Site icon Vistara News

Asian Champions hockey: ಅಟ್ಟಾರಿ-ವಾಘಾ ಗಡಿ ದಾಟಿ ಬಂದ ಪಾಕ್ ಹಾಕಿ ಆಟಗಾರರು

Pakistan Hockey Team

ಮುಂಬಯಿ: ಗುರುವಾರದಿಂದ ಆರಂಭಗೊಳ್ಳಲಿರುವ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ(Asian Champions Trophy hockey 2023) ಹಾಕಿ ಟೂರ್ನಿಗೆ ಪಾಕಿಸ್ತಾನ ತಂಡ(Pakistan hockey team) ಭಾರತ ತಲುಪಿದೆ. ಅಟ್ಟಾರಿ-ವಾಘಾ ಗಡಿ(Attari-Wagah border) ಮೂಲಕ ಪಾಕ್​ ತಂಡ ಭಾರತಕ್ಕೆ ಆಗಮಿಸಿದೆ. ಸದ್ಯ ಚೆನ್ನೈ ತಲುಪಿರುವ ಪಾಕ್​ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ.

ಭಾರತದ ಆಟಗಾರರು ಕೂಡಾ ಚೆನ್ನೈಯಲ್ಲಿ ಬೀಡು ಬಿಟ್ಟಿದ್ದಾರೆ. ಭಾರತ ಮತ್ತು ಪಾಕ್​ ಹೈವೋಲ್ಟೆಜ್ ಕದನ ಆಗಸ್ಟ್ 9ಕ್ಕೆ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಚೀನಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಆಗಸ್ಟ್ 12ರಂದು ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಭಾರತ, ಚೀನಾ, ಜಪಾನ್‌, ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಪ್ರಶಸ್ತಿಗೆ ಸೆಣಸಾಡಲಿವೆ.

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಮೊದಲು ಮಹಿಳೆಯರಿಗಾಗಿ ಆರಂಭಿಸಿಲಾಯಿತು. ಈ ಟೂರ್ನಿ ಯಶಸ್ಸು ಕಂಡ ಬಳಿಕ ಮರು ವರ್ಷವೇ ಪುರುಷರಿಗೂ ಈ ಟೂರ್ನಿಯನ್ನು ಆಯೋಜಿಸಲಾಯಿತು. ಏಷ್ಯಾದ ಅಗ್ರ 6 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಭಾರತ ಮತ್ತು ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

ಇದನ್ನೂ ಓದಿ World Cup 2023 : ಒಪ್ಪಂದಕ್ಕೆ ಸಹಿ ಹಾಕಲು ಐಸಿಸಿಯಿಂದ ಕಾಸು ಕೇಳಿದ ಪಾಕ್​ ತಂಡ! ಇದೆಂಥಾ ದುರಾಸೆ?

ಭಾರತ ತಂಡ: ಮಿಡ್‌ಫೀಲ್ಡರ್‌ಗಳು: ಹಾರ್ದಿಕ್ ಸಿಂಗ್ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್. ಫಾರ್ವರ್ಡ್‌ಗಳು: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸುಖಜೀತ್ ಸಿಂಗ್, ಎಸ್ ಕಾರ್ತಿ

ಪಾಕಿಸ್ತಾನ ತಂಡ: ಮಹಮ್ಮದ್ ಉಮರ್ ಭಟ್‌ (ನಾಯಕ), ಅಕ್ಮಲ್ ಹುಸೇನ್, ಅಬ್ದುಲ್ಲಾ ಇಶ್ತಿಯಾಕ್ ಖಾನ್, ಮಹಮ್ಮದ್ ಅಬ್ದುಲ್ಲಾ, ಮಹಮ್ಮದ್ ಸುಫ್ಯಾನ್ ಖಾನ್, ಎಹ್ತ್ಶಾಮ್ ಅಸ್ಲಾಮ್, ಒಸಾಮಾ ಬಶೀರ್, ಅಕೀಲ್ ಅಹ್ಮದ್, ಅರ್ಷದ್‌ ಲಿಯಾಕತ್, ಮಹಮ್ಮದ್‌ ಇಮಾದ್, ಅಬ್ದುಲ್ ಹನನ್ ಶಾಹಿದ್, ಜಕಾರಿಯಾ ಹಯಾತ್, ರಾಣಾ ಅಬ್ದುಲ್ ವಹೀದ್ ಅಶ್ರಫ್ (ವಿಸಿ), ರೋಮನ್, ಮಹಮ್ಮದ್ ಮುರ್ತಾಜ ಯಾಕೂಬ್, ಮಹಮ್ಮದ್ ಶಾಝೈಬ್ ಖಾನ್, ಅಫ್ರಾಜ್, ಅಬ್ದುಲ್ ರೆಹಮಾನ್. ಹೆಚ್ಚುವರಿ ಆಟಗಾರರಾರು: ಅಲಿ ರಝಾ, ಮುಹಮ್ಮದ್ ಬಾಕಿರ್, ಮುಹಮ್ಮದ್ ನದೀಮ್ ಖಾನ್, ಅಬ್ದುಲ್ ವಹಾಬ್, ವಕಾರ್ ಅಲಿ, ಮುಹಮ್ಮದ್ ಅರ್ಸಲಾನ್ ಮತ್ತು ಅಬ್ದುಲ್ ಕಯ್ಯುಮ್.

Exit mobile version