Site icon Vistara News

AUS VS WI | ಗಾಯದಿಂದ ಪ್ಯಾಟ್​ ಕಮಿನ್ಸ್​ ಔಟ್​; ದ್ವಿತೀಯ ಟೆಸ್ಟ್​ಗೆ ಸ್ವೀವನ್​ ಸ್ಮಿತ್​​ ನಾಯಕ

Smith is the captain of the Aussie team for the fourth match

ಅಡಿಲೇಡ್​: ವೆಸ್ಟ್​ ಇಂಡೀಸ್​ (AUS VS WI) ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯ ಗುರುವಾರ(ಡಿ.8) ಆರಂಭವಾಗಲಿದೆ. ಇದೀಗ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾಕ್ಕೆ ಆಘಾತ ಎದುರಾಗಿದೆ. ತಂಡದ ನಾಯಕ ಹಾಗೂ ಪ್ರಧಾನ ವೇಗಿ ಪ್ಯಾಟ್​ ಕಮಿನ್ಸ್​ ಗಾಯದಿಂದ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸ್ವೀವನ್​ ಸ್ಮಿತ್​ಗೆ ನಾಯಕತ್ವ ವಹಿಸಲಾಗಿದೆ.

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ವೇಳೆ ಗಾಯಕ್ಕೆ ಸಿಲುಕಿದ ಪ್ಯಾಟ್ ಕಮ್ಮಿನ್ಸ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರ ಬದಲಿಗೆ ಸ್ಕಾಟ್ ಬೋಲ್ಯಾಂಡ್ ಆಯ್ಕೆಯಾಗಿದ್ದು, ಸ್ಮಿತ್​ಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ. ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾದ ನಂತರ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ನಾಯಕರಾಗಲಿದ್ದಾರೆ.

“ಅಡಿಲೇಡ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಗುರುವಾರ ಆರಂಭವಾಗುವ ದ್ವಿತೀಯ ಟೆಸ್ಟ್​ ಪಂದ್ಯಕ್ಕೆ ಅವರು ಸಂಪೂರ್ಣವಾಗಿ ಫಿಟ್ ಆಗದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ” ಎಂದು ಆಸ್ಟ್ರೇಲಿಯಾ ತಂಡದ ವೈದ್ಯಕೀಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಕಮ್ಮಿನ್ಸ್ ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | IND VS BAN | ಫೀಲ್ಡಿಂಗ್​ ವೇಳೆ ಗಾಯ; ಆಸ್ಪತ್ರೆಗೆ ದಾಖಲಾದ ನಾಯಕ ರೋಹಿತ್​ ಶರ್ಮಾ

Exit mobile version