Site icon Vistara News

Athiya Shetty And KL Rahul | ಅಥಿಯಾ- ರಾಹುಲ್​ ಜೋಡಿಯ ಮದುವೆ ಮುಂದಿನ ವರ್ಷಾರಂಭಕ್ಕೆ?

Athiya Shetty And KL Rahul

ಬೆಂಗಳೂರು : ಸ್ಟಾರ್ ಕ್ರಿಕೆಟಿಗ ಕೆ.ಎಲ್​ ರಾಹುಲ್ ಹಾಗೂ ಅವರ ಪ್ರೇಯಸಿ ಅಥಿಯಾ ಶೆಟ್ಟಿಯ (Athiya Shetty And KL Rahul) ಮದುವೆ ದಿನಾಂಕವೇ ಈಗ ಇಂಟರ್ನೆಟ್​ ಸೆನ್ಸೇಷನ್​. ಒಂದು ಕಡೆ ಅವರ ವಿವಾಹ ಇನ್ನೇನೂ ಮೂರೇ ತಿಂಗಳಲ್ಲಿ ನಡೆಯುತ್ತದೆ ಎಂದು ಹೇಳಿದರೆ, ಕೆಲವೊಂದು ವರದಿಗಳು ಇನ್ನೂ ಸಿದ್ಧತೆಗಳು ಮುಗಿದಿಲ್ಲ ಎಂದು ಹೇಳುತ್ತಿವೆ. ಏತನ್ಮಧ್ಯೆ, ಹೊಸ ಸಮಾಚಾರವೊಂದರ ಪ್ರಕಾರ ಈ ಸ್ಟಾರ್ ಜೋಡಿಯ ಗಟ್ಟಿಮೇಳ ಕಾರ್ಯಕ್ರಮ 2022ರಲ್ಲಿ ನಡೆಯುವುದು ಕಷ್ಟ. ಬದಲಾಗಿದೆ 2023ರ ವರ್ಷಾರಂಭಕ್ಕೆ ನಡೆಸಲು ಅವರ ಬಂಧು- ಬಳಗ ನಿರ್ಧರಿಸಿದೆ.

ರಾಹುಲ್​ ಹಾಗೂ ಅಥಿಯಾ ಅವರ ಮದುವೆಯ ಬಗ್ಗೆ ಕಳೆದ ವರ್ಷದಿಂದಲೂ ಸುದ್ದಿ ಹರಿದಾಡುತ್ತಿವೆ. ಆದರೆ, ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ ಈ ಸ್ಟಾರ್​ ಜೋಡಿ ಪೇಟೆ-ಪಟ್ಟಣಗಳನ್ನು ಸುತ್ತುತ್ತಲೇ ಇದ್ದಾರೆ. ಇವರ ಡೇಟಿಂಗ್‌ ಸಂಗತಿ ಅಭಿಮಾನಿಗಳ ಮನೆಯ ಪ್ರತಿ ನಿತ್ಯದ ಮಾತಾಗಿದೆ.

ಇದನ್ನೂ ಓದಿ | ನನ್ನ ಗಮನ ಏನಿದ್ದರೂ ಸಿನಿಮಾಗಳತ್ತ: ರಾಜಕೀಯ ಸೇರುವ ವದಂತಿ ತಳ್ಳಿ ಹಾಕಿರುವ ನಟ ವಿಶಾಲ್‌

ಭರದಿಂದ ಸಾಗುತ್ತಿದೆಯಾ ಮದುವೆ?

ವಿವಾಹದ ಸಿದ್ದತೆಗಳು ಈಗಾಗಲೇ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಹುಲ್‌ ಅವರ ಪೋಷಕರು ಇತ್ತೀಚೆಗೆ ಅಥಿಯಾ ಅವರ ಕುಟುಂಬವನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಮುಂದಿನ ಮೂರು ತಿಂಗಳಲ್ಲಿ ಇವರಿಬ್ಬರ ಮದುವೆ ನಡೆಯಲಿದೆ ಎಂಬ ವದಂತಿಗಳಿಗೆ ಅಥಿಯಾ ಶೆಟ್ಟಿ ಇನ್ಸ್ಟಾಸ್ಟಾಗ್ರಾಮ್ ಮೂಲಕ ತಮಾಷೆಯ ಪ್ರತಿಕ್ರಿಯೆ ನೀಡಿದ್ದರು. “ಮೂರು ತಿಂಗಳಲ್ಲಿ ನಡೆಯುವ ಮದುವೆಗೆ ನನಗೂ ಆಹ್ವಾನ ಬರಬಹುದು ಎಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದರು. ಈ ಹೇಳಿಕೆಯಿಂದ ಮದುವೆ ಸದ್ಯಕ್ಕೆ ನಡೆಯದು ಎಂಬ ಗಾಸಿಪ್​ ಪುಷ್ಟಿ ಸಿಕ್ಕಿದಂತಾಗುತ್ತದೆ.

BOY FRIEND ಆರೈಕೆ ಮಾಡಿದ್ದ ಅಥಿಯಾ

ಕೆ.ಎಲ್‌ ರಾಹುಲ್‌ ಅವರು ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ಅಥಿಯಾ ಶೆಟ್ಟಿ ಖುದ್ದಾಗಿ ಮುಂದೆ ನಿಂತು ರಾಹುಲ್‌ ಆರೈಕೆ ಮಾಡಿದ್ದರು. ಅಂತೆಯೇ ಮೇ ತಿಂಗಳಲ್ಲಿ ಅಥಿಯಾ ಅವರ ಸಹೋದರ ವಿವಾಹದ ವದಂತಿಗಳ ಬಗ್ಗೆ ಮಾತನಾಡಿದರು.

“ಮದುವೆಗೆ ಸಂಬಂಧಿಸಿದಂತೆ, ಯಾವುದೇ ವ್ಯವಸ್ಥೆಗಳನ್ನು ಮಾಡಲಾಗುತ್ತಿಲ್ಲ. ಸದ್ಯ ಅಂತಹ ಯಾವುದೇ ಸಮಾರಂಭವಿಲ್ಲ, ಇದೆಲ್ಲವೂ ವದಂತಿಗಳು. ಮದುವೆಯೇ ಇಲ್ಲದಿರುವಾಗ, ನಾವು ನಿಮಗೆ ಹೇಗೆ ದಿನಾಂಕ ನೀಡುವುದು? ” ಎಂದು ಅಹಾನ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು.

ಇದಕ್ಕೂ ಮುನ್ನ ಸುನೀಲ್ ಶೆಟ್ಟಿ ಅವರು ರಾಹುಲ್ ಬಗ್ಗೆ ಅಭಿಮಾನದ ವ್ಯಕ್ತಪಡಿಸಿದ್ದರು. ಕೆಎಲ್ ರಾಹುಲ್ ಇಷ್ಟ ಎಂಬುದಾಗಿಯೂ ಹೇಳಿದ್ದರು.

ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. “ಕಾಲ ಬದಲಾಗಿದೆ. ಏನು ಮಾಡಬೇಕೆಂಬುದನ್ನು ಅವರೇ ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತದೆ,” ಎಂದು ನಟ ಹೇಳಿಕೊಂಡಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ಪರಸ್ಪರ ಫೋಟೋಗಳನ್ನು ಹಂಚಿಕೊಂಡು ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತಾರೆ. ಮದುವೆ ಬಗ್ಗೆ ಈ ಜೋಡಿಯಿಂದ ಮತ್ತು ಅವರ ಕುಟುಂಬದಿಂದ ಇನ್ನೂ ಯಾವುದೇ ಅಧೀಕೃತ ಮಾಹಿತಿ ಹೊರ ಬಂದಿಲ್ಲ.

ಇದನ್ನೂ ಓದಿ | Sushmita Sen | 15 ವರ್ಷ ಚಿಕ್ಕವನಿಂದ 10 ವರ್ಷ ಹಿರಿಯನವರೆಗೆ ಸರಸಮಯ ಜೀವನ!

Exit mobile version