Site icon Vistara News

Team India : ಆಸ್ಟ್ರೇಲಿಯಾ ವಿರುದ್ಧದ ಸರಣಿ ಅಶ್ವಿನ್​ಗೆ ಕೇವಲ ಅವಕಾಶ; ದ್ರಾವಿಡ್​ ಹೀಗೆ ಹೇಳಿದ್ದೇ ಅಚ್ಚರಿ!

Rahul dravid

ಮೊಹಾಲಿ: ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಅವರಂತಹ ಪ್ರಮುಖ ಆಟಗಾರರು ಗಾಯಗೊಂಡರೆ 2023 ರ ಐಸಿಸಿ ವಿಶ್ವಕಪ್​​ನಲ್ಇ ತಮ್ಮ ತಂಡಕ್ಕೆ ನಷ್ಟವಾಗಬಹುದು ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈ ಹಿಂದೆ ಸುಳಿವು ನೀಡಿದ್ದರು. 1983 ಮತ್ತು 2011ರ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾ (Team India) 12 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸಲಿದೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುವ ಮೊದಲು, ಟೀಮ್ ಇಂಡಿಯಾ ಶುಕ್ರವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ (ಒಡಿಐ) ಸರಣಿಗಾಗಿ ಐದು ಬಾರಿಯ ವಿಶ್ವ ಚಾಂಪಿಯನ್ಸ್ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಸ್ಪಿನ್ ಬೌಲಿಂಗ್ ಆಲ್​​ರೌಂಡರ್​ ಅಕ್ಷರ್​ ಪಟೇಲ್​ ಏಷ್ಯಾಕಪ್ ಫೈನಲ್​ನಿಂದ ಹೊರಗುಳಿದಿದ್ದರಿಂದ ಟೀಮ್ ಇಂಡಿಯಾಗೆ ಭಾರಿ ಹೊಡೆತ ಬಿದ್ದಿದೆ. ಏಷ್ಯಾ ಕಪ್​ ಫೈನಲ್ ಪಂದ್ಯಕ್ಕೆ ಮುನ್ನ ಸ್ಪಿನ್ನರ್ ಮತ್ತು ಕೆಳ ಕ್ರಮಾಂಕದ ಬ್ಯಾಟರರ್​ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ಅಕ್ಷರ್ ಅವರ ಗಾಯದ ಹಿನ್ನಡೆಯು ಹಿರಿಯ ಆಲ್​​ರೌಂಡರ್​ ರವಿಚಂದ್ರನ್ ಅಶ್ವಿನ್ ಮತ್ತು ಯುವ ಆಟಗಾರ ವಾಷಿಂಗ್ಟನ್ ಸುಂದರ್ ಅವರಿಗೆ ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡವನ್ನು ಸೇರಲು ಅವಕಾಶ ಸಿಕ್ಕಿದೆ.

ಇದನ್ನೂ ಓದಿ : ind vs aus : ಮೊಹಾಲಿ ಸ್ಟೇಡಿಯಮ್​ನಲ್ಲಿ​ ಭಾರತ ತಂಡದ ಗರಿಷ್ಠ ಮತ್ತು ಕನಿಷ್ಠ ಸ್ಕೋರ್​ ಎಷ್ಟು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಮುನ್ನಾದಿನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಕೋಚ್ ದ್ರಾವಿಡ್ ಮುಂಬರುವ ಸರಣಿಯು ಹಿರಿಯ ಸ್ಪಿನ್ನರ್ ಅಶ್ವಿನ್ ಅವರಿಗೆ ಅಭ್ಯಾಸ ಪಂದ್ಯವಲ್ಲ ಎಂದು ಸ್ಪಷ್ಟಪಡಿಸಿದರು. “ರವಿಚಂದ್ರನ್ ಅಶ್ವಿನ್ ಅವರಂತಹವರು ಅನುಭವ ಪ್ರದರ್ಶಿಸುತ್ತಾರೆ ಮತ್ತು 8 ನೇ ಕ್ರಮಾಂಕದಲ್ಲಿ ಬ್ಯಾಟ್​ ಮೂಲಕ ಕೊಡುಗೆ ನೀಡುತ್ತಾರೆ. ಈ ಸರಣಿಯು ಅಶ್ವಿನ್​​ಗೆ ಯಾವುದೇ ಪ್ರಯೋಗವಲ್ಲ, ಈ ಸ್ವರೂಪದಲ್ಲಿ ಇದು ಅವರಿಗೆ ಒಂದು ಅವಕಾಶವಾಗಿದೆಎಂದು ದ್ರಾವಿಡ್ ಗುರುವಾರ ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಮೊಹಾಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2022ರಲ್ಲಿ ಏಕ ದಿನ ಪಂದ್ಯವಾಡಿದ್ದ ಅಶ್ವಿನ್​

ಅಶ್ವಿನ್ ಭಾರತ ಪರ ಏಕ ದಿನ ಸರಣಿಗಾಗಿ ಒಂದು ವರ್ಷದ ನಂತರ ಏಕದಿನ ತಂಡಕ್ಕೆ ಮರಳಿದ್ದಾರೆ. 37ರ ಹರೆಯದ ಅಶ್ವಿನ್​ 2022ರ ಜನವರಿಯಲ್ಲಿ ರೋಹಿತ್ ಪಡೆ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ನಂತರ ಅಶ್ವಿನ್ ಅವರನ್ನು ಮೂರನೇ ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಫ್-ಸ್ಪಿನ್ನರ್ ಭಾರತದ ವಿಶ್ವಕಪ್ ತಂಡದ ಭಾಗವಾಗಿರಲಿಲ್ಲ.

ಕಳೆದ ವಾರ ನಡೆದ ಫೈನಲ್​ನಲ್ಲಿ ಶ್ರೀಲಂಕಾವನ್ನು 10 ವಿಕೆಟ್​​ಗಳಿಂದ ಸೋಲಿಸಿದ್ದ ಭಾರತ ತಂಡದ ಏಷ್ಯಾ ಕಪ್​ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಆದರೆ, ಆಯ್ಕೆದಾರರು ಈ ಟೂರ್ನಿಗೆ ಅಶ್ವಿನ್​ ಅವರನ್ನು ಕಡೆಗಣಿಸಿದ್ದರು. ಅಶ್ವಿನ್ ಭಾರತದಲ್ಲಿ ಅಸಾಧಾರಣ ದಾಖಲೆ ಹೊಂದಿದ್ದಾರೆ. ಅನುಭವಿ ಸ್ಪಿನ್ನರ್ ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ 712 ವಿಕೆಟ್​ಗಳನ್ನು ಪಡೆದಿದ್ದಾರೆ. ಹಿರಿಯ ಬೌಲರ್ ತವರು ನೆಲದಲ್ಲಿ ಎಲ್ಲಾ ಸ್ವರೂಪಗಳಲ್ಲಿ 424 ವಿಕೆಟ್​​ಗಳನ್ನು ಪಡೆದಿದ್ದಾರೆ. ಸ್ಟಾರ್ ಸ್ಪಿನ್ನರ್ ಭಾರತ ಪರ 113 ಏಕದಿನ, 94 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Exit mobile version