Site icon Vistara News

Asian Games: ಏಷ್ಯಾಡ್​ಗೆ ಫುಟ್ಬಾಲ್​ ತಂಡ ಪ್ರಕಟ; ಸುನೀಲ್​ ಚೆಟ್ರಿ ಸಾರಥ್ಯ

Indian men’s football team

ಬೆಂಗಳೂರು: ಮುಂದಿನ ತಿಂಗಳು ಚೀನಾದ ಹ್ಯಾಂಗ್ಝೂನಲ್ಲಿ(Hangzhou, China) ಆರಂಭಗೊಳ್ಳಲಿರುವ ಪ್ರತಿಷ್ಠಿತ ಏಷ್ಯನ್​ ಗೇಮ್ಸ್​ಗೆ(Asian Games) ಭಾರತದ ಪರಿಷ್ಕೃತ ಫುಟ್ಬಾಲ್ ತಂಡ(indian football team) ಪ್ರಕಟಗೊಂಡಿದೆ.(Asian Games Indian mens football team) ಸುನೀಲ್​ ಚೆಟ್ರಿ(Sunil Chhetri) ನಾಯಕನಾಗಿದ್ದು ಡಿಫೆಂಡರ್ ಸಂದೇಶ ಝಿಂಗನ್‌(Sandesh Jhingan) ಹಾಗೂ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್(Gurpreet Singh Sandhu) ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಟೂರ್ನಿ ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ನಡೆಯಲಿದೆ.

ಕೇಂದ್ರ ಕ್ರೀಡಾ ಸಚಿವಾಲಯ(Sports Ministry) ಕೆಲ ಮಾನದಂಡಗಳನ್ನು ಸಡಿಸಿ ಏಷ್ಯನ್​ ಗೇಮ್ಸ್(Asian Games)​ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿತ್ತು. ಹೀಗಾಗಿ ತರಾತುರಿಯಲ್ಲಿ ಆಟಗಾರರ ಪಟ್ಟಿ ಸಲ್ಲಿಸಿದ್ದ ಭಾರತೀಯ ಫುಟ್ಬಾಲ್ ಫೆಡರೇಷನ್‌, ಈ ಮೂವರ ಹೆಸರನ್ನು ಕೈಬಿಟ್ಟು ಹೋಗಿತ್ತು. ಆದರೆ ಬಳಿಕ ಏಷ್ಯನ್ ಗೇಮ್ಸ್‌ ಆಯೋಜಕರಿಗೆ ಮನವಿ ಮಾಡಿ ಇದೀಗ ಹೊಸ ಪಟ್ಟಿಯನ್ನು ಎಐಎಫ್‌ಎಫ್‌ ಪ್ರಕಟಿಸಿದೆ. ಈ ಅಂತಿಮ ಪಟ್ಟಿಯಲ್ಲಿ ಕೈಬಿಟ್ಟು ಹೋಗಿದ್ದ ಆಟಗಾರರು ಅವಕಾಶ ಪಡೆದಿದ್ದಾರೆ. ಪಂದ್ಯಗಳ ಡ್ರಾ ಪ್ರಕಟಗೊಂಡಿದ್ದು, ಭಾರತ ಪುರುಷರ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ ಕೂಡ ಕಾಣಿಸಿಕೊಂಡಿದೆ.

ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್‌ ತಂಡಕ್ಕಿಂತ ಮೇಲಿರುವ ಭಾರತ ತಂಡ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್​ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್​ ಟೂರ್ನಿಯಲ್ಲಿಯೂ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ತಂಡದ ಗೆಲುವಿನಲ್ಲಿ ನಾಯಕ ಸುನೀಲ್ ಚೆಟ್ರಿ ಶ್ರೇಷ್ಠ ಸಾಧನೆ ತೋರಿದ್ದರು. ಇದೀಗ ಏಷ್ಯನ್​ ಗೇಮ್ಸ್​ನಲ್ಲಿಯೂ ಅವರು ಕಾಲ್ಚಳಕ ತೋರ್ಪಡಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ Asian Games: ಏಷ್ಯನ್​ ಗೇಮ್ಸ್​ಗೆ​​ ಅನುಮತಿ ಸಿಕ್ಕರೂ ಭಾರತ ಫುಟ್ಬಾಲ್​ ತಂಡಕ್ಕೆ ಹೊಸ ಸಂಕಷ್ಟ!

ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿದ್ದ ಕಾರಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾದ ಸ್ಥಿತಿ ಭಾರತ ಫುಟ್ವಾಲ್​ ತಂಡಕ್ಕೆ ಎದುರಾಗಿತ್ತು. ಆದರೆ ಇತ್ತೀನ ಪ್ರದರ್ಶನವನ್ನು ಪರಿಗಣಿಸಿ ಭಾರತ ತಂಡಗಳಿಗೆ ಅನುಮತಿ ನೀಡುವಂತೆ ಅಖಿಲ ಭಾರತ ಫುಟ್ಬಾಲ್​ ಫೆಡರೇಷನ್‌ (ಎಐಎಫ್‌ಎಫ್‌), ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿತ್ತು. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀನಿಯರ್‌ ತಂಡದ ಮುಖ್ಯ ಕೋಚ್ ಇಗೊರ್‌ ಸ್ಟಿಮಾಚ್ ಅವರೂ ಮನವಿ ಮಾಡಿದ್ದರು. ಮನವಿಯನ್ನು ಗಂಭಿರವಾಗಿ ಚಿಂತಿಸಿದ ಕೇಂದ್ರ ಕ್ರೀಡಾ ಸಚಿವಾಲಯ ಅಂತಿಮವಾಗಿ ಮಾನದಂಡಗಳನ್ನು ಸಡಿಲಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿತು.

ಭಾರತ ತಂಡ

ಗೋಲ್‌ಕೀಪರ್: ಗುರುಪ್ರೀತ್‌ ಸಿಂಗ್‌ ಸಂಧು, ಗುರ್ಮೀತ್‌ ಸಿಂಗ್‌, ಧೀರಜ್‌ ಸಿಂಗ್‌.
ಡಿಫೆಂಡರ್: ಸಂದೇಶ್‌ ಜಿಂಗಾನ್‌, ಅನ್ವರ್‌ ಅಲಿ, ನರೇಂದರ್‌ ಗೆಹ್ಲೋಟ್‌, ಲಾಲ್‌ಚುಂಗ್‌ನುಂಗ, ಆಕಾಶ್‌ ಮಿಶ್ರಾ, ರೋಶನ್‌ ಸಿಂಗ್‌, ಆಶಿಷ್‌ ರೈ.
ಮಿಡ್‌ಫಿಲ್ಡರ್: ಜೀಕ್ಸನ್‌ ಸಿಂಗ್‌, ಸುರೇಶ್‌ ಸಿಂಗ್‌, ಅಪಿಯ ರಾಲ್ಟೆ, ಅಮರ್‌ಜೀತ್‌ ಸಿಂಗ್‌, ರಾಹುಲ್‌ ಕೆ.ಪಿ., ಎನ್‌. ಮಹೇಶ್‌ ಸಿಂಗ್‌.
ಫಾರ್ವರ್ಡ್ಸ್‌: ಶಿವಶಕ್ತಿ ನಾರಾಯ ಣನ್‌, ರಹೀಂ ಅಲಿ, ಸುನೀಲ್‌ ಚೆಟ್ರಿ, ಅನಿಕೇತ್‌ ಜಾಧವ್‌, ವಿಕ್ರಮ್‌ ಪ್ರತಾಪ್‌ ಸಿಂಗ್‌, ರೋಹಿತ್‌ ದಾನು.

Exit mobile version