Site icon Vistara News

KL Rahul : ಪತಿ ರಾಹುಲ್​ಗೆ ಭಾವನಾತ್ಮಕ ಸಂದೇಶ ಬರೆದ ಅಥಿಯಾ ಶೆಟ್ಟಿ

Athiya Shetty

ಬೆಂಗಳೂರು : ಏಷ್ಯಾಕಪ್ 2023ರ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 106 ಎಸೆತಗಳಲ್ಲಿ 111* ರನ್ ಗಳಿಸುವ ಮೂಲಕ ಭಾರತದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ (KL Rahul) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಭರ್ಜರಿ ಪುನರಾಗಮನ ಮಾಡಿದ್ದಾರೆ. ತಮ್ಮ ಶತಕದ ಮೂಲಕ, ರಾಹುಲ್ ದೀರ್ಘಕಾಲದಿಂದ ತಮ್ಮನ್ನು ಟೀಕಿಸುತ್ತಿದ್ದ ಹಲವರಿಗೆ ಉತ್ತರ ಕೊಟ್ಟಿದ್ದಾರೆ. ಏತನ್ಮಧ್ಯೆ,ರಾಹುಲ್ ಅವರ ಪತ್ನಿ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರ ಶತಕಕ್ಕಾಗಿ ವಿಶೇಷ ಪ್ರಶಂಸೆ ಕೊಟ್ಟಿದ್ದಾರೆ.

ರಾಹುಲ್ ಶತಕ ಆಚರಿಸುತ್ತಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಅಥಿಯಾ, “ಕರಾಳ ರಾತ್ರಿಯೂ ಕೊನೆಗೊಳ್ಳುತ್ತದೆ ಮತ್ತು ಸೂರ್ಯ ಉದಯಿಸುತ್ತಾನೆ… ನೀನೇ ಎಲ್ಲವೂ, ನಾನು ನಿನ್ನನ್ನು ಪ್ರೀತಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

ದೀರ್ಘಕಾಲದ ಗಾಯದ ನಂತರ ಕ್ರಿಕೆಟ್​ ಕ್ರೀಡಾಂಗಣಕ ಮರಳಿರುವ ಭಾರತದ ಬ್ಯಾಟರ್​ ಕೆಎಲ್ ರಾಹುಲ್ ಕೊಲಂಬೊದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ 2023 ಸೂಪರ್ 4 ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ ರಾಹುಲ್ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಶತಕವನ್ನು ಪೂರ್ಣಗೊಳಿಸಿದರು. ಪಾಕ್​ನ ವೇಗಿಗಳು ಹಾಗೂ ಮತ್ತು ಸ್ಪಿನ್ನರ್​ಗಳ ವಿರುದ್ಧ ಆರಾಮದಾಯಕ ಆಟವಾಡಿದ ಅವರು ಭಾರತ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವು ನೀಡಿದರು.

ಕೆಎಲ್ ರಾಹುಲ್ 47ನೇ ಓವರ್​ನಲ್ಲಿ ಶತಕ ಬಾರಿಸಿದರು. ತಮ್ಮ 6ನೇ ಏಕ ದಿನ ಶತಕ ಪೂರೈಸಲು ಅವರು ಕೊಹ್ಲಿಯೊಂದಿಗೆ ಎರಡು ರನ್​ಗಳಿಗೆ ಓಡಿದರು. ಮುಂದಿನ ಓವರ್​ನಲ್ಲಿ ಕೊಹ್ಲಿ 47 ನೇ ಶತಕವನ್ನು ಪೂರ್ಣಗೊಳಿಸಿದ ಮತ್ತು ಏಕದಿನ ಪಂದ್ಯಗಳಲ್ಲಿ 13000 ರನ್​ಗಳನ್ನು ಅತಿವೇಗದಲ್ಲಿ (267 ಇನಿಂಗ್ಸ್​) ಪೂರೈಸಿದ ದಾಖಲೆ ಬರೆದರು. ಇವರಿಬ್ಬರ ಅಜೇಯ 233 ರನ್​ಗಳ ಜೊತೆಯಾಟದ ಮೂಲಕ ಭಾರತ 50 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು.

ಅಂದ ಹಾಗೆ ಕೆ. ಎಲ್​ ರಾಹುಲ್ ಪ್ರತಿಬಾರಿಯೂ ಟೀಕಾಕಾರರ ಬಾಯಿಗೆ ಆಹಾರವಾಗುತ್ತಾರೆ. ಸೂಕ್ತವಾದ ಕ್ರಮಾಂಕ ಹೊಂದಿರದ ಅವರು ಉತ್ತಮವಾಗಿ ಆಡುತ್ತಿದ್ದರೂ ಕೆಲವೊಂದು ಬಾರಿ ವೈಫಲ್ಯಗಳನ್ನು ಎದುರಿಸುತ್ತಾರೆ. ಈ ವೇಳೆ ರಾಹುಲ್ ಅವರ ವೈಫಲ್ಯಗಳನ್ನೇ ಎತ್ತಿ ತೋರಿಸಿ ಹಿರಿಯ ಕ್ರಿಕೆಟಿಗರು ವಿಶ್ಲೇಷಣೆ ಮಾಡುತ್ತಾರೆ. ಅದರ ಜತೆಗೆ ಗಾಯದ ಸಮಸ್ಯೆಯೂ ಅವರನ್ನು ಆಗಾಗ ಕಾಡುತ್ತಿರುವುದು ಅವರ ಸ್ಥಾನಕ್ಕೆ ಕುತ್ತು ತರುತ್ತಿರುತ್ತದೆ. ಇದೀಗ ಶತಕ ಬಾರಿಸುವ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹೇಳಿದ್ದಾರೆ.

ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಔಟಾದ ನಂತರ ರಾಹುಲ್, ವಿರಾಟ್ ಕ್ರೀಸ್​ಗೆ ಬಂದಿದ್ದರು. ಮಳೆ ಆಟಕ್ಕೆ ಅಡ್ಡಿಪಡಿಸುವ ಮೊದಲು ಇವರಿಬ್ಬರು ಎಚ್ಚರಿಕೆಯಿಂದ ಆಟವಾಡಿದರು. ಅದರಲ್ಲೂ ರಾಹುಲ್ ಪಾಕ್​ ಸ್ಪಿನ್ನರ್​ಗಳ ಬೆಂಡೆತ್ತಿದರೆ ವಿರಾಟ್​ ಕೊಹ್ಲಿ ವೇಗಿಗಳಿಗೆ ತಕ್ಕ ಪಾಠ ಕಲಿಸಿದರು.

ಕೆಎಲ್ ರಾಹುಲ್ ಗಾಯದ ವಿವರ

Exit mobile version