Site icon Vistara News

Asian Games: ಏಷ್ಯನ್​ ಗೇಮ್ಸ್​ನಲ್ಲಿ​ ಆಡಲು ಭಾರತ ಫುಟ್ಬಾಲ್​ ತಂಡಕ್ಕೆ ಅನುಮತಿ

indian football team

ಬೆಂಗಳೂರು: ಏಷ್ಯನ್​ ಗೇಮ್ಸ್(Asian Games)​ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ಫುಟ್ಬಾಲ್​ ತಂಡದ(indian football team) ಆಸೆ ಕೊನೆಗೂ ಈಡೇರಿದೆ. ಕೇಂದ್ರ ಕ್ರೀಡಾ ಸಚಿವಾಲಯ(Sports Ministry) ಈಗಿರುವ ಮಾನದಂಡಗಳನ್ನು ಸಡಿಲಿದ ಕಾರಣ, ಪುರುಷರ ಮತ್ತು ಮಹಿಳಾ ಫುಟ್ಬಾಲ್​ ತಂಡಗಳು(Indian Men’s and Women’s Football Teams) ಚೀನಾದ ಹಾಂಗ್‌ಝೌನಲ್ಲಿ(Hangzhou, China) ನಡೆಯುವ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿವೆ. ಇದರಿಂದ ಭಾರತೀಯ ಫುಟ್ಬಾಲ್​ ಆಟಗಾರರು ನಿರಾಳರಾಗಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾದ ಸ್ಥಿತಿ ಭಾರತ ಫುಟ್ವಾಲ್​ ತಂಡಕ್ಕೆ ಎದುರಾಗಿತ್ತು. ಆದರೆ ಇತ್ತೀನ ಪ್ರದರ್ಶನವನ್ನು ಪರಿಗಣಿಸಿ ಭಾರತ ತಂಡಗಳಿಗೆ ಅನುಮತಿ ನೀಡುವಂತೆ ಅಖಿಲ ಭಾರತ ಫುಟ್ಬಾಲ್​ ಫೆಡರೇಷನ್‌ (ಎಐಎಫ್‌ಎಫ್‌), ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀನಿಯರ್‌ ತಂಡದ ಮುಖ್ಯ ಕೋಚ್ ಇಗೊರ್‌ ಸ್ಟಿಮಾಚ್ ಅವರೂ ಮನವಿ ಮಾಡಿದ್ದರು.

ಇದನ್ನೂ ಓದಿ Asian Games: ಹ್ಯಾಟ್ರಿಕ್​ ಚಿನ್ನದ ಪದಕ ಯೋಜನೆಯಲ್ಲಿದ್ದ ಪಾಕ್​ಗೆ ಆಘಾತ; ಸ್ಟಾರ್​ ಆಟಗಾರ್ತಿ ಅಲಭ್ಯ

ಮನವಿಯನ್ನು ಗಂಭಿರವಾಗಿ ಚಿಂತಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಅಂತಿಮವಾಗಿ ಮಾನದಂಡಗಳನ್ನು ಸಡಿಲಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿತು. ಈ ವಿಚಾರವನ್ನು ಕ್ರೀಡಾ ಸಚಿವ ಅನುರಾಗ್ ಠಾಕೂರ್‌(Anurag Thakur) ಅವರು, ‘ಫುಟ್ಬಾಲ್​ ಪ್ರೇಮಿಗಳಿಗೆ ಶುಭ ಸುದ್ದಿ. ನಮ್ಮ ಪುರುಷರ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳು ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಲಿದೆ’ ಎಂದು ಟ್ವೀಟ್​ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್​ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್​ ಟೂರ್ನಿಯಲ್ಲಿಯೂ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಅದರಲ್ಲೂ ನಾಯಕ ಸುನೀಲ್​ ಚೆಟ್ರಿ(Sunil Chhetri) ಅವರು ಪ್ರತಿ ಪಂದ್ಯದಲ್ಲಿಯೂ ಗೋಲು ಬಾರಿಸಿ ಮಿಂಚಿದ್ದರು. ಪ್ರಗತಿಯ ಹಂತದಲ್ಲಿರುವ ಭಾರತೀಯ ಫುಟ್ಬಾಲ್ ತಂಡ ಏಷ್ಯಾನ್​ ಗೇಮ್ಸ್​ನಲ್ಲಿಯೂ ಚಿನ್ನದ ಪದಕ ಗೆಲ್ಲುವಂತಾಗಿ ಎನ್ನುವುದು ಭಾರತದ ಫುಟ್ಬಾಲ್​ ಅಭಿಮಾನಿಗಳ ಆಶಯವಾಗಿದೆ. ಈ ಬಾರಿಯ ಏಷ್ಯನ್ ಗೇಮ್ಸ್​ ಚೀನಾದ ಹ್ಯಾಂಗ್ಚೂ ನಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ.

Exit mobile version