Site icon Vistara News

Athiya Shetty and KL Rahul | ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್‌ ರಾಹುಲ್‌ ಕಲ್ಯಾಣವಂತೆ : ಸುನೀಲ್‌ ಶೆಟ್ಟಿ ಹೇಳಿದ್ದೇನು?

Athiya Shetty And KL Rahul

ಬೆಂಗಳೂರು : ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್‌ ರಾಹುಲ್‌ (Athiya Shetty And KL Rahul) ಮದುವೆಯ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ನಟ ಸುನೀಲ್‌ ಶೆಟ್ಟಿ ತಮ್ಮ ಮಗಳ ಮದುವೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡಿಗ ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದಿದೆ, ಇದರ ಬೆನ್ನಲ್ಲೆ ರಾಹುಲ್‌ ಇದೀಗ ಜಿಂಬಾಬ್ವೆಯಿಂದ ನೇರವಾಗಿ ಏಷ್ಯಾ ಕಪ್‌ಗಾಗಿ ದುಬೈಗೆ ಹೋಗಿದ್ದಾರೆ.

ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್‌ ರಾಹುಲ್‌ ಅವರ ಮದುವೆಯ ಬಗ್ಗೆ ಕಳೆದ ವರ್ಷದಿಂದಲೂ ಸುದ್ದಿ ಹರಿದಾಡುತ್ತಿವೆ. ಆದರೆ, ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ ಈ ಸ್ಟಾರ್​ ಜೋಡಿ ಪೇಟೆ-ಪಟ್ಟಣಗಳನ್ನು ಸುತ್ತುತ್ತಲೇ ಇದ್ದಾರೆ. ಇವರ ಡೇಟಿಂಗ್‌ ಸಂಗತಿ ಅಭಿಮಾನಿಗಳ ಮನೆಯ ಪ್ರತಿ ನಿತ್ಯದ ಮಾತಾಗಿದೆ.

ಸುನೀಲ್‌ ಶೆಟ್ಟಿ ಹೇಳಿದ್ದೇನು?

ಸುನೀಲ್‌ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ʻʻಮಕ್ಕಳು ನಿರ್ಧಾರ ಮಾಡಿದ ತಕ್ಷಣ ತಯಾರಿ ಶುರುವಾಗುತ್ತದೆ. ಯಾಕೆಂದರೆ ರಾಹುಲ್ ಅವರ ಶೆಡ್ಯೂಲ್ ತುಂಬಾ ಬ್ಯುಸಿ ಇದೆ ಎಂದಿದ್ದಾರೆ. ಏಷ್ಯಾ ಕಪ್, ವಿಶ್ವ ಕಪ್, ದಕ್ಷಿಣ ಆಫ್ರಿಕಾ ಟೂರ್, ಆಸ್ಟ್ರೇಲಿಯಾ ಟೂರ್ ಹೀಗೆ ಎಲ್ಲ ಪ್ರಮುಖ ಟೂರ್ನಿಗಳಿಗೆ ತಯಾರಿ ನಡೆಸುತ್ತಿದ್ದಾರೆ. ಮತ್ತು ಅವರು ಅದರಿಂದ ಒಂದು ದಿನ ರಜೆ ತೆಗೆದುಕೊಂಡರೆ, ಆ ಒಂದು ದಿನದಲ್ಲಿ ಮದುವೆಯಾಗಲು ಸಾಧ್ಯವಿಲ್ಲ. ಹಾಗಾಗಿ ಬಿಡುವು ಸಿಕ್ಕಾಗ ಮದುವೆಯಾಗುತ್ತಾರೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | Athiya Shetty And KL Rahul | ಅಥಿಯಾ- ರಾಹುಲ್​ ಜೋಡಿಯ ಮದುವೆ ಮುಂದಿನ ವರ್ಷಾರಂಭಕ್ಕೆ?

ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ‘ತಡಪ್’ನ ಪ್ರಥಮ ಪ್ರದರ್ಶನದಲ್ಲಿ ಒಟ್ಟಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ರಾಹುಲ್ ಮತ್ತು ಅಥಿಯಾ ಶೆಟ್ಟಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು.

ಭರದಿಂದ ಸಾಗುತ್ತಿದೆಯಾ ಸಿದ್ಧತೆ?

ವಿವಾಹದ ಸಿದ್ಧತೆಗಳು ಈಗಾಗಲೇ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಹುಲ್‌ ಅವರ ಪೋಷಕರು ಇತ್ತೀಚೆಗೆ ಅಥಿಯಾ ಅವರ ಕುಟುಂಬವನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಮುಂದಿನ ಮೂರು ತಿಂಗಳಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂಬ ವದಂತಿಗಳಿಗೆ ಅಥಿಯಾ ಶೆಟ್ಟಿ ಇನ್‌ಸ್ಟಾಗ್ರಾಮ್ ಮೂಲಕ ತಮಾಷೆಯ ಪ್ರತಿಕ್ರಿಯೆ ನೀಡಿದ್ದರು. “ಮೂರು ತಿಂಗಳಲ್ಲಿ ನಡೆಯುವ ಮದುವೆಗೆ ನನಗೂ ಆಹ್ವಾನ ಬರಬಹುದು ಎಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಈ ಹೇಳಿಕೆಯಿಂದ ಮದುವೆ ಸದ್ಯಕ್ಕೆ ನಡೆಯದು ಎಂಬ ಗಾಸಿಪ್​ ಪುಷ್ಟಿ ಸಿಕ್ಕಿದಂತಾಗುತ್ತದೆ.

ಕೆ.ಎಲ್‌ ರಾಹುಲ್‌ ಅವರು ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಅಥಿಯಾ ಶೆಟ್ಟಿ ಖುದ್ದಾಗಿ ಮುಂದೆ ನಿಂತು ರಾಹುಲ್‌ ಆರೈಕೆ ಮಾಡಿದ್ದರು. ಅಂತೆಯೇ ಮೇ ತಿಂಗಳಲ್ಲಿ ಅಥಿಯಾ ಅವರ ಸಹೋದರ ವಿವಾಹದ ವದಂತಿಗಳ ಬಗ್ಗೆ ಮಾತನಾಡಿದರು.

ಇದಕ್ಕೂ ಮುನ್ನ ಸುನೀಲ್ ಶೆಟ್ಟಿ ಅವರು ರಾಹುಲ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದರು. ಕೆಎಲ್ ರಾಹುಲ್ ಇಷ್ಟ ಎಂಬುದಾಗಿಯೂ ಹೇಳಿದ್ದರು. ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. “ಕಾಲ ಬದಲಾಗಿದೆ. ಏನು ಮಾಡಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ,” ಎಂದು ನಟ ಹೇಳಿಕೊಂಡಿದ್ದರು.

ಇದನ್ನೂ ಓದಿ | Salman Khan ಗೂ ಇದ್ದವು ಕಷ್ಟದ ದಿನಗಳು, ದುಡ್ಡಿಲ್ಲದಾಗ ಶರ್ಟ್ ಕೊಡಿಸಿದ್ದ ಸುನಿಲ್‌ ಶೆಟ್ಟಿ!

Exit mobile version