Site icon Vistara News

ಇಂದಿನಿಂದ ಏಷ್ಯನ್‌ ಹಾಕಿ; ಚೀನಾಕ್ಕೆ ಸಡ್ಡು ಹೊಡೆಯಲು ಸಜ್ಜಾದ ಭಾರತ

Indian Hockey Team

ಚೆನ್ನೈ: ಏಷ್ಯನ್‌ ಪುರುಷರ ಹಾಕಿ ಚಾಂಪಿಯನ್‌ಶಿಪ್‌ಗೆ(Asian Champions Trophy 2023 Hockey) ಚೆನ್ನೈನಲ್ಲಿ(chennai) ಗುರುವಾರ ಚಾಲನೆ ಸಿಗಲಿದೆ. 7ನೇ ಆವೃತ್ತಿಯ ಈ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಭಾರತ ತಂಡ(indian hockey) ಚೀನಾ(india vs china hockey) ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಟೂರ್ನಿಗಾಗಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡ ಮಂಗಳವಾರ ಅಟ್ಟಾರಿ-ವಾಘಾ ಗಡಿ(Attari-Wagah border) ಮೂಲಕ ಭಾರತ ಪ್ರವೇಶಿಸಿದ್ದರು. ಭಾರತ ಮತ್ತು ಪಾಕ್​ ನಡುವಣ ಪಂದ್ಯ ಆಗಸ್ಟ್​ 09 ರಂದು ನಡೆಯಲಿದೆ. ಇದು ಭಾರತದ ಕೊನೆಯ ಲೀಗ್​ ಪಂದ್ಯವಾಗಿದೆ.

ಏಷ್ಯಾನ್​ ಗೇಮ್ಸ್​ ಮತ್ತು ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಪೂರ್ವಸಿದ್ಧತೆ ನಡೆಸಲು ಭಾರತ ಹಾಕಿ ತಂಡಕ್ಕೆ ಇದು ಮಹತ್ವದ ಟೂರ್ನಿಯಾಗಿದೆ. ಈ ಟೂರ್ನಿಯಿಂದಲೇ ಬಲಿಷ್ಠ ತಂಡವನ್ನು ನಿರ್ಮಿಸುವುದು ತಂಡದ ಮುಖ್ಯ ಕೋಚ್‌ ಕ್ರೇಗ್‌ ಫುಲ್ಟನ್ ಅವರ ಯೋಜನೆಯಾಗಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಳೆ, “ತಂಡದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಬಯಸಿದ್ದೇವೆ. ಜತೆಗೇ ಹೆಚ್ಚುವರಿ ಆಟಗಾರರನ್ನು ಕಂಡುಕೊಳ್ಳಬೇಕಾಗಿದೆ. ಏಷ್ಯನ್‌ ಕ್ರೀಡಾಕೂಟದಲ್ಲಿ ತಂಡದ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಲು ಮತ್ತು ಯಾವ ವಿಭಾಗದಲ್ಲಿ ಸುಧಾರಣೆಯಾಗಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಲು ಈ ಟೂರ್ನಿ ಮಹತ್ವದಾಗಿದೆ” ಎಂದು ಹೇಳಿದ್ದರು.

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಮೊದಲು ಮಹಿಳೆಯರಿಗಾಗಿ ಆರಂಭಿಸಿಲಾಯಿತು. ಈ ಟೂರ್ನಿ ಯಶಸ್ಸು ಕಂಡ ಬಳಿಕ ಮರು ವರ್ಷವೇ ಪುರುಷರಿಗೂ ಈ ಟೂರ್ನಿಯನ್ನು ಆಯೋಜಿಸಲಾಯಿತು. ಏಷ್ಯಾದ ಅಗ್ರ 6 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಭಾರತ ಮತ್ತು ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

ಇದನ್ನೂ ಓದಿ Asian Champions hockey: ಅಟ್ಟಾರಿ-ವಾಘಾ ಗಡಿ ದಾಟಿ ಬಂದ ಪಾಕ್ ಹಾಕಿ ಆಟಗಾರರು

ಭಾರತ ತಂಡ: ಮಿಡ್‌ಫೀಲ್ಡರ್‌ಗಳು: ಹರ್ಮನ್​ಪ್ರೀತ್​ ಸಿಂಗ್​(ನಾಯಕ), ಹಾರ್ದಿಕ್ ಸಿಂಗ್ (ಉಪನಾಯಕ), ಜರ್ಮನ್‌ಪ್ರೀತ್ ಸಿಂಗ್, ಸುಮಿತ್, ಜುಗರಾಜ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್. ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ ಮತ್ತು ಶಂಶೇರ್ ಸಿಂಗ್. ಫಾರ್ವರ್ಡ್‌ಗಳು: ಆಕಾಶದೀಪ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸುಖಜೀತ್ ಸಿಂಗ್, ಎಸ್ ಕಾರ್ತಿ. ಗೋಲ್​ ಕೀಪರ್​: ಪಿ.ಆರ್​ ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.

ಭಾರತದ ವೇಳಾಪಟ್ಟಿ

1. ಆಗಸ್ಟ್​ 03, ಭಾರತ-ಚೀನಾ

2. ಆಗಸ್ಟ್​ 04, ಭಾರತ-ಜಪಾನ್​

3. ಆಗಸ್ಟ್ 0​6, ಭಾರತ-ಮಲೇಷ್ಯಾ

4. ಆಗಸ್ಟ್​ 07, ಭಾರತ-ದಕ್ಷಿಣ ಆಫ್ರಿಕಾ

5. ಆಗಸ್ಟ್​ 09, ಭಾರತ-ಪಾಕಿಸ್ತಾನ

ಆಗಸ್ಟ್ 12ರಂದು ಫೈನಲ್ ಪಂದ್ಯ ನಡೆಯಲಿದೆ.

Exit mobile version