Site icon Vistara News

AUS VS SA | ಪಂದ್ಯದ ಮಧ್ಯೆ ದಿಢೀರ್​​ ಬ್ಯಾಟಿಂಗ್​​ ನಿಲ್ಲಿಸಿ ಸಿಗರೇಟ್​​​ ಲೈಟರ್ ಕೇಳಿದ ಲಬುಶೇನ್; ವಿಡಿಯೊ ವೈರಲ್​

Marnus Labuschagne

ಸಿಡ್ನಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ(AUS VS SA) ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್​ಗೆ 147 ರನ್​ ಗಳಿಸಿದೆ. ಆದರೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಮಾರ್ನಸ್​ ಲಬುಶೇನ್​ ಮಾಡಿದ ಒಂದು ಸನ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬುಧವಾರ ಸಿಡ್ನಿಯಲ್ಲಿ ಆರಂಭಗೊಂಡ ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​ ನಡೆಸುವ ನಿರ್ಧಾರ ಮಾಡಿತು. ಅದರಂತೆ ಮೊದಲ ವಿಕೆಟ್​ ಪತನದ ಬಳಿಕ ಬ್ಯಾಟಿಂಗ್​​​​ ಮಾಡಲು ಕ್ರೀಸ್​ಗೆ ಬಂದ ಮಾರ್ನಸ್ ಲಬುಶೇನ್​ ಪಂದ್ಯದ ಮಧ್ಯೆಯೇ ​​ದಿಢೀರ್​​ ಸಿಗರೇಟ್​​ ಸೇದುವ ಲೈಟರ್​​ ಕೇಳಿ ಅಚ್ಚರಿ ಮೂಡಿಸಿದರು.

ಪಂದ್ಯ ನಡೆಯುತ್ತಿರುವಾಗಲೇ ದಿಢೀರ್ ಬ್ಯಾಟಿಂಗ್ ನಿಲ್ಲಿಸಿ ಮಾರ್ನಸ್ ಲಬುಶೇನ್ ತನ್ನ ಸಹ ಆಟಗಾರರಿಗೆ ಸಿಗರೇಟ್​​ ಲೈಟರ್​ ತನ್ನಿ ಎಂದು ಕೈಸನ್ನೆ ಮಾಡಿದ್ದಾರೆ. ಇದನ್ನು ಕಂಡ ಪ್ರೇಕ್ಷಕರು ಮತ್ತು ಅಂಪಾಯರ್​ಗಳು ಒಂದು ಕ್ಷಣ ಅಚ್ಚರಿಗೆ ಒಳಗಾದರು. ಪಂದ್ಯದ ಮಧ್ಯೆ ಯಾಕೆ ಸಿಗರೇಟ್​ ಲೈಟರ್​ ಕೇಳುತ್ತಿದ್ದಾರೆ? ಎಂದು ಎಲ್ಲರು ಕುತೂಹಲದಿಂದ ನೋಡುತ್ತಿದ್ದರು.

ಅಸಲಿಗೆ ಮಾರ್ನಸ್​​ ಲೈಟರ್​​​ ಕೇಳಿದ್ದು, ಸಿಗರೇಟ್​ ಸೇದಲು ಅಲ್ಲ. ಬದಲಿಗೆ ತನ್ನ ಹೆಲ್ಮೆಟ್​​ ಸರಿಪಡಿಸಲು. ಸಹ ಆಟಗಾರ ಲೈಟರ್ ತಂದ ಬಳಿಕ​​ ಲಬುಶೇನ್ ಲೈಟರ್​ ಹಚ್ಚಿ ಹೆಲ್ಮೆಟ್​ನಲ್ಲಿ ಆದ ದೋಷ ಸರಿಪಡಿಸಿದರು. ಬಳಿಕ ಕ್ರೀಸ್​ಗೆ ಬಂದು ಬ್ಯಾಟಿಂಗ್​ ಮುಂದುವರಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮೊದಲ ಇನಿಂಗ್ಸ್​ನಲ್ಲಿ ಲಬುಶೇನ್​ 79 ರನ್​ ಗಳಿಸಿ ಅನ್ರಿಚ್​ ನೋರ್ಜೆಗೆ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ | AUS VS SA | ದಕ್ಷಿಣ ಆಫ್ರಿಕಾ ವಿರುದ್ಧ 16 ವರ್ಷಗಳ ಬಳಿಕ ಟೆಸ್ಟ್​ ಸರಣಿ ಗೆದ್ದ ಆಸ್ಟ್ರೇಲಿಯಾ ತಂಡ!

Exit mobile version