ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ(AUS vs WI) ಘಾತಕ ವೇಗಿ ಮಿಚೆಲ್ ಸ್ಟಾರ್ಕ್(Mitchell Starc) ಅವರು ವೆಸ್ಟ್ ಇಂಡೀಸ್ ತಂಡದ ಆಟಗಾರನ ಕಾಲಿನ ಬೆರಳನ್ನು ಮುರಿದ ಘಟನೆ ನಡೆದಿದೆ. ಶಮರ್ ಜೋಸೆಫ್(Shamar Joseph) ಬೆರಳು ಮುರಿತಕ್ಕೊಳಗಾದ ಆಟಗಾರ.
ಗಾಬಾದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನ 73ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕೊನೆಯ ಕ್ರಮಾಂಕದಲ್ಲಿ ಆಡಲಿಳಿದ ಶಮರ್ ಜೋಸೆಫ್ ಮೂರು ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಸ್ಟಾರ್ಕ್ ಯಾರ್ಕರ್ ಎಸೆತವೊಂದನ್ನು ಎಸೆದರು. ಇದು ನೇರವಾಗಿ ಶಮರ್ ಜೋಸೆಫ್ ಕಾಲಿಗೆ ಬಡಿಯಿತು. ತಕ್ಷಣ ನೋವಿನಿಂದ ನರಳಿದ ಅವರು ಶೂಗಳನ್ನು ತೆಗೆದು ಮೈದಾನದಲ್ಲೇ ಮಲಗಿದರು.
ಗಾಯಗೊಂಡ ಜೋಸೆಫ್ಗೆ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದರು. ಆದರೆ, ಗಾಯದ ಪರಿಣಾಮ ಗಂಭೀರವಾಗಿ ಎದು ನಿಲ್ಲಲಾಗ ಕಾರಣ ಜೋಸೆಫ್ ರಿಟೈರ್ಡ್ ಹರ್ಟ್ ಆಗಿ ಕುಂಟುತಾ ಮೈದಾನ ತೊರೆದರು. ಅವರನ್ನು ಸಹ ಆಟಗಾರರು ಭುಜದ ಬಲದಿಂದ ಮೈದಾನದಿಂದ ಡ್ರೆಸ್ಸಿಂಗ್ ರೂಮ್ಗೆ ಕರೆ ತಂದರು.
ಇದನ್ನೂ ಓದಿ IND vs ENG: ಬೆನ್ ಸ್ಟೋಕ್ಸ್ ಕ್ಲೀನ್ ಬೌಲ್ಡ್ ಮಾಡಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಅಶ್ವಿನ್
Shamar Joseph has to retire hurt after this toe-crusher from Mitch Starc!
— cricket.com.au (@cricketcomau) January 27, 2024
Australia need 216 to win #AUSvWI pic.twitter.com/3gAucaEfwg
ನೋಬಾಲ್ ಎಸೆದ ಸ್ಟಾರ್ಕ್
ಸ್ಟಾರ್ಕ್ ಅವರ ಈ ಎಸೆತ ನೋ ಬಾಲ್ ಆಗಿತ್ತು. ಆಸ್ಟ್ರೇಲಿಯಾ ತಂಡ ಎಲ್‌ಬಿಡಬ್ಲ್ಯುಗಾಗಿ ಮನವಿ ಮಾಡಿದ ವೇಳೆ ಅಂಪೈರ್ ನೋ ಬಾಲ್ ನೀಡಿದರು. ಔಟ್ನಿಂದ ಪಾರಾದ ಜೋಸೆಫ್ ಗಾಯದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಅವರ ಬೆರಳು ಮುರಿತಗೊಂಡಿದೆ ಎಂದು ವಿಂಡೀಸ್ನ ಫಿಸಿಯೊ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯ ಗೆಲ್ಲಲು ಇನ್ನು 156 ರನ್ಗಳ ಅತ್ಯವಿದೆ. ಸದ್ಯ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ನಲ್ಲಿ 60 ರನ್ಗೆ 2 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಸ್ಟೀವನ್ ಸ್ಮಿತ್(33) ಮತ್ತು ಕ್ಯಾಮರೂನ್ ಗ್ರೀನ್(9) ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 311 ರನ್ಗಳಿಸಿದ್ದ ವಿಂಡೀಸ್ ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮರೆತವರಂತೆ ಆಡಿ 193ರನ್ಗೆ ಸರ್ವಪತನ ಕಂಡಿತು.
ಅಡಿಲೇಡ್ ಓವಲ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ವೆಸ್ಟ್ ಇಂಡೀಸ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ತವರು ತಂಡವು 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಇದೀಗ ದ್ವಿತೀಯ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಹಂತದಲ್ಲಿದೆ. ಪ್ರಸ್ತುತ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಆಸೀಸ್ ಅಂತಿಮ ಪಂದ್ಯ ಗೆದ್ದರೆ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಟೆಸ್ಟ್ ಮುಗಿದ ಬಳಿಕ ಉಭಯ ತಂಡಗಳು ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ.