ಲಕ್ನೋ: ಇನ್ನೂ ಗೆಲುವಿನ ಖಾತೆ ತೆರೆಯದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ(Australia vs Sri Lanka) ತಂಡಗಳು ಗೆಲುವಿನ ಹುಡುಕಾಟ ನಡೆಸಲಿವೆ. ಅದೃಷ್ಟದ ವಿಷಯದಲ್ಲಿ ಇತ್ತಂಡಗಳು ಒಂದೇ ದೋಣಿಯ ಪಯಣಿಗರು. ಹೊಡ್ಡ ಮೊತ್ತ ಪೇರಿಸಿದರೂ ಗೆಲುವು ಮಾತ್ರ ಒಲಿಯುತ್ತಿಲ್ಲ. ಆದರೆ ಈ ಪಂದ್ಯದಲ್ಲಿ ಒಂದು ತಂಡ ಗೆಲುವಿನ ಖಾತೆ ತೆರೆಯಲಿದೆ. ಈ ತಂಡ ಯಾವುದು ಎಂಬುದು ಪಂದ್ಯದ ಕೌತುಕ. ಸೋಮವಾರ ಲಕ್ನೋದಲ್ಲಿ ಈ ಪಂದ್ಯ ನಡೆಯಲಿದೆ.
ಲಂಕಾಗೆ ಗಾಯದ ಚಿಂತೆ
ಲಂಕಾ ತಂಡ ಗಾಯದ ಚಿಂತೆಯಲ್ಲೇ ವಿಶ್ವಕಪ್ ಆಡಲಿಳಿದಿತ್ತು. ಇದೀಗ ನಾಯಕ ದಶುನ್ ಶನಕ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ಹೊಡೆದ ಬಿದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡ ಮಹೀಶ ತೀಕ್ಷಣ ಕೂಡ ಗಾಯಗೊಂಡು ಇನ್ನೂ ಚೇತರಿಕೆ ಕಾಣುತ್ತಿದ್ದಾರೆ. ಒಟ್ಟಾರೆ ಲಂಕಾಗೆ ಈ ಬಾರಿ ಗಾಯದ ಸಮಸ್ಯೆ ಬೆನ್ನುಹತ್ತಿದೆ.
ಬ್ಯಾಟಿಂಗ್ ವಿಚಾರದಲ್ಲಿ ಲಂಕಾ ಬಲಿಷ್ಠವಾಗಿದೆ. ಕುಸಲ್ ಮೆಂಡೀಸ್, ಪಾಥುಮ್ ನಿಶಂಕ, ಧನಂಜಯ ಡಿ ಸಿಲ್ವ ಇವರೆಲ್ಲ ದೊಡ್ಡ ಮೊತ್ತ ಪೇರಿಸುವಲ್ಲಿ ಸಮರ್ಥರಿದ್ದಾರೆ. ಆದರೆ ಬೌಲಿಂಗ್ ಮಾತ್ರ ಕೈಕೊಡುತ್ತಿದೆ. 350ರ ಗಡಿ ದಾಟಿದರೂ ಇದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ಸಮಸ್ಯೆ ಬಗೆಹರಿದರೆ ತಂಡ ಗೆಲುವಿನ ಹಳಿ ಏರಬಹುದು.
ನೀರಸ ಪ್ರದರ್ಶನ ತೋರುತ್ತಿರುವ ಆಸೀಸ್
5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿಶ್ವಕಪ್ ಇತಿಹಾಸದಲ್ಲಿ ಇಷ್ಟೋಂದು ಕಳೆಪೆ ಪ್ರದರ್ಶನ ನೀಡಿದ್ದು ಇದೇ ಮೊದಲು. ಘಟಾನುಘಟಿ ಆಟಗಾರರನ್ನೇ ನೆಚ್ಚಿಕೊಂಡಿದ್ದರೂ ತಂಡದ ಪ್ರದರ್ಶನ ಮಾತ್ರ ಅತ್ಯಂತ ಕಳಪೆ. 11 ಮಂದಿ ಆಟಗಾರರು ಕೂಡ ವಿಶ್ವ ಶ್ರೇಯಾಂಕದಲ್ಲಿ ಟಾಪ್ 10 ಶ್ರೇಯಾಂಕದಲ್ಲಿರುವವರೆ. ಆದರೆ ಇವರು ತೋರುತ್ತಿರುವ ಪ್ರದರ್ಶನ ಕಂಡಾಗ ನಿಜಕ್ಕೂ ಬೇಸರ ಮೂಡಿಸಿದೆ. ಈ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಸೋಲು ಕಂಡರೆ ಲೀಗ್ ಹಂತದಲ್ಲೇ ಹೊರಬೀಳುವುದು ಖಚಿತ. ಈಗಾಗಲೇ ಸೆಮಿಫೈನಲ್ಗಾಗಿ ನಾಲ್ಕು ಪಂದ್ಯಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಆಸೀಸ್ ಈ ಪಂದ್ಯದಿಂದಲೇ ಗೆಲುವಿನ ಹಾದಿ ಹಿಡಿಯಬೇಕಿದೆ.
ಇದನ್ನೂ ಓದಿ IND vs PAK: ಶೋಯೆಬ್ ಅಖ್ತರ್ ಕಾಲೆಳೆದ ಸಚಿನ್ ತೆಂಡೂಲ್ಕರ್-ವೀರೇಂದ್ರ ಸೆಹವಾಗ್
ಪಿಚ್ ರಿಪೋರ್ಟ್
ಲಕ್ನೋದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನ ನೂತನ ಪಿಚ್ ಈಗ ವೇಗಿಗಳಿಗೆ ನೆರವು ನೀಡುತ್ತದೆ. ಇದಕ್ಕೆ ಕಳೆದ ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯವೇ ಸಾಕ್ಷಿ. ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ಗೆಲ್ಲುವಿನ ಅವಕಾಶ ಹೆಚ್ಚು. ಚೇಸಿಂಗ್ ನಡೆಸಲು ಬಲು ಕಷ್ಟ. ಈ ಮಾತನ್ನು ಸ್ವತಃ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರೇ ಹೇಳಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಆಸೀಸ್ ಟಾಸ್ ಗೆದ್ದರೆ ತಪ್ಪಿಯೂ ಬೌಲಿಂಗ್ ಆಯ್ಕೆ ಮಾಡಲು ಸಾಧ್ಯವಿಲ್ಲ. ಟಾಸ್ ಗೆದ್ದ ತಂಡಕ್ಕೆ ಹೆಚ್ಚಿನ ಅವಕಾಶ.
ಸಂಭಾವ್ಯ ತಂಡ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಜಲ್ವುಡ್.
ಶ್ರೀಲಂಕಾ: ಕುಸಲ್ ಪೆರೇರ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್(ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ,, ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ಕಸುನ್ ರಜಿತ. ಚಾಮಿಕಾ ಕರುಣಾರತ್ನೆ.