Site icon Vistara News

Asian Games: ಬಜರಂಗ್,ವಿನೇಶ್​ ನೇರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌​ ಮೆಟ್ಟಿಲೇರಿದ ಕುಸ್ತಿಪಟುಗಳು

Bajrang Punia and Vinesh Phogat during a press conference

ನವದೆಹಲಿ: ಏಷ್ಯನ್‌ ಗೇಮ್ಸ್​ಗೆ ಬಜರಂಗ್‌ ಪೂನಿಯಾ(Bajrang Punia) ಹಾಗೂ ವಿನೇಶ್‌ ಫೋಗಟ್‌ಗೆ(Vinesh Phogat) ನೇರ ಅರ್ಹತೆ ನೀಡಿದ್ದಕ್ಕೆ ಹಲವು ಕುಸ್ತಿಪಟುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ತಾತ್ಕಾಲಿಕ ಸಮಿತಿಯ ಆಯ್ಕೆಯ ತಾರತಮ್ಯವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಜತೆಗೆ ಹರ್ಯಾಣದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.

ಭಾರತೀಯ ಕುಸ್ತಿ ಒಕ್ಕೂಟದ(WFI) ನಿರ್ಗಮಿತ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್​ಭೂಷಣ್​ ಶರಣ್​ ಸಿಂಗ್​(Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದ, ಬಜರಂಗ್ ಪೂನಿಯಾ 65 ಕೆ.ಜಿ. ವಿಭಾಗದಲ್ಲಿ ಮತ್ತು ವಿನೇಶ್ ಫೋಗಟ್ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಏಷ್ಯನ್​ ಗೇಮ್ಸ್(Asian Games 2023)​ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಯಾವುದೇ ಟ್ರಯಲ್ಸ್​ ಸ್ಪರ್ಧಿಸುವಂತೆ ಮಂಗಳವಾರ ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ತಾತ್ಕಾಲಿಕ ಸಮಿತಿ ನಿರ್ಧಾರ ಪ್ರಕಟಿಸಿತ್ತು. ಆದರೆ ಪ್ರತಿಭಟನೆಯಲ್ಲಿ ತೊಡಗಿದ್ದ ಉಳಿದ ನಾಲ್ವರು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಸತ್ಯವರ್ತ್ ಕಡಿಯಾನ್, ಸಂಗೀತಾ ಫೋಗಟ್ ಮತ್ತು ಜಿತೇಂದ್ರ ಕಿನ್ಹಾ ಅವರಿಗೆ ನೇರ ಪ್ರವೇಶವನ್ನು ನೀಡಿರಲಿಲ್ಲ. ಇದೀಗ ಬಜರಂಗ್‌ ಪೂನಿಯಾ ಹಾಗೂ ವಿನೇಶ್ ಆಯ್ಕೆಯಲ್ಲಿನ ತಾರತಮ್ಯ ಪ್ರಶ್ನಿಸಿ ಹಲವು ಕುಸ್ತಿಪಟುಗಳು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಅಂಡರ್-20 ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಸುಜೀತ್‌ ಕಲ್ಕಲ್‌ ಹಾಗೂ ಹಾಲಿ ಅಂಡರ್-20 ವಿಶ್ವ ಚಾಂಪಿಯನ್ ಅಂತಿಮ್‌ ಪಂಘಲ್‌ ಅವರು ಏಷ್ಯನ್​ ಗೇಮ್ಸ್ ಆಯ್ಕೆ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಕಳೆದ 7 ತಿಂಗಳಿಂದ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳದ ಭಜರಂಗ್‌, ವಿನೇಶ್‌ಗೆ ಅರ್ಹತೆ ನೀಡಿದ್ದಕ್ಕೆ ಈ ಕುಸ್ತಿಪಟುಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಯುತವಾಗಿಯೇ ಆಯ್ಕೆ ಟ್ರಯಲ್ಸ್‌ ಮಾಡಬೇಕು ಎಂದು ಅವರು ಕೋರಿದ್ದಾರೆ. ಒಂದೊಮ್ಮೆ ಕೋರ್ಟ್​ ಬಜರಂಗ್​ ಮತ್ತು ವಿನೇಶ್​ ಅವರ ಆಯ್ಕೆಯನ್ನು ತಿರಸ್ಕರಿಸಿದರೆ ಆಗ ಉಭಯ ಕುಸ್ತಿಪಟುಗಳು ಟ್ರಯಲ್ಸ್​ ಆಡಲೇ ಬೇಕಾಗಿದೆ.

ಇದನ್ನೂ ಓದಿ ಬಜರಂಗ್,ವಿನೇಶ್​ ಏಷ್ಯನ್​ ಗೇಮ್ಸ್​ಗೆ ನೇರ ಪ್ರವೇಶ; ಕೋಚ್​ಗಳಿಂದ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ

ದೂರು ನೀಡಿರುವ ಅಂತಿಮ್‌ ಪಂಘಲ್‌ ಅವರು ಯಾವ ಆಧಾರದಲ್ಲಿ ವಿನೇಶ್​ ಮತ್ತು ಬಜರಂಗ್​ಗೆ ಏಷ್ಯನ್​ ಗೇಮ್ಸ್​ಗೆ ಅರ್ಹತೆ ನೀಡಿದ್ದೀರ ಎಂದು ಪ್ರಶ್ನಿಸಿದ್ದಾರೆ. ಜತೆಗೆ ತನ್ನನ್ನು ಸೇರಿ ಹಲವರಿಗೆ ವಿನೇಶ್‌ರನ್ನು ಸೋಲಿಸುವ ಸಾಮರ್ಥ್ಯವಿದೆ ಎಂದು ಸವಾಲು ಹಾಕಿದ್ದಾರೆ. “ವರ್ಷಗಟ್ಟಲೆ ನಾವು ಮಾಡಿದ ಕಠಿಣ ಅಭ್ಯಾಸಕ್ಕೆ ಬೆಲೆ ಇಲ್ಲವೇ? ಇದು ಕುಸ್ತಿಪಟುಗಳಿಗೆ ಮಾಡುತ್ತಿರುವ ತಾರತಮ್ಯ” ಎಂದು ಅಂತಿಮ್‌ ಪಂಘಲ್‌ ಆರೋಪಿಸಿದ್ದಾರೆ.

ಸುಜೀತ್‌ ಕೂಡ ನೇರ ಆಯ್ಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯ ಮೋಸ ಸಲ್ಲದು ಎಂದಿದ್ದಾರೆ. ಬಜರಂಗ್​ ಅವರ ಮೇಲೆ ನಮಗೆ ಯಾವುದೇ ದ್ವೇಷವಿಲ್ಲ, ಅವರ ಮೇಲೆ ಅಪಾರ ಗೌರವವಿದೆ. ಆದರೆ ಅವರು ಕೂಡ ಟ್ರಯಲ್ಸ್​ ಆಡಬೇಕು ಅವರಂತೆಯೇ ನಾವು ಕೂಟ ಕಷ್ಟ ಪಟ್ಟು ಕುಸ್ತಿ ಆಡಿದ್ದೇವೆ. ನಮಗೆ ನಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಅವಕಾಶವೇ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿ” ಎಂದರು.

Exit mobile version