ನವದೆಹಲಿ: ಭಾರತದ ಹಿರಿಯ ಟೆನಿಸ್ ಆಟಗಾರ ಕರ್ನಾಟಕದ ರೋಹನ್ ಬೋಪಣ್ಣ ಅವರು ನೂತನ ಟೆನಿಸ್ ಶ್ರೇಯಾಂಕದಲ್ಲಿ 7 ವರ್ಷಗಳ ಬಳಿಕ ಮತ್ತೆ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಪುರುಷರ ಡಬಲ್ಸ್‌ನ ವಿಶ್ವ ಶ್ರೇಯಾಂಕದಲ್ಲಿ 9ನೇ ಸ್ಥಾನ ಪಡೆದಿರುವ ಅವರು ಈ ಸಾಧನೆ ಮಾಡಿದ ಭಾರತದ ಅತಿ ಹಿರಿಯ ಟೆನಿಸಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು 41 ವರ್ಷದಲ್ಲಿ ಲಿಯಾಂಡರ್ ಪೇಸ್ ಹಾಗೂ 39 ವರ್ಷದ್ದಲ್ಲಿ ಮಹೇಶ್ ಭೂಪತಿ ಶ್ರೇಯಾಂಕ ಪಟ್ಟಿಯಲ್ಲಿ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದರು.
43 ವರ್ಷದ ಬೋಪಣ್ಣ ಇತ್ತೀಚೆಗೆ ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜತೆ ಆಡುವ ಮೂಲಕ ಇಂಡಿಯಾನಾ ವೆಲ್ಸ್ ಟೂರ್ನಿಯನ್ನು ಜಯಿಸಿದ್ದರು. ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್ ಓಪನ್ ಟೂರ್ನಿಗಳಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಸದ್ಯ ಮುಂದಿನ ವಾರ ಆರಂಭಗೊಳ್ಳಲಿರುವ ವರ್ಷದ ದ್ವಿತೀಯ ಗ್ರ್ಯಾನ್‌ಸ್ಲಾಮ್ ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿಯಲು ಬೋಪಣ್ಣ ಸಜ್ಜಾಗುತ್ತಿದ್ದಾರೆ. 2013ರ ಟೂರ್ನಿಯಲ್ಲಿ ಬೋಪಣ್ಣ 3ನೇ ಸ್ಥಾನ ಪಡೆದಿದ್ದರು. ಇದು ಅವರ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.
ಇದನ್ನೂ ಓದಿ Davis Cup: ಡೇವಿಸ್ ಕಪ್: ಭಾರತ ತಂಡಕ್ಕೆ ಡೆನ್ಮಾರ್ಕ್ ಸವಾಲು
ಆಸ್ಟ್ರೇಲಿಯನ್(Australian Open 2023) ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಮಿಶ್ರ ಡಬಲ್ಸ್ ಫೈನಲ್ನಲ್ಲಿ ಸಾನಿಯಾ ಮಿರ್ಜಾ ಜತೆಗೂಡಿ ಆಡಿದ್ದ ರೋಹನ್ ಬೋಪಣ್ಣ ರನ್ನರ್ ಅಪ್ ಸ್ಥಾನ ಪಡೆದಿದ್ದರು.