Site icon Vistara News

Asian Para Games: ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ದಾಖಲೆಯ ಪದಕ ಗೆದ್ದ ಭಾರತ

Asian Para Games: India won a record medal in Para Asian Games

ಹ್ಯಾಂಗ್​ಝೌ: ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ(Asian Para Games) ಭಾರತ ದಾಖಲೆಯೊಂದನ್ನು ನಿರ್ಮಿಸಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಒಟ್ಟು 74 ಪದಕಗಳನ್ನು ಗೆಲ್ಲುವ ಮೂಲಕ ಹಳೆ ದಾಖಲೆಯನ್ನು ಮುರಿದಿದೆ. ಸದ್ಯ 17 ಚಿನ್ನ, 22 ಬೆಳ್ಳಿ ಮತ್ತು 33 ಕಂಚಿನ ಪದಕಗಳು ಗೆದ್ದ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬರೋಬ್ಬರಿ 300ಕ್ಕೂ ಅಧಿಕ ಪದಕ ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದೆ. 

2018ರಲ್ಲಿ ನಡೆದ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಭಾರತ ಒಟ್ಟು 72 ಪದಕಗಳನ್ನು ಜಯಿಸಿದ್ದು ಇದುವರೆಗೆ ದಾಖಲೆಯಾಗಿತ್ತು. ಈ ಕೂಟದಲ್ಲಿ ಭಾರತ 15 ಚಿನ್ನ, 24 ಬೆಳ್ಳಿ, 33 ಕಂಚು ಗೆದ್ದು. ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು.

ಕೂಟದ ನಾಲ್ಕನೇ ದಿನವಾದ ಗುರುವಾರ ಭಾರತ ಮಿಶ್ರ 50 ಮೀ ರೈಫಲ್ಸ್ ಪ್ರೋನ್ SH-1 ಶೂಟಿಂಗ್​ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿತು. ಈ ಸ್ಪರ್ಧೆಯಲ್ಲಿ 247.7 ಗಮನಾರ್ಹ ಸ್ಕೋರ್‌ ಗಳಿಸಿದ ಸಿದ್ಧಾರ್ಥ ಬಾಬು ದಾಖಲೆಯನ್ನು ಬರೆದರು. ಶಾಟ್ ​ಪುಟ್​ನಲ್ಲಿ ಭಾರತದ ಪ್ಯಾರಾ ಅಥ್ಲೀಟಿಗಳು ಅಮೋಘ ಪ್ರದರ್ಶನ ತೋರುವ ಮೂಲಕ ಚಿನ್ನ ಮತ್ತು ಕಂಚಿನ ಪದಕವನ್ನು ಜಯಿಸಿದ್ದಾರೆ. ಪುರುಷರ ಶಾಟ್​ ಪುಟ್​-ಎಫ್​46ನಲ್ಲಿ ಸಚಿನ್​ ಖಿಲಾರಿ 16.03 ಮೀ ಎಸೆತದೊಂದಿಗೆ ಚಿನ್ನ ಗೆದ್ದರೆ, ಇದೇ ವಿಭಾಗದಲ್ಲಿ ರೋಹಿತ್​ ಕುಮಾರ್ 14.56 ಮೀ ಎಸೆತದೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಮಹಿಳಾ ಶಾಟ್​ ಪುಟ್ ಎಫ್​34 ವಿಭಾಗದಲ್ಲಿ ಭಾಗ್ಯಶ್ರೀ ಮಾಧವ್​ರಾವ್​ ಜಾಧವ್​ 7.54 ಮೀ ಎಸೆತದೊಂದಿಗೆ ಬೆಳ್ಳಿ ಪದಕ ಗೆದ್ದದರು. ಪುರುಷರ ಆರ್ಚರಿ ಡಬಲ್ಸ್​ – ಡಬ್ಲೂ1 ಈವೆಂಟ್​ನಲ್ಲಿ ಆದಿಲ್​ ಮೊಹ್ಮದ್​ ಮತ್ತು ನವೀನ್​ ದಲಾಲ್​ ಜೋಡಿ ಕಂಚಿನ ಪದಕ ಜಯಸಿದರು.

ಇದನ್ನೂ ಓದಿ Asian Games 2023 : ಕ್ರೀಡಾಪಟುಗಳಿಗೆ ಎಲ್ಲ ಇಲಾಖೆಗಳ ಉದ್ಯೋಗದಲ್ಲಿ ಮೀಸಲು; ಸಿಎಂ ಭರವಸೆ

ಬ್ಯಾಡ್ಮಿಂಟನ್​ನಲ್ಲಿ ಕಂಚು

ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ SL – 4ನಲ್ಲಿ ಸುಕಾಂತ್ ಕದಮ್ ಶ್ರೇಷ್ಠ ಪ್ರದರ್ಶನದೊಂದಿಗೆ ಕಂಚಿನ ಪದಕವನ್ನು ಪಡೆದರು. ಮಹಿಳೆಯರ ಸಿಂಗಲ್ಸ್​ ಪ್ಯಾರಾ ಬ್ಯಾಡ್ಮಿಂಟನ್​ – ಎಸ್​ಹೆಚ್​ – 6 ಈವೆಂಟ್​ನಲ್ಲಿ ನಿತ್ಯಶ್ರೀ ಕಂಚಿನ ಪದಕ ಗೆದ್ದಿದ್ದಾರೆ.

ಪುರುಷರ 100 ಮೀ ಟಿ-37 ಓಟದ ಸ್ಫರ್ಧೆಯಲ್ಲಿ ಶ್ರೇಯಾಂಶ್​ ತ್ರಿವೇದಿ(12.24 ಸೆಕೆಂಡ್​ಗಳಲ್ಲಿ) ಕಂಚು ಗೆದ್ದಿದರೆ, ಪುರುಷರ ಟಿ-35 100 ಮೀ ಓಟದ ಸ್ಪರ್ಧೆಯಲ್ಲಿ ನಾರಾಯಣ ಠಾಕೂರ್(14.37 ಸೆಕೆಂಡ್​)​ ಕಂಚಿನ ಪದಕ ಜಯಿಸಿದರು. ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಬುಧವಾರ 6 ಚಿನ್ನ, 8 ಬೆಳ್ಳಿ, 16 ಕಂಚು ಸೇರಿ ಬರೋಬ್ಬರಿ 30 ಪದಕ ಗೆದ್ದ ಸಾಧನೆ ಮಾಡಿತ್ತು.

Exit mobile version