ಮುಂಬಯಿ: ಪತ್ನಿ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಆರೋಪದ ಮೇಲೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ(Vinod Kambli) ಅವರ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪತ್ನಿ ಆಂಡ್ರಿಯಾ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 324 ಮತ್ತು 504 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.
ಕುಡಿದು ಮನೆಗೆ ಬಂದ ವಿನೋದ್ ಕಾಂಬ್ಳಿ ಅವರು ತಮ್ಮ ಪತ್ನಿಯನ್ನು ಕೆಟ್ಟದಾಗಿ ನಿಂದಿಸಿದ್ದಾರೆ. ಇದಾದ ಬಳಿಕ ಸಿಟ್ಟಿನಲ್ಲಿ ಪತ್ನಿಯ ಮೇಲೆ ಹಲ್ಲೆಯನ್ನೂ ಎಸೆದಿದ್ದಾನೆ. ಆದರೆ ಇದರಿಂದ ಪತ್ನಿ ಆಂಡ್ರಿಯಾ ತಲೆಗೆ ಗಾಯವಾಗಿದೆ. 12 ವರ್ಷದ ಮಗ ತಂದೆಯನ್ನು ತಡೆಯಲು ಯತ್ನಿಸಿದ್ದಾನೆ. ಇದರ ಬಳಿಕವೂ ಕುಡಿದ ಮತ್ತಿನಲ್ಲಿ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡ ಆಂಡ್ರಿಯಾ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ವಿನೋದ್ ಕಾಂಬ್ಳಿ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ IND VS AUS: ಹಣೆಗೆ ತಿಲಕ ಇಡಲು ನಿರಾಕರಿಸಿದ ಸಿರಾಜ್, ಉಮ್ರಾನ್ ಮಲಿಕ್, ವಿಕ್ರಮ್ ರಾಥೋಡ್; ವಿಡಿಯೊ ವೈರಲ್
ವಿನೋದ್ ಕಾಂಬ್ಳಿ ಅವರ ವಿರುದ್ಧ ಕೇಸು ದಾಖಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹೌಸಿಂಗ್ ಸೊಸೈಟಿಯ ಗೇಟ್‌ಗೆ ಕಾರು ಢಿಕ್ಕಿ ಹೊಡೆದು, ವಾಚ್ಮೆನ್ ಹಾಗೂ, ನಿವಾಸಿಗಳೊಂದಿಗೆ ವಾಗ್ವಾದಕ್ಕಿಳಿದ ಪರಿಣಾಮ ಪೊಲೀಸರು ವಿನೋದ್ ಅವರನ್ನು ಬಂಧಿಸಿದ್ದರು. ಇದೀಗ ಪತ್ನಿಗೆ ನಿಂದಿಸಿದ ಆರೋಪದದಲ್ಲಿ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾರೆ.