Site icon Vistara News

Ranji Trophy: 12ನೇ ವರ್ಷದಲ್ಲೇ ರಣಜಿಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ

Vaibhav Suryavanshi

ಮುಂಬಯಿ: ಇಂದಿನಿಂದ ಆರಂಭಗೊಂಡ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ಮಹತ್ವದ ಮೈಲುಗಲ್ಲೊಂದು ನಿರ್ಮಾಣವಾಗಿದೆ. ಬಿಹಾರದ ವೈಭವ್ ಸೂರ್ಯವಂಶಿ ಅವರು ಕೇವಲ 12 ವರ್ಷದಲ್ಲೇ ರಣಜಿಗೆ ಪದಾರ್ಪಣೆ ಮಾಡಿದ ನಾಲ್ಕನೇ-ಕಿರಿಯ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗೆ 12 ವರ್ಷ(284 ದಿನ) ವಯಸ್ಸು.

1942-43 ಋತುವಿನಲ್ಲಿ ಅಲಿಮುದ್ದೀನ್ 12 ವರ್ಷ ಮತ್ತು 73 ದಿನಗಳ ವಯಸ್ಸಿನಲ್ಲಿ ರಣಜಿ ಆಡಿದ್ದರು. ಸದ್ಯ ಅತಿ ಕಿರಿಯ ವಯಸ್ಸಿನಲ್ಲಿ ರಣಿ ಆಡಿದ ದಾಖಲೆ ಅವರ ಹೆಸರಿನಲ್ಲಿಯೇ ಉಳಿದಿದೆ. ಅಜ್ಮೀರ್ ಮೂಲದರಾಗಿದ್ದ ಅಲಿಮುದ್ದೀನ್ ಅವರು ಬರೋಡಾ ವಿರುದ್ಧದ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಆಡುವ ಮೂಲಕ ಈ ಸಾಧನೆ ಮಾಡಿದ್ದರು.

ಇದಾದ ಬಳಿಕ ಎಸ್‌ಕೆ ಬೋಸ್ 1959-60ರಲ್ಲಿ 12 ವರ್ಷ ಮತ್ತು 76 ದಿನಗಳ ವಯಸ್ಸಿನಲ್ಲಿ ಪ್ರಥಮ ದರ್ಜೆಗೆ ಪಾದರ್ಪಣೆ ಮಾಡಿದ್ದರು. ಅವರು ಜಮ್ಶೆಡ್‌ಪುರದ ಕೀನನ್ ಕ್ರೀಡಾಂಗಣದಲ್ಲಿ ಬಿಹಾರ ಮತ್ತು ಅಸ್ಸಾಂ ನಡುವಿನ ಪಂದ್ಯದಲ್ಲಿ ಆಡಿದ್ದರು. ಅಕ್ಟೋಬರ್ 1937 ರಲ್ಲಿ, ಮೊಹಮ್ಮದ್ ರಂಜಾನ್ 12 ವರ್ಷ ಮತ್ತು 247 ದಿನಗಳ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ ಆಡಿದ್ದರು. ಪಟಿಯಾಲಾದ ಬಾರಾದರಿ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಯುನೈಟೆಡ್ ಪ್ರಾಂತ್ಯದ ವಿರುದ್ಧದ ಪಂದ್ಯದಲ್ಲಿ ಉತ್ತರ ಭಾರತ ತಂಡದ ಪರ ಆಡಿದ್ದರು.

ಇದನ್ನೂ ಓದಿ David Warner: ಕೊನೆಗೂ ವಾರ್ನರ್​ ಕೈ ಸೇರಿದ ಗ್ರೀನ್​ ಬ್ಯಾಗಿ ಕ್ಯಾಪ್; ನಿಗೂಢವಾಗಿ ಪತ್ತೆ

ಸೂರ್ಯವಂಶಿ ಸಾಧನೆ


ಸೂರ್ಯವಂಶಿ 2023ರ ಆವೃತ್ತಿಯ ಕೂಚ್ ಬೆಹಾರ್ ಟ್ರೋಫಿಯಲ್ಲಿ ಬಿಹಾರ ಪರ ಆಡಿದ್ದರು. ಜಾರ್ಖಂಡ್ ವಿರುದ್ಧದ ಪಂದ್ಯವೊಂದರಲ್ಲಿ ಅವರು 128 ಎಸೆತಗಳಲ್ಲಿ 22 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 151 ರನ್ ಗಳಿಸಿದರು. ಅದೇ ಪಂದ್ಯದಲ್ಲಿ ಅವರು 76 ರನ್ ಗಳಿಸಿದ್ದರು.

ತಂಡಗಳನ್ನು ಈ ರೀತಿ ಗುಂಪು ಮಾಡಲಾಗಿದೆ


ಎಲೈಟ್ ಗ್ರೂಪ್ ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಸರ್ವಿಸಸ್ ಮತ್ತು ಮಣಿಪುರ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಬಿ: ಈ ಗುಂಪಿನಲ್ಲಿ ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್ ಗಢ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಬಿಹಾರ ತಂಡಗಳಿವೆ.

ಎಲೈಟ್ ಗ್ರೂಪ್ ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರಾ ಮತ್ತು ಚಂಡೀಗಢ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಡಿ: ಮಧ್ಯಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಬರೋಡಾ, ದೆಹಲಿ, ಒಡಿಶಾ, ಪಾಂಡಿಚೆರಿ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳು ಈ ಗುಂಪಿನಲ್ಲಿವೆ.

ಪ್ಲೇಟ್ ಗ್ರೂಪ್: ಎಲೈಟ್ 31, 32ನೇ ಸ್ಥಾನ; ಪ್ಲೇಟ್ ರ್ಯಾಂಕ್ 3, 4, 5, 6. ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ತಂಡಗಳು ಈ ಗುಂಪಿನಲ್ಲಿವೆ.

Exit mobile version