Site icon Vistara News

AUS VS SA | ಶತಕ ಬಾರಿಸಿ ಡಾನ್‌ ಬ್ರಾಡ್‌ಮನ್‌ ದಾಖಲೆ ಮುರಿದ ಸ್ವೀವನ್​ ಸ್ಮಿತ್​!

steve smith

ಸಿಡ್ನಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯದಲ್ಲಿ ಸ್ಟೀವನ್​ ಸ್ಮಿತ್(104)​ ಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ವೃತ್ತಿಜೀವನದ 30ನೇ ಟೆಸ್ಟ್ ಶತಕ ಪೂರ್ತಿಗೊಳಿಸಿ ಕ್ರಿಕೆಟ್​ ದಂತಕಥೆ ಡಾನ್‌ ಬ್ರಾಡ್‌ಮನ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಸಿಡ್ನಿಯಲ್ಲಿ ನಡೆಯುತ್ತಿರುವ ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸುತ್ತಿರುವ ಆಸ್ಟ್ರೇಲಿಯಾ 2ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 475 ರನ್​ ಗಳಿಸಿದೆ. ದ್ವಿತೀಯ ದಿನ ಬ್ಯಾಟಿಂಗ್​ ಆರಂಭಿಸಿದ ಸ್ಟೀವನ್​ ಸ್ಮಿತ್​ ಒಟ್ಟು 190 ಎಸೆತಗಳನ್ನು ಎದುರಿಸಿ 104ರನ್ ಗಳಿಸಿ ಕೇಶವ್ ಮಹಾರಾಜ್‌ಗೆ ವಿಕೆಟ್​ ಒಪ್ಪಿಸಿದರು.​ ಇದೇ ವೇಳೆ ಶತಕ ಬಾರಿಸಿ ಮಿಂಚಿದ ಸ್ಮಿತ್,​ ತನ್ನದೇ ದೇಶದ ಕ್ರಿಕೆಟ್​ ದಿಗ್ಗಜ ಡಾನ್ ಬ್ರಾಡ್​ಮನ್​ ಅವರ 29 ಶತಕಗಳ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಆರಂಭಿಕ ಆಟಗಾರ ಉಸ್ಮಾನ್​ ಖ್ವಾಜಾ ಅಜೇಯ 195 ರನ್ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಸ್ಟೀವನ್​ ಸ್ಮಿತ್ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ. ಆಸ್ಟ್ರೇಲಿಯಾ ಪರ ಗರಿಷ್ಠ ಟೆಸ್ಟ್ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೈಕಲ್ ಕ್ಲಾರ್ಕ್ ಅವರನ್ನು ಹಿಂದಿಕ್ಕಿ 4ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಲಾರ್ಕ್‌ 115 ಟೆಸ್ಟ್ ಪಂದ್ಯಗಳನ್ನಾಡಿ 8643 ರನ್ ಬಾರಿಸಿದ್ದರು. ಇದೀಗ ಸ್ಮಿತ್ 92 ಟೆಸ್ಟ್‌ ಪಂದ್ಯಗಳನ್ನಾಡಿ 8,647 ರನ್ ಬಾರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಉಳಿದಂತೆ ರಿಕಿ ಪಾಂಟಿಂಗ್(13,378), ಅಲೆನ್ ಬಾರ್ಡರ್(11,174) ಹಾಗೂ ಸ್ಟೀವ್ ವಾ(10,927) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿರುವ ಆಟಗಾರರಾಗಿದ್ದಾರೆ.

ಇದನ್ನೂ ಓದಿ | AUS VS SA | ಪಂದ್ಯದ ಮಧ್ಯೆ ದಿಢೀರ್​​ ಬ್ಯಾಟಿಂಗ್​​ ನಿಲ್ಲಿಸಿ ಸಿಗರೇಟ್​​​ ಲೈಟರ್ ಕೇಳಿದ ಲಬುಶೇನ್; ವಿಡಿಯೊ ವೈರಲ್​

Exit mobile version