ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್(Asian Games Mens T20) ಫೈನಲ್ ಪಂದ್ಯದಲ್ಲಿ ಐತಿಹಾಸಿಕ ಚಿನ್ನ ಗೆಲ್ಲಲು ಭಾರತ ಮತ್ತು ಅಘಫಾನಿಸ್ತಾನ(India vs Afghanistan, Final) ಸಜ್ಜುಗೊಂಡಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರ ಶನಿವಾರ ನಡೆಯಲಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾವನ್ನು, ಅಫಘಾನಿಸ್ತಾನ ತಂಡ ಪಾಕಿಸ್ತಾನವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಮಹಿಳೆಯರ ಸಾಧನೆಯೇ ಸ್ಫೂರ್ತಿಯಾಗಲಿ
ಭಾರತ ಪರುಷರ ತಂಡ ಇದೇ ಮೊದಲ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಆಡುತ್ತಿದೆ. ಮಹಿಳಾ ತಂಡವೂ ಕೂಡ ಆಡಿರಲಿಲ್ಲ. ಆದರೆ ಮಹಿಳಾ ತಂಡ ತನ್ನ ಚೊಚ್ಚಲ ಪ್ರಯತ್ನದಲ್ಲೇ ಲಂಕಾವನ್ನು ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತ್ತು. ಇದನ್ನೇ ಸ್ಫೂರ್ತಿಯಾಗಿರಿಸಿ ಪರುಷರ ತಂಡವೂ ಫೈನಲ್ನಲ್ಲಿ ಚಿನ್ನ ಗೆಲ್ಲಬೇಕು.
ಐಪಿಎಲ್ನಲ್ಲಿ ಹೊಡಿ ಬಡಿ ಆಟದ ಮೂಲಕ ಗಮನಸೆಳೆದ ಆಟಗಾರರೇ ಭಾತರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ನೇಪಾಳ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಚೊಚ್ಚಲ ಟಿ20 ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್, ಐಪಿಎಲ್ನ ಸಿಕ್ಸರ್ ಕಿಂಗ್ ರಿಂಕು ಸಿಂಗ್, ಸೆಮಿಫೈನಲ್ನಲ್ಲಿ ಅಜೇಯ ಅರ್ಧಶತಕ ಬಾರಿಸಿದ ತಿಲಕ್ ವರ್ಮ, ಬ್ಯಾಟಿಂಗ್ ಫಾರ್ಮ್ಗೆ ಮರಳಿದ ನಾಯಕ ಋತುರಾಜ್ ಗಾಯಕ್ವಾಡ್, ಗೂಗ್ಲಿ ಸ್ಟಾರ್ ರವಿ ಬಿಷ್ಣೋಯ್, ಯಾರ್ಕರ್ ಸ್ಟಾರ್ ಅರ್ಷದೀಪ್ ಸಿಂಗ್ ಮೇಲೆ ತಂಡ ಭಾರಿ ನಿರೀಕ್ಷೆ ಇರಿಸಿದೆ. ಇವರೆಲ್ಲ ಕ್ಲಿಕ್ ಆದರೆ ಭಾರತಕ್ಕೆ ಚಿನ್ನ ಖಚಿತ.
ಎಚ್ಚರ ಅಗತ್ಯ
ತಂಡವನ್ನು ನೋಡುವಾಗ ಭಾರತವೇ ಪೇವರಿಟ್ ಎನ್ನಲಡ್ಡಿಯಿಲ್ಲ. ಆದರೆ ಪ್ರತಿ ಹೆಜ್ಜೆಯಲ್ಲಿ ಎಚ್ಚರ ಅಗತ್ಯ. ಏಕೆಂದರೆ ಕ್ರಿಕೆಟ್ನಲ್ಲಿ ಏನು ಕೂಡ ಸಂಭವಿಸಬಹುದು. ದುರ್ಭಲ ತಂಡವೂ ಬಲಿಷ್ಠ ತಂಡಕ್ಕೆ ಊಹಿಸಲು ಸಾಧ್ಯವಿಲ್ಲದಂತೆ ಸೋಲುಣಿಸಿದ ಹಲವು ನಿರ್ದಶನ ನಮ್ಮ ಮುಂದಿದೆ. ಆದ್ದರಿಂದ ಈ ಪಂದ್ಯವನ್ನು ಭಾರತ ಹಗುರವಾಗಿ ಪರಿಗಣಿಸಬಾರದು.
ಬೌಲಿಂಗ್ ವಿಚಾರದಲ್ಲಿ ಭಾರತ ಸುಧಾರಣೆ ಕಂಡಿದೆ. ಸಾಯಿ ಕಿಶೋರ್ ಅವರ ಆಗಮನದಿಂದ ಬೌಲಿಂಗ್ನಲ್ಲಿ ಚೇತರಿಕೆ ಕಂಡಿದೆ. ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಘಾತಕ ಸ್ಫೆಲ್ ನಡೆಸಿದ ಅವರು 4 ಓವರ್ ಎಸೆದು ಕೇವಲ 12 ರನ್ ವೆಚ್ಚದಲ್ಲಿ ವಿಕೆಟ್ ಕಿತ್ತು ಮಿಂಚಿದ್ದಾರೆ. ಹೀಗಾಗಿ ಫೈನಲ್ನಲ್ಲಿಯೂ ತಂಡ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100 ಪದಕಗಳ ಗಡಿ ದಾಟುವುದು ಖಚಿತವಾಗಿದೆ. ಭಾರತ ಶುಕ್ರವಾರದ ಅಂತ್ಯಕ್ಕೆ 95 ಪದಕಗಳನ್ನು ಗೆದ್ದಿದೆ. ಶನಿವಾರ ಕ್ರಿಕೆಟ್ ಸೇರಿ 5 ಪದಕ ಗೆದ್ದರೆ ಭಾರತ ಸಾರ್ವಕಾಲಿ ದಾಖಲೆಯನ್ನು ಬರೆಯಲಿದೆ.
ಇದನ್ನೂ ಓದಿ Asian Games: ಪುರುಷರ ಹಾಕಿ; 9 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ; ಕಂಚು ಗೆಲ್ಲಲೂ ವಿಫಲವಾದ ಬಜರಂಗ್
ಸಂಭಾವ್ಯ ತಂಡ
ಭಾರತ: ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿ.ಕೀ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಶಿವಂ ದುಬೆ, ಸಾಯಿ ಕಿಶೋರ್, ಶಾಬಾಜ್ ಅಹ್ಮದ್.
ಅಫಘಾನಿಸ್ತಾನ: ಒಮೈರ್ ಯೂಸುಫ್, ಮಿರ್ಜಾ ತಾಹಿರ್ ಬೇಗ್, ರೋಹೈಲ್ ನಜೀರ್ (ವೀಕಿ), ಹೈದರ್ ಅಲಿ, ಖಾಸಿಮ್ ಅಕ್ರಂ (ನಾಯಕ), ಖುಷ್ದಿಲ್ ಶಾ, ಆಸಿಫ್ ಅಲಿ, ಅರಾಫತ್ ಮಿನ್ಹಾಸ್, ಅಮೀರ್ ಜಮಾಲ್, ಸುಫಿಯಾನ್ ಮುಖೀಮ್, ಉಸ್ಮಾನ್ ಖಾದಿರ್.