Site icon Vistara News

Asian Games 2023: ಏಷ್ಯನ್‌ ಗ್ರೇಮ್ಸ್‌ ತಂಡದಲ್ಲಿ ಕೊಹ್ಲಿ, ರೋಹಿತ್‌, ಪಾಂಡ್ಯ, ರಾಹುಲ್‌ ಇಲ್ಲ; ಬಿಸಿಸಿಐ ದಿಟ್ಟ ನಿರ್ಧಾರ

Virat Kohli And Rohit Sharma

Asian Games 2023: No Rohit, Kohli, Hardik, Jadeja in India's squad; BCCI takes major decision

ಮುಂಬೈ: ಚೀನಾದ ಹಾಂಗ್ಜೌನಲ್ಲಿ ಸೆಪ್ಟೆಂಬರ್‌ನಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games 2023) ಪಾಲ್ಗೊಳ್ಳಲಿರುವ ಭಾರತ ಕ್ರಿಕೆಟ್‌ ತಂಡದಲ್ಲಿ ನಾಯಕ ರೋಹಿತ್‌ ಶರ್ಮಾ, ಉಪ ನಾಯಕ ಹಾರ್ದಿಕ್‌ ಪಾಂಡ್ಯ, ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ಕೆ.ಎಲ್.‌ ರಾಹುಲ್‌ ಸೇರಿ ಪ್ರಮುಖ ಆಟಗಾರರು ಇರುವುದಿಲ್ಲ. ಏಷ್ಯನ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿರುವ ಭಾರತ ತಂಡದಲ್ಲಿ ಸ್ಟಾರ್‌ ಆಟಗಾರರು ಇಲ್ಲದಿದ್ದರೂ ತಂಡವನ್ನು ಕಳುಹಿಸುವ ದಿಸೆಯಲ್ಲಿ ಬಿಸಿಸಿಐ ಇಂತಹದ್ದೊಂದು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ.

ಮುಂಬೈನಲ್ಲಿ ನಡೆದ ಬಿಸಿಸಿಐ ಸಭೆಯಲ್ಲಿ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚೀನಾದ ಹಾಂಗ್ಜೌನಲ್ಲಿ ಸೆಪ್ಟೆಂಬರ್‌ 23ರಿಂದ ಅಕ್ಟೋಬರ್‌ 8ರವರೆಗೆ ಏಷ್ಯನ್‌ ಗೇಮ್ಸ್‌ ನಡೆಯಲಿದೆ. ಮತೊಂದೆಡೆ, ಅಕ್ಟೋಬರ್‌ 5ರಿಂದ ಏಕದಿನ ವಿಶ್ವಕಪ್‌ ಆರಂಭವಾಗಲಿದೆ. ಅಕ್ಟೋಬರ್‌ 8ರಂದು ಭಾರತ ತಂಡವು ವಿಶ್ವಕಪ್‌ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಹೀಗಾಗಿ, ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡದ ಆಟಗಾರರನ್ನು ಹೊರತುಪಡಿಸಿ ಮತ್ತೊಂದು ತಂಡವು ಚೀನಾಗೆ ಪ್ರಯಾಣ ಬೆಳೆಸಲಿದೆ. ಆದಾಗ್ಯೂ, ಮಹಿಳೆಯರ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ತಂಡವೇ ಚೀನಾಗೆ ಪ್ರಯಾಣ ಬೆಳೆಸಲಿದೆ.

ಏಷ್ಯನ್‌ ಗೇಮ್ಸ್‌ ತಂಡದಲ್ಲಿ ಇವರು ಇರಲ್ಲ

ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿರುವ 18 ಆಟಗಾರರು ಏಷ್ಯನ್‌ ಗೇಮ್ಸ್‌ನಲ್ಲಿ ಆಡುವುದಿಲ್ಲ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌, ವೇಗಿಗಳಾದ ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಆಲ್‌ರೌಂಡರ್‌ ರವೀಂದ್ರ ಜಡೇಜಾ ಸೇರಿ ಪ್ರಮುಖ ಆಟಗಾರರು ಇರುವುದಿಲ್ಲ.

ಯಾರಿಗೆಲ್ಲ ಸಿಗಲಿದೆ ಸ್ಥಾನ?

ಏಕದಿನ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯದ ಹಿರಿಯ ಆಟಗಾರರು ಹಾಗೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಭರವಸೆ ಮೂಡಿಸಿರುವ ಯುವ ಆಟಗಾರರು ಏಷ್ಯನ್‌ ಗೇಮ್ಸ್‌ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಅನುಭವಿ ಆಟಗಾರ ಶಿಖರ್‌ ಧವನ್‌ ಅವರು ಏಷ್ಯನ್‌ ಗೇಮ್ಸ್‌ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ರಿಂಕು ಸಿಂಗ್‌, ಜಿತೇಶ್‌ ಶರ್ಮಾ, ಮುಕೇಶ್‌ ಸಿಂಗ್‌ ಸೇರಿ ಹಲವು ಯುವ ಆಟಗಾರರು ಕೂಡ ಹಾಂಗ್ಜೌಗೆ ಟಿಕೆಟ್‌ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: Asian Games 2023 : ಏಷ್ಯನ್​ ಗೇಮ್ಸ್​ ತಂಡಕ್ಕೆ ಶಿಖರ್​ ಧವನ್​ ನಾಯಕ?

ಬಿಸಿಸಿಐ ತೆಗೆದುಕೊಂಡ ಪ್ರಮುಖ ನಿರ್ಧಾರಗಳು

ಇವುಗಳ ಜತೆಗೆ, ವಿದೇಶದಲ್ಲಿ ನಡೆದ ಟಿ-20 ಲೀಗ್‌ಗಳಲ್ಲಿ ಭಾಗವಹಿಸಿದ ಆಟಗಾರರಿಗಾಗಿ (ನಿವೃತ್ತರಾದವರು ಸೇರಿ) ನೀತಿ ರಚನೆ, ಐಪಿಎಲ್‌ನಲ್ಲಿ ಇರುವಂತೆ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲೂ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಅಳವಡಿಕೆ, ಇದೇ ಟೂರ್ನಿಯ ವೇಳೆ ಒಂದು ಓವರ್‌ನಲ್ಲಿ ಗರಿಷ್ಠ ಎರಡು ಬೌನ್ಸರ್‌ ಎಸೆಯುವ ಅವಕಾಶ, ದೇಶದ ಪ್ರಮುಖ ಸ್ಟೇಡಿಯಂಗಳ ನವೀಕರಣ ಸೇರಿ ಹಲವು ಪ್ರಮುಖ ನಿರ್ಧಾರಗಳನ್ನು ಬಿಸಿಸಿಐ ತೆಗೆದುಕೊಂಡಿದೆ.

Exit mobile version