Site icon Vistara News

Asian Kabaddi Championship: ಜಪಾನ್​ ವಿರುದ್ಧ ಭಾರತ ಜಯಭೇರಿ

Asian Kabaddi Championship

ಬೂಸಾನ್‌ (ರಿಪಬ್ಲಿಕ್‌ ಆಫ್ ಕೊರಿಯಾ): ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ(Asian Kabaddi Championship) ಹಾಲಿ ಚಾಂಪಿಯನ್‌ ಭಾರತ ಮೂರನೇ ಗೆಲುವು ದಾಖಲಿಸಿದೆ. ಬುಧವಾರ ರಾತ್ರಿ ನಡೆದೆ ಪಂದ್ಯದಲ್ಲಿ ಭಾರತ ತಂಡ ಜಪಾನ್(India vs Japan) ವಿರುದ್ಧ 62-17 ಅಂಕಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಮೂಲಕ ಕೂಟದಲ್ಲಿ ಸತತ ಮೂರನೇ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಕೊರಿಯಾವನ್ನು 76-13ರಿಂದ, ಬಳಿಕ ಚೈನೀಸ್‌ ತೈಪೆಯನ್ನು 53-19 ಅಂಕಗಳಿಂದ ಸೋಲಿಸಿತ್ತು.

ಆರು ವರ್ಷಗಳ ಬಳಿಕ ನಡೆಯುತ್ತಿರುವ ಈ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 6 ತಂಡಗಳು ಸೆಣಸಾಟ ನಡೆಸುತ್ತಿವೆ. ರೌಂಡ್‌ ರಾಬಿನ್‌ ಮಾದರಿಯ ಮುಖಾಮುಖೀಯಾಗಿದ್ದು, ಎಲ್ಲ ತಂಡಗಳು ಒಮ್ಮೆ ಎದುರಾಗುತ್ತವೆ. ಅಗ್ರ ತಂಡಗಳೆರಡು ಶುಕ್ರವಾರದ ಫೈನಲ್‌ನಲ್ಲಿ ಎದುರಾಗಲಿವೆ. ಸದ್ಯ ಭಾರತ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಫೈನಲ್​ ಪ್ರವೇಶ ಖಚಿತಗೊಂಡಿದೆ.

ಕೊರಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಸ್ಟಾರ್​ ರೈಡರ್​ ಅಸ್ಲಾಮ್‌ ಇನಾಮಾದಾರ್(Aslam Inamdar)​ ಜಪಾನ್​ ವಿರುದ್ಧವು ಉತ್ತಮ ಪ್ರದರ್ಶನ ತೋರುವ ಮೂಲಕ ತಂಡ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. 10 ಅಂಕ ಕಲೆಹಾಕಿ ಮಿಂಚಿದರು. ಕಳೆದ ಪಂದ್ಯದಲ್ಲಿಯೂ ಅವರು ಸೂಪರ್​ ಟೆನ್​ ಸಂಪಾದಿಸಿದ್ದರು. ಭಾರತದ ರಕ್ಷಣಾ ವಿಭಾಗವೂ ಕೂಡ ಅತ್ಯಂತ ಬಲಿಷ್ಠವಾಗಿತ್ತು. ಆ್ಯಂಕಲ್​ ಹೋಲ್ಡ್​ಗಳ ಮೂಲಕ ಎದುರಾಳಿಗನ್ನು ಕಟ್ಟಿಹಾಕುವಲ್ಲಿ ಯಶಸ್ಸು ಸಾಧಿಸಿದರು.

ಇದನ್ನೂ ಓದಿ Kabaddi : ಹಾಕಿ ತವರೂರಲ್ಲಿ ಕಬಡ್ಡಿ ಕಲರವ; ಅಭಿಮಾನಿಗಳಿಗೆ ರಸದೌತಣ

ಪಂದ್ಯದ ಆರಂಭದಿಂದಲೇ ಭಾರತದ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತ ನೀಡಿದರು. ಹೀಗಾಗಿ ಮೊದಲಾರ್ಧದಲ್ಲಿ ಭಾರತ 32-6 ಅಂಕಗಳ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ಪವನ್‌ ಸೆಹ್ರಾವತ್‌ ಸರ್ವಾಧಿಕ 6 ಅಂಕ ಗಳಿಸಿದ್ದರು. ಭಾರತ ಎದುರಾಳಿಯನ್ನು ಒಟ್ಟು 6 ಸಲ ಆಲೌಟ್‌ ಮಾಡಿತು. ಉಭಯ ತಂಡಗಳು ಸತತ 2 ಪಂದ್ಯಗಳನ್ನು ಗೆದ್ದು ಕಣಕ್ಕಿಳಿದಿದ್ದವು ಆದರೆ ಭಾರತದ ಮುಂದೆ ಜಪಾನ್​ ಆಟ ನಡೆಯಲಿಲ್ಲ. ಗುರುವಾರ ನಡೆಯುವ ನಾಲ್ಕನೇ ಪಂದ್ಯದಲ್ಲಿ ಭಾರತ ಬಲಿಷ್ಠ ತಂಡವಾದ ಇರಾನ್‌ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಸವಾಲು ಅಷ್ಟು ಸುಲಭದಿಂದ ಕೂಡಿಲ್ಲ. ಕಾರಣ ಇರಾನ್‌ ತಂಡದಲ್ಲಿ ಅನೇಕ ಸ್ಟಾರ್​ ಆಟಗಾರರು ಕಾಣಿಸಿಕೊಂಡಿದ್ದಾರೆ.

Exit mobile version