Site icon Vistara News

ಎಟಿಪಿ ಡಬಲ್ಸ್ ಟೂರ್: 43ನೇ ವಯಸ್ಸಿನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೋಪಣ್ಣ

ATP Doubles Tour: Bopanna-Mathew duo crowned champions

ATP Doubles Tour: Bopanna-Mathew duo crowned champions

ವಾಷಿಂಗ್ಟನ್: ಇಂಡಿಯನ್‌ ವೆಲ್ಸ್‌ನಲ್ಲಿ ನಡೆದ ಬಿಎನ್‌ಪಿ ಪಾರಿಬಾಸ್ ಓಪನ್ ಟೆನಿಸ್ ಟೂರ್ನಿಯ(Indian Wells Masters) ಪುರುಷರ ಡಬಲ್ಸ್ ಫೈನಲ್‌ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ(RohanBopanna) ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್(Matthew Ebden) ಜೋಡಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

ಈ ಸಾಧನೆಯೊಂದಿಗೆ 43 ವರ್ಷದ ಬೋಪಣ್ಣ ಅವರು ಎಟಿಪಿ 1000 ಟೂರ್‌ನ ಅತ್ಯಂತ ಹಿರಿಯ ಚಾಂಪಿಯನ್ ಎಂಬ ಕೀರ್ತಿಗೆ ಪಾತ್ರರಾದರು. ಭೋಪಣ್ಣ–ಮ್ಯಾಥ್ಯೂ ಜೋಡಿ ಅಗ್ರ ಶ್ರೇಯಾಂಕಿತರಾದ ಡಚ್‌ನ ವೆಸ್ಲಿ ಕೂಲೋಫ್‌-ಬ್ರಿಟನ್‌ನ ನೀಲ್ ಸ್ಕಪ್‌ಸ್ಕಿ ಜೋಡಿಯನ್ನು 6-3, 2-6, 10-8 ಸೆಟ್‌ಗಳಿಂದ ಮಣಿಸಿದರು.

ವರ್ಷದ ಮೊದಲ ಪ್ರಶಸ್ತಿ ಗೆದ್ದ ಬೋಪಣ್ಣ ಜೋಡಿ

ಈ ಪಂದ್ಯವೂ ಸೇರಿ ಒಟ್ಟು ಎರಡು ಬಾರಿ ಇಂಡಿಯನ್ ವೆಲ್ಸ್ ಟೂರ್ನಿಯ ಡಬಲ್ಸ್ ಪಂದ್ಯವನ್ನು ರೋಹನ್ ಬೋಪಣ್ಣ–ಮ್ಯಾಥ್ಯೂ ಜೋಡಿ ಗೆದ್ದ ಸಾಧನೆ ಮಾಡಿದೆ. ಜತೆಗೆ ಅವರ ಈ ವರ್ಷದ ಮೊದಲ ಪ್ರಶಸ್ತಿಯಾಗಿದೆ. ವರ್ಷಾರಂಭದ ಮೊದಲ ಟೆನಿಸ್​ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್​ ಫೈನಲ್​ನಲ್ಲಿ ಸಾನಿಯಾ ಮಿರ್ಜಾ ಜತೆ ಆಡಿ ರನ್ನರ್​ ಅಪ್​ ಆಗಿದ್ದರು.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಬೋಪಣ್ಣ ’ಇಂಡಿಯನ್ ವೆಲ್ಸ್ ಟೆನಿಸ್‌ನ ಸ್ವರ್ಗ. ಈ ಟೂರ್ನಿಯಲ್ಲಿ ಆಡುವುದೇ ಸಂತೋಷ. ಮ್ಯಾಥ್ಯೂ ಜತೆ ಸೇರಿ ಈ ಬಿಎನ್‌ಪಿ ಟ್ರೋಫಿ ಗೆದ್ದಿರುವುದು ಇನ್ನೂ ಖುಷಿ ಕೊಟ್ಟಿದೆ. ವಯಸ್ಸು ಎನ್ನುವುದು ಕೇವಲ ನಂಬರ್​ ಮಾತ್ರ. ನಮ್ಮಲ್ಲಿ ಆಡುವ ಛಲ ಮತ್ತು ಸಾಮರ್ಥ್ಯವಿದ್ದರೆ ಎಲ್ಲವನ್ನು ಸಾಧಿಸಬಹುದು” ಎಂದು ಬೋಪಣ್ಣ ಹೇಳಿದರು.

Exit mobile version