Site icon Vistara News

Glenn Maxwell: ಕಂಠ ಪೂರ್ತಿ ಕುಡಿದು ಆಸ್ಪತ್ರೆ ಸೇರಿದ ಆಸೀಸ್​ ಕ್ರಿಕೆಟಿಗ ಗ್ಲೆನ್​ ಮ್ಯಾಕ್ಸ್​ವೆಲ್​

glenn maxwell

ಮೆಲ್ಬೊರ್ನ್​: ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಅವರು ಕಂಠ ಪೂರ್ತಿ ಕುಡಿದು ಅಸ್ವಸ್ಥರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ತಡ ರಾತ್ರಿ ಪಾರ್ಟಿ ಮಾಡಿದ ಬಳಿಕ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮ್ಯಾಕ್ಸ್​ವೆಲ್ ಆಸ್ಪತ್ರೆ ಸೇರಿ ಈಗ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ.

ದಿ ಡೈಲಿ ಟೆಲಿಗ್ರಾಫ್ ವರದಿ ಪ್ರಕಾರ, ಅಡಿಲೇಡ್​ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಏರ್ಪಡಿಸಿದ್ದ ಮದ್ಯಪಾನ ಪಾರ್ಟಿಯಲ್ಲಿ ಅತಿಯಾಗಿ ಕುಡಿದ ಮ್ಯಾಕ್ಸ್​ವೆಲ್​ ಅನಾರೋಗ್ಯಕ್ಕೀಡಾದರು. ತಕ್ಷಣ ಅವರನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದೆ. ಹಿಂದೊಮ್ಮೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್​ವೆಲ್​ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್​ವೆಲ್​ ಹೊರಬಿದ್ದಿದ್ದರು.

ಸದ್ಯ ಚೇತರಿಕೆ ಕಂಡಿರುವ ಮ್ಯಾಕ್ಸ್​ವೆಲ್​ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಉಭಯ ತಂಡಗಳ ಏಕದಿನ ಸರಣಿ ಫೆಬ್ರವರಿ 2ರಿಂದ ಆರಂಭಗೊಳ್ಳಲಿದೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮ್ಯಾಕ್ಸ್​ವೆಲ್ ಗಾಯದ ಮಧ್ಯೆಯೂ​ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಅಜೇಯ ದ್ವಿಶಯಕ ಬಾರಿಸಿ ಆಸ್ಟ್ರೇಲಿಯಾ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.

ಇದನ್ನೂ ಓದಿ Suryakumar Yadav : ಮ್ಯಾಕ್ಸ್​ವೆಲ್​, ರೋಹಿತ್​ ದಾಖಲೆ ಸರಿಗಟ್ಟಿದ ಸೂರ್ಯಕುಮಾರ್​

ಗಾಯದ ಮಧ್ಯೆಯೂ ಹೋರಾಟ


ಮ್ಯಾಕ್ಸ್​ವೆಲ್​ ಶತಕ ಬಾರಿಸಿದ ತಕ್ಷಣ ಬೆನ್ನು ನೋವಿಗೆ ಒಳಗಾದರು. ಬಳಿಕ ಅವರು ಅದಕ್ಕೆ ಮೈದಾನದಲ್ಲೇ ಫಿಸಿಯೊಗಳ ಮೂಲಕ ಆರೈಕೆ ಮಾಡಿಸಿಕೊಂಡರು. ಬಳಿಕ ಅವರು ಕಾಲು ನೋವಿಗೆ ಒಳಗಾದರು. ಪದೇ ಪದೇ ನೋವಿಗೆ ಒಳಗಾಗಿ ಮೈದಾನದಲ್ಲಿ ರನ್​ಗಾಗಿ ಓಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಒಳಗಾದರು. ಮುಂಬಯಿಯ ಬಿಸಿಲಿನಲ್ಲಿ ಆಡಿದ್ದ ಅವರಿಗೆ ಬ್ಯಾಟಿಂಗ್​ನ ಕೊನೇ ಹಂತದಲ್ಲಿ ನಡೆಯಲೂ ಸಾಧ್ಯವಾಗಲಿಲ್ಲ. ಆದರೂ ಕೆಚ್ಚೆದೆಯಿಂದ ಹೋರಾಡಿ ಗೆದ್ದರು.

2022ರ ಮಾರ್ಚ್‌ 18ರಂದು ಮ್ಯಾಕ್ಸ್‌ವೆಲ್‌ ಮತ್ತು ವಿನಿ ರಾಮನ್‌ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಅಲ್ಲದೆ ಭಾರತೀಯ ಸಂಪ್ರದಾಯದಂತೆ ಸೀಮಂತ ಕೂಡ ಮಾಡಿ ಎಲ್ಲರ ಗಮನಸೆಳೆದಿದ್ದರು. ಈ ಜೋಡಿಗೆ ಮುದ್ದಾದ ಒಂದು ಗಂಡು ಮಗುವಿದೆ. ಮಗುವಿನ ಹೆಸರು ಲೋಗನ್‌ ಮಾವೆರಿಕ್‌(Logan Maverick).

Exit mobile version