Site icon Vistara News

ಆಸೀಸ್​-ಪಾಕ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಬವುಮಾ ಪಡೆ ಸೆಮಿಗೆ ಲಗ್ಗೆ

Jos Buttler cuts a forlorn figure

ಬೆಂಗಳೂರು: ಶನಿವಾರ ನಡೆದ ವಿಶ್ವಕಪ್​ನ ಡಬಲ್​ ಹೆಡರ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡ ಗೆಲುವು ಸಾಧಿಸಿದರೆ, ನ್ಯೂಜಿಲ್ಯಾಂಡ್​ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಸೋಲು ಕಂಡಿದೆ. ಆಸೀಸ್​ ವಿರುದ್ಧ ಸೋಲು ಕಂಡ ಇಂಗ್ಲೆಂಡ್​ ಅಧಿಕೃತವಾಗಿ ಸೆಮಿಫೈನಲ್​ ರೇಸ್​ನಿಂದ ಹೊರಬಿದ್ದಿದೆ. ಅತ್ತ ಪಾಕ್​ ಗೆಲುವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಆಡುವ ಮೊದಲೇ 2ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಸದ್ಯ ಅಂಕಪಟ್ಟಿಯಲ್ಲಿ(World Cup 2023 – Points Table) ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಲ್ಲಿದೆ.

ಕಿವೀಸ್​ ಸೋಲಿನಿಂದ ಹರಿಣ ಪಡೆ ಸೆಮಿಗೆ

ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿ ಟಿಕೆಟ್​ ಪಡೆಯಬೇಕಿದ್ದರೆ ಅದು ಭಾರತ ಅಥವಾ ಅಫಘಾನಿಸ್ತಾನ ನಡುವಣ ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಸಾಧಿಸಬೇಕಿತ್ತು. 7 ಪಂದ್ಯ ಆಡಿ 12 ಅಂಕದೊಂದಿಗೆ 2ನೇ ಸ್ಥಾನದಲ್ಲಿತ್ತು. ಆದರೆ ನ್ಯೂಜಿಲ್ಯಾಂಡ್​ ತಂಡ ಪಾಕಿಸ್ತಾನ ವಿರುದ್ಧ ಸೋಲು ಕಂಡ ಕಾರಣ ಈ ದಕ್ಷಿಣ ಆಫ್ರಿಕಾ ಸೆಮಿ ಫೈನಲ್​ ಪ್ರವೇಶ ಪಡೆಯಿತು.

ಇದು ಹೇಗೆಂದರೆ ಕಿವೀಸ್​ಗೆ ಇನ್ನು ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಇದನ್ನು ಗೆದ್ದರೂ 10 ಅಂಕ ಮಾತ್ರ ಆಗಲಿದೆ. ಅತ್ತ ಪಾಕ್​ಗೂ ಇನ್ನೊಂದೇ ಪಂದ್ಯ ಬಾಕಿ ಉಳಿದಿದೆ. ಪಾಕ್​ ಕೂಡ ಈ ಪಂದ್ಯ ಗೆದ್ದರೆ 10 ಅಂಕ ಮಾತ್ರ ಸಿಗಲಿದೆ. ಉಭಯ ತಂಡಗಳೂ ಎಷ್ಟೇ ದೊಡ್ಡ ಅಂತರದಿಂದ ಪಂದ್ಯ ಗೆದ್ದರೂ ಇನ್ನು ದಕ್ಷಿಣ ಆಫ್ರಿಕಾ ತಂಡದ ಅಂಕವನ್ನು ಮೀರಲು ಸಾಧ್ಯವಾಗುದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಎಡರನೇ ತಂಡವಾಗಿ ಸೆಮಿಫೈನಲ್​ ಪ್ರವೇಶ ಪಡೆದಿದೆ. ಭಾರತ ತಂಡ ಲಂಕಾವನ್ನು ಮಣಿಸಿ ಮೊದಲ ತಂಡವಾಗಿ ಸೆಮಿಗೆ ಲಗ್ಗೆಯಿಟ್ಟಿತ್ತು.

ಇದನ್ನೂ ಓದಿ ಭಾರತ ವಿರುದ್ಧ ಆಡುವ ಮುನ್ನವೇ ಸೆಮಿಫೈನಲ್​ ತಲುಪಿದ ದಕ್ಷಿಣ ಆಫ್ರಿಕಾ

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ77014+2.102
ದಕ್ಷಿಣ ಆಫ್ರಿಕಾ76112+2.290
ಆಸ್ಟ್ರೇಲಿಯಾ​75210+0.924
ನ್ಯೂಜಿಲ್ಯಾಂಡ್8448+0.398
ಪಾಕಿಸ್ತಾನ8448+0.036
ಅಫಘಾನಿಸ್ತಾನ7438-0.330
ಶ್ರೀಲಂಕಾ 7254-1.162
ನೆದರ್ಲ್ಯಾಂಡ್ಸ್7254-1.398
ಬಾಂಗ್ಲಾದೇಶ​ 7162-1.446
ಇಂಗ್ಲೆಂಡ್​​​ 7162-1.504

ಕಿವೀಸ್​ ಗೆಲುವು ಕಂಡಿದ್ದರೇ?

ಒಂದೊಮ್ಮೆ ನ್ಯೂಜಿಲ್ಯಾಂಡ್​ ತಂಡ ಇಂದು ಪಾಕಿಸ್ತಾನ ವಿರುದ್ಧ ಗೆದ್ದಿದ್ದರೆ ದಕ್ಷಿಣ ಆಫ್ರಿಕಾ ತಂಡಕ್ಕೆ ಇನ್ನೊಂದು ಗೆಲುವು ಅತ್ಯಗತ್ಯವಾಗಿತ್ತು. ಸದ್ಯ ಸೆಮಿ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡ ಯಾವುದೇ ನಿಶ್ಚಿಂತೆ ಇಲ್ಲದೆ ಭಾನುವಾರ ಭಾರತ ವಿರುದ್ಧ ಕಣಕಿಳಿಯಬಹುದಾಗಿದೆ.

ಆಫ್ಘನ್​-ಆಸೀಸ್ ಸೋತರಷ್ಟೇ ಅವಕಾಶ

ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಕಾರಣ ಸದ್ಯ ತಂಡದ ಅಂಕ 10ಕ್ಕೇರಿದೆ. ಅಲ್ಲದೆ ಮೂರನೇ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇನ್ನು 12 ಅಂಕ ಸಂಪಾದಿಸಲು ಅವಕಾಶವಿರುವುದು ಅಫಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ. ಆದರೆ ಇಲ್ಲಿ ಅಫಘಾನಿಸ್ತಾನ 2 ಪಂದ್ಯವನ್ನು ಗಲ್ಲಬೇಕು. ಒಂದು ಪಂದ್ಯ ಆಸೀಸ್​ ವಿರುದ್ಧವೇ ಇದೆ. ಈ ಪಂದ್ಯದಲ್ಲಿ ಆಸೀಸ್​ ಸೋಲು ಕಂಡರೂ ಅಂತಿಮ ಪಂದ್ಯದಲ್ಲಿ ಗೆಲುವು ಕಂಡರೆ ಆಸೀಸ್​ಗೂ 12 ಅಂಕ ಆಗಲಿದೆ. ಆಗ ಆಫ್ಘನ್​ ಮತ್ತು ಆಸೀಸ್​ ಸೆಮಿಫೈನಲ್​ ಪ್ರವೇಶ ಪಡೆಯಲಿದೆ. ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಒಟ್ಟಾರೆ ಆಸೀಸ್​ ಮತ್ತು ಆಫ್ಘನ್​ ತಂಡದ ಗೆಲುವಿನ ಫಲಿತಾಂಶದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ತಂಡ ಸೆಮಿ ಭವಿಷ್ಯ ಅಡಗಿದೆ.

ಪಾಕಿಸ್ತಾನ ತಂಡದ ಗೆಲುವುನಿಂದ ಅಫಘಾನಿಸ್ತಾನ ಒಂದು ಸ್ಥಾನ ಕುಸಿತ ಕಂಡು ಸದ್ಯ 6ರಲ್ಲಿ ಕಾಣಿಸಿಕೊಂಡಿದೆ. ಉಭಯ ತಂಡಗಳಿಗೂ ಸಮಾನ 8 ಅಂಕ ಇದ್ದರೂ ರನ್​ರೇಟ್​ನಲ್ಲಿ ಮುಂದಿರುವ ಕಾರಣ ಪಾಕ್​ಗೆ 5ನೇ ಸ್ಥಾನ ಸಿಕ್ಕಿದೆ.

Exit mobile version