Site icon Vistara News

AUS VS SA | ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಿಂದ ಕ್ಯಾಮೆರಮನ್​ಗೆ ಗೇಟ್​ ಪಾಸ್​!

anrich nortje

ಮೆಲ್ಬೋರ್ನ್: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ(AUS VS SA) ವಿರುದ್ಧ ಎಂಸಿಜಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆ ಕ್ಯಾಮೆರಮನ್​ ದೊಡ್ಡ ಎಡವಟ್ಟೊಂದನ್ನು ಮಾಡಿದ್ದಾರೆ. ಈ ತಪ್ಪಿಗೆ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.

ದ್ವಿತೀಯ ಟೆಸ್ಟ್​ ಪಂದ್ಯದ ಮೂರನೇ ದಿನ ದಕ್ಷಿಣ ಆಫ್ರಿಕಾ ತಂಡದ ಅನ್ರಿಚ್​ ನೋರ್ಜೆ ಫೀಲ್ಡಿಂಗ್​ ನಡೆಸುತಿದ್ದರು. ಇದೇ ವೇಳೆ ವೇಗವಾಗಿ ಬಂದ ಸ್ಪೈಡರ್ ಕ್ಯಾಮ್ ನೋರ್ಜೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಈ ಪ್ರಮಾದಕ್ಕೆ ಕ್ಯಾಮೆರಮನ್​ಗೆ ಪಂದ್ಯದಿಂದ ಗೇಟ್​ ಪಾಸ್​ ನೀಡಲಾಗಿದೆ.

ಈ ಘಟನೆ ಬಳಿಕ ಪಂದ್ಯದ ಅಧಿಕೃತ ಪ್ರಸಾರಕರು ನೋರ್ಜೆ ಹಾಗೂ ದಕ್ಷಿಣ ಆಫ್ರಿಕಾ ತಂಡದ ಜತೆ ಕ್ಷಮೆಯಾಚಿಸಿದ್ದಾರೆ. “ಇದು ಅಪರೇಟರ್ ನಿಂದ ಆಗಿರುವ ಪ್ರಮಾದವಾಗಿದ್ದು, ಈ ತಪ್ಪಿಗೆ ಕ್ಷಮೆಯಾಚಿಸುತ್ತೇವೆ” ಎಂದು ಅಧಿಕೃತ ಪ್ರಸಾರಕ ಫಾಕ್ಸ್ ಸ್ಪೋಟ್ಸ್ ತಿಳಿಸಿದೆ.

ಕ್ಯಾಮೆರಾ ಬಡಿದ ಬಳಿಕ ಪ್ರತಿಕ್ರಿಕೆ ನೀಡಿದ ನೋರ್ಜೆ, ನನ್ನ ಬಲ ಭುಜ ಹಾಗೂ ಮೊಣಕೈಗೆ ಕ್ಯಾಮೆರ ಡಿಕ್ಕಿ ಹೊಡೆದರೂ ನಾನು ಆರೋಗ್ಯವಾಗಿದ್ದೇನೆ. ಇದು ಆಕಸ್ಮಿಕವಾಗಿ ಸಂಭವಿಸಿದ ಘಟನೆಯಾಗಿದೆ. ಈ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ನೋರ್ಜೆ ಖಚಿತಪಡಿಸಿದ್ದಾರೆ.

ಇದನ್ನೂ ಓದಿ | AUS VS SA | ದ್ವಿಶತಕ ಬಾರಿಸಿ ನೂರನೇ ಪಂದ್ಯವನ್ನು ಸ್ಮರಣೀಯಗೊಳಿಸಿದ ಡೇವಿಡ್​ ವಾರ್ನರ್​

Exit mobile version