ಚಾಂಪಿಯನ್​ ಆಗಿ ಜಂಟಿ ದಾಖಲೆ ಹೊಂದಿತ್ತು. ಆದರೆ ಶನಿವಾರ ಭಾರತ ಗೆಲುವು ಕಂಡ ಕಾರಣ ಪಾಕ್​ ಭಾರತಕ್ಕಿಂತ ಒಂದು ಸ್ಥಾನ ಕೆಳಗಿಳಿಯಿತು.

ಹಾಕಿ ಇಂಡಿಯಾದಿಂದಲೂ ನಗದು ಬಹುಮಾನ

ನಾಲ್ಕನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತ ಹಾಕಿ ತಂಡದ ಆಟಗಾರರಿಗೆ ತಮಿಳುನಾಡು ಸರ್ಕಾರ ನೀಡಿದ ಬಹುಮಾನದ ಹೊರತಾಗಿಯೂ ಹಾಕಿ ಇಂಡಿಯಾ(hockey india) ಎಲ್ಲ ಆಟಗಾರರಿಗೂ ತಲಾ 3 ಲಕ್ಷ ಬಹುಮಾನ ಮೊತ್ತವನ್ನು ಘೋಷಣೆ ಮಾಡಿದೆ.

ಮೋದಿ ಸೇರಿ ಹಲವು ಗಣ್ಯರಿಂದ ಮೆಚ್ಚುಗೆ

ಪ್ರಶ್ತಸ್ತಿ ಗೆದ್ದ ಭಾರತ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. “ಕಠಿಣ ಶ್ರಮ, ದೃಢಸಂಕಲ್ಪಕ್ಕೆ ಸಿಕ್ಕ ಗೆಲುವು ಇದಾಗಿದೆ. ದಣಿವರಿಯದ ಹೋರಾಟ, ಕಠಿಣ ತರಬೇತಿಯಿಂದ ತಂಡ ತೋರಿದ ಅಸಾಧಾರಣ ಪ್ರದರ್ಶನಕ್ಕೆ ರಾಷ್ಟ್ರವೇ ಹೆಮ್ಮೆ ಪಡುತ್ತಿದೆ. ಹಾಕಿ ಟೀಮ್​ ಇಂಡಿಯಾದ ಭವಿಷ್ಯದ ಸವಾಲುಗಳಿಗೆ ಒಳ್ಳೆಯದಾಗಲಿ” ಎಂದು ಟ್ವೀಟ್​ ಮಾಡಿದ್ದಾರೆ.

ಕೇಂದ್ರ ಕ್ರೀಡಾ ಸಚಿನ ಅನುರಾಗ್​ ಠಾಕೂರ್​ ಕೂಡ ಫೈನಲ್​ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಪಂದ್ಯ ಗೆದ್ದ ಬಳಿಕ ತಂಡದ ಆಟಗಾರರ ಈ ಪರಿಶ್ರಮವನ್ನು ಹೊಗಳಿದ್ದಾರೆ. ಜತೆಗೆ ಏಷ್ಯನ್​ ಗೇಮ್ಸ್​ನಲ್ಲಿಯೂ ಭಾರತ ಮತ್ತೊಂದು ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ ಏಷ್ಯನ್​ ಹಾಕಿ; ಕೊರಿಯಾವನ್ನು ಮಣಿಸಿ ಸೆಮಿಗೆ ಲಗ್ಗೆಯಿಟ್ಟ ಭಾರತ

ಭಾರತ ತಂಡ

ಮಿಡ್‌ಫೀಲ್ಡರ್‌ಗಳು: ಹರ್ಮನ್​ಪ್ರೀತ್​ ಸಿಂಗ್​(ನಾಯಕ), ಹಾರ್ದಿಕ್ ಸಿಂಗ್ (ಉಪನಾಯಕ), ಜರ್ಮನ್‌ಪ್ರೀತ್ ಸಿಂಗ್, ಸುಮಿತ್, ಜುಗರಾಜ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್. ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ ಮತ್ತು ಶಂಶೇರ್ ಸಿಂಗ್. ಫಾರ್ವರ್ಡ್‌ಗಳು: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸುಖಜೀತ್ ಸಿಂಗ್, ಎಸ್ ಕಾರ್ತಿ. ಗೋಲ್​ ಕೀಪರ್​: ಪಿ.ಆರ್​ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.

Exit mobile version