Site icon Vistara News

Asian Kabaddi Championship: ಫೈನಲ್​ ಪ್ರವೇಶಿಸಿದ ಭಾರತ

asian kabaddi championship final 2023

ಬೂಸಾನ್‌: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಶಿಪ್‌(Asian Kabaddi Championship) ಭಾರತ ತಂಡ ಫೈನಲ್​ ಪ್ರವೇಶಿಸಿದ್ದು ಚಾಂಪಿಯನ್​ ಪಟ್ಟ ಉಳಿಸಿಕೊಳ್ಳುವ ತವಕದಲ್ಲಿದೆ. ಹಾಲಿ ಚಾಂಪಿಯನ್​ ಖ್ಯಾತಿಗೆ ತಕ್ಕಂತೆ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ ಬಲಿಷ್ಠ ಇರಾನ್‌(India vs Iran) ತಂಡವನ್ನು 33-28 ಅಂತರದಿಂದ ಪರಾಭವಗೊಳಿಸಿತು.

ಟೂರ್ನಿಯಲ್ಲಿ ಅಜೇಯ ಓಟ ಕಾಯ್ದುಕೊಂಡಿದ್ದ ಭಾರತಕ್ಕೆ ಒಲಿದ ಸತತ 4ನೇ ಗೆಲುವು ಇದಾಗಿದೆ. 8 ಅಂಕದೊಂದಿಗೆ ಅಗ್ರಸ್ಥಾನದ ಪಡೆದು ಫೈನಲ್​ ಪ್ರವೇಶ ಪಡೆಯಿತು.ಕೊರಿಯಾ, ಚೈನೀಸ್‌ ತೈಪೆ ಮತ್ತು ಜಪಾನ್‌ ತಂಡಗಳನ್ನು ಭಾರತ ಈ ಹಿಂದಿನ ಪಂದ್ಯಗಳಲ್ಲಿ ಸೋಲಿಸಿತ್ತು.

ಬಲಿಷ್ಠವಾಗಿ ಮುನ್ನುಗುತ್ತಿದ್ದ ಇರಾನ್​ಗೆ ಎದುರಾದ ಮೊದಲ ಸೋಲು ಇದಾಗಿದೆ. ಇದಕ್ಕೂ ಮುನ್ನ ಆಡಿದ ಮೂರು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಹಾಲಿ ಚಾಂಪಿಯನ್​ ಭಾರತದ ಎದುರು ಇರಾನಿಗಳ ಆಟ ನಡೆಯಲಿಲ್ಲ. ಶುಕ್ರವಾರ ಇರಾನ್‌ ಮತ್ತೆ ಕಣಕ್ಕಿಳಿಯಲಿದೆ. ಎದುರಾಳಿ ಜಪಾನ್‌. ಇದು ಕೊನೆಯ ಲೀಗ್‌ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಜಪಾನ್​ ದೊಡ್ಡ ಅಂತರದಿಂದ ಗೆದ್ದರೆ ಫೈನಲ್‌ ಪ್ರವೇಶ ಪಡೆಯಲಿದೆ.

ಇದನ್ನೂ ಓದಿ Asian Kabaddi Championship: ಜಪಾನ್​ ವಿರುದ್ಧ ಭಾರತ ಜಯಭೇರಿ

ಭಾರತ ಪರ ಸ್ಟಾರ್​ ರೈಡರ್‌ಗಳಾದ ಪವನ್‌ ಸೆಹ್ರಾವತ್‌, ಅರ್ಜುನ್‌ ದೇಶ್ವಾಲ್‌ ಮತ್ತು ಅಸ್ಲಾಮ್‌ ಇನಾಮಾದರ್‌ ಉತ್ತಮ ಪ್ರದರ್ಶನ ನೀಡಿದರು. ಸೆಹ್ರಾವತ್‌ 16 ಅಂಕ ಗಳಿಸಿದರು. ಇರಾನ್‌ ಪರ ಪ್ರಮುಖ ರೈಡರ್‌ಗಳಾದ ಅಲಿರೇಝ, ಹೈದರ್‌ ಅಲಿ, ಇಕ್ರಾಮಿ ಹೋರಾಟ ನಡೆಸಿದರೂ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫಲರಾದರು. ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಮುಕ್ತಾಯಕ್ಕೆ ಇನ್ನೇನು 2 ನಿಮಿಷ ಬಾಕಿ ಇರುವಾಗ ಇರಾನ್‌ ತಿರುಗೇಟು ನೀಡಲು ಆರಂಭಿಸಿತು. ತಕ್ಷಣ ಎಚೆತ್ತುಕೊಂಡ ಭಾರತೀಯ ಆಟಗಾರರು ರಕ್ಷಣಾತ್ಮ ಆಟವಾಡಿ ಪಂದ್ಯ ಗೆದ್ದರು.

Exit mobile version