Site icon Vistara News

Asian Games Football: ಏಷ್ಯಾಡ್​ಗೆ ಫುಟ್ಬಾಲ್​ ತಂಡ ಪ್ರಕಟ; ಸುನೀಲ್​ ಚೆಟ್ರಿ ಸಾರಥ್ಯ

sunil chhetri celebration

ಬೆಂಗಳೂರು: ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರ ವರೆಗೆ ಚೀನದ ಹ್ಯಾಂಗ್‌ಝೂನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯನ್​ ಗೇಮ್ಸ್​(Asian Games) ಕ್ರೀಡಾಕೂಟಕ್ಕೆ ಭಾರತದ ಪುರುಷರ ಫುಟ್ಬಾಲ್​ ತಂಡ(indian football team) ಪ್ರಕಟಗೊಂಡಿದೆ. ಅನುಭವಿ ಆಟಗಾರ ಸುನೀಲ್​ ಚೆಟ್ರಿ(Sunil Chhetri) ತಂಡವನ್ನು(Asian Games Indian mens football team) ಮುನ್ನಡೆಸಲಿದ್ದಾರೆ. ಆದರೆ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್(Gurpreet Singh Sandhu) ಮತ್ತು ಡಿಫೆಂಡರ್ ಸಂದೇಶ ಝಿಂಗನ್‌(Sandesh Jhingan) ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಚೀನಾ ಮೊದಲ ಎದುರಾಳಿ

ಭಾರತ ಪುರುಷರ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ ಕೂಡ ಕಾಣಿಸಿಕೊಂಡಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್‌ ತಂಡಕ್ಕಿಂತ ಮೇಲಿರುವ ಭಾರತ ತಂಡ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ. ಭಾರತ ತನ್ನ ಮೊದಲ ಪಂದ್ಯವನ್ನು ಚೀನಾ ವಿರುದ್ಧ ಆಡಲಿದೆ. ಈ ಪಂದ್ಯ ಸೆಪ್ಟೆಂಬರ್ 19 ರಂದು ನಡೆಯಲಿದೆ. ಇದಾದ ಎರಡು ದಿನಗಳ ಬಳಿಕ ಬಾಂಗ್ಲಾದೇಶ ಮತ್ತು ಸೆಪ್ಟೆಂಬರ್ 24 ರಂದು ಮ್ಯಾನ್ಮಾರ್ ವಿರುದ್ಧ ಆಡಲಿದೆ.

ಚೆಟ್ರಿ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್​ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್​ ಟೂರ್ನಿಯಲ್ಲಿಯೂ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ತಂಡದ ಗೆಲುವಿನಲ್ಲಿ ನಾಯಕ ಸುನೀಲ್ ಚೆಟ್ರಿ ಶ್ರೇಷ್ಠ ಸಾಧನೆ ತೋರಿದ್ದರು. ಅಲ್ಲದೆ ಪ್ರತಿ ಪಂದ್ಯದಲ್ಲೂ ಗೋಲು ಬಾರಿ ತಂಡಕ್ಕೆ ಆಸರೆಯಾಗುತ್ತಿರುವ ಅವರ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಆರಂಭಿಕ ಹಂತದಲ್ಲಿ ಭಾರತೀಯ ಫುಟ್ಬಾಲ್ ಫೆಡರೇಷನ್‌ ಪ್ರಕಟಿಸಿದ್ದ ತಂಡದಲ್ಲಿ ಸುನೀಲ್ ಚೆಟ್ರಿ ಹೆಸರು ಬಿಟ್ಟುಹೋಗಿತ್ತು. ಬಳಿಕ​ ಏಷ್ಯನ್ ಗೇಮ್ಸ್‌ ಆಯೋಜಕರಿಗೆ ಮನವಿ ಮಾಡಿ ಉಭಯ ಆಟಗಾರರ ಹೆಸರನ್ನು ಸೇರಿಸಲಾಗಿತ್ತು.

ಕೊನೆಯ ಹಂತದಲ್ಲಿ ಸಿಕ್ಕ ಅವಕಾಶ

ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿದ್ದ ಕಾರಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾದ ಸ್ಥಿತಿ ಎದುರಾಗಿತ್ತು. ಆದರೆ ಇತ್ತೀನ ಪ್ರದರ್ಶನವನ್ನು ಪರಿಗಣಿಸಿ ಭಾರತ ತಂಡಗಳಿಗೆ ಅನುಮತಿ ನೀಡುವಂತೆ ಅಖಿಲ ಭಾರತ ಫುಟ್ಬಾಲ್​ ಫೆಡರೇಷನ್‌ (ಎಐಎಫ್‌ಎಫ್‌), ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀನಿಯರ್‌ ತಂಡದ ಮುಖ್ಯ ಕೋಚ್ ಇಗೊರ್‌ ಸ್ಟಿಮಾಚ್ ಅವರೂ ಮನವಿ ಮಾಡಿದ್ದರು. ಮನವಿಯನ್ನು ಗಂಭಿರವಾಗಿ ಚಿಂತಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಅಂತಿಮವಾಗಿ ಮಾನದಂಡಗಳನ್ನು ಸಡಿಲಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿತು.

ಇದನ್ನೂ ಓದಿ ಏಷ್ಯನ್​ ಗೇಮ್ಸ್​ ಆರಂಭಕ್ಕೂ ಮುನ್ನವೇ ಭಾರತ ತಂಡದಿಂದ ಹೊರಬಿದ್ದ ಸ್ಟಾರ್​ ವೇಗಿ

ಭಾರತ ತಂಡ

ಗುರ್ಮೀತ್‌ ಸಿಂಗ್‌, ಧೀರಜ್‌ ಸಿಂಗ್‌, ಸುಮಿತ್ ರಾಠಿ, ನರೇಂದರ್ ಗಹ್ಲೋಟ್, ಅಮರ್ಜಿತ್ ಸಿಂಗ್ ಕಿಯಾಮ್, ಸ್ಯಾಮ್ಯುಯೆಲ್ ಜೇಮ್ಸ್, ರಾಹುಲ್ ಕೆಪಿ, ಅಬ್ದುಲ್ ರಬೀಹ್ ಅಂಜುಕಂದನ್, ಆಯುಷ್ ದೇವ್ ಚೆಟ್ರಿ, ಬ್ರೈಸ್ ಮಿರಾಂಡಾ, ಅಜ್ಫರ್ ನೂರಾನಿ, ರಹೀಮ್ ಅಲಿ, ವಿನ್ಸಿ ಬ್ಯಾರೆಟ್ಟೊ, ಸುನೀಲ್​ ಚೆಟ್ರಿ, ರೋಹಿತ್‌ ದಾನು, ಗುರ್ಕಿರಾತ್ ಸಿಂಗ್​​, ಅನಿಕೇತ್‌ ಜಾಧವ್‌.

Exit mobile version