ಬೆಂಗಳೂರು: ಪ್ರತಿಷ್ಠಿತ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಡದಲ್ಲಿ ಪಾಲ್ಗೊಳ್ಳಲು ಭಾರತ ಫುಟ್ಬಾಲ್(Indian football) ತಂಡಕ್ಕೆ ಅನುಮತಿ ಸಿಕ್ಕರೂ ಇದೀಗ ಆಘಾತವೊಂದು ಎದುರಾಗಿದೆ. ತಂಡದ ನಾಯಕ ಸುನೀಲ್ ಚೆಟ್ರಿ(Sunil Chhetri), ಅನುಭವಿ ಡಿಫೆಂಡರ್ ಸಂದೇಶ್ ಜಿಂಗಾನ್(Sandesh Jhingan) ಮತ್ತು ಗೋಲ್ ಕೀಪರ್ ಗುರುಪ್ರೀತ್ ಸಿಂಗ್(Gurpreet Singh Sandhu) ಅವರು ತಂಡದಲ್ಲಿ ಸ್ಥಾನ ಪಡೆದಿಲ್ಲ.
ಕೇಂದ್ರ ಕ್ರೀಡಾ ಸಚಿವಾಲಯ(Sports Ministry) ಕೆಲ ಮಾನದಂಡಗಳನ್ನು ಸಡಿಲಿದ ಕಾರಣ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಭಾರತದ ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡಕ್ಕೆ ಅವಕಾಶ ಲಭಿಸಿತ್ತು. ಮೂರು ದಿನಗಳ ಹಿಂದಷ್ಟೇ ಟೂರ್ನಿಯ ಫುಟ್ಬಾಲ್ ಪಂದ್ಯಗಳ ಡ್ರಾ ಪ್ರಕಟಗೊಂಡಿದ್ದು, ಭಾರತ ಪುರುಷರ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕೂಡ ಕಾಣಿಸಿಕೊಂಡಿದೆ.
ಸದ್ಯ ಪ್ರಕಗೊಂಡಿರುವ 22 ಸದಸ್ಯರ ತಂಡದಲ್ಲಿ ಸುನೀಲ್ ಚೆಟ್ರಿ ಅವರು ಕಾಣಿಸಿಕೊಂಡಿಲ್ಲ. ಈ ಬಾರಿಯ ಏಷ್ಯಾಡ್ ಪುರುಷರ ತಂಡಕ್ಕೆ 23 ವರ್ಷ ವಯೋಮಿತಿಯ ಮಾನದಂಡ ಹೇರಿದ ಕಾರಣ ಮತ್ತು ಏಷ್ಯಾಡ್ ಫುಟ್ಬಾಲ್ ತಂಡದ ಪ್ರಕಟನೆಗೆ ಜುಲೈ 15 ಅಂತಿಮ ದಿನವಾಗಿತ್ತು. ಆದರೆ ಭಾರತ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನವಾಗಿದ್ದ ಕಾರಣ ಡೆಡ್‌ಲೈನ್ ಒಳಗೆ ತರಾತುರಿಯಲ್ಲಿ ತಂಡವೊಂದನ್ನು ರಚಿಸಿ ರವಾನಿಸಲಾಗಿತ್ತು. ಇದರಲ್ಲಿ ಈ ಮೂವರು ಆಟಗಾರರ ಹೆಸರು ಉಲ್ಲೇಖವಾಗಿರಲಿಲ್ಲ. ಇದೀಗ ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣೌ ಚೌಬೆ ಅವರು ಈ ಮೂವರು ಸ್ಟಾರ್ ಆಟಗಾರರ ಹೆಸರನ್ನು ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದು ಫಲಪ್ರದವಾಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಆದರೆ ಮಹಿಳಾ ತಂಡಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.
ಇದನ್ನೂ ಓದಿ Indian Grand Prix 2: ಹಿಮಾ ದಾಸ್ ಹಿಂದಿಕ್ಕಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದ ಅರ್ಚನಾ
ಏಷ್ಯನ್ ಗೇಮ್ಸ್ ಕ್ರೀಡಾಕೂಟ ಚೀನಾದ ಹ್ಯಾಂಗ್ಚೂ ನಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್ ತಂಡಕ್ಕಿಂತ ಮೇಲಿರುವ ಭಾರತ ತಂಡ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್ ಟೂರ್ನಿಯಲ್ಲಿಯೂ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ತಂಡದ ಗೆಲುವಿನಲ್ಲಿ ನಾಯಕ ಸುನೀಲ್ ಚೆಟ್ರಿ ಶ್ರೇಷ್ಠ ಸಾಧನೆ ತೋರಿದ್ದರು. ಆದರೆ ಏಷ್ಯಾಡ್ನಲ್ಲಿ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆದ ಬಿದ್ದಂತಾಗಿದೆ.