Site icon Vistara News

Aaron Finch Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಆರನ್‌ ಫಿಂಚ್‌

Aaron Finch

#image_title

ಸಿಡ್ನಿ: ಟಿ20 ವಿಶ್ವ ಕಪ್(T20 captain)​ ವಿಜೇತ ನಾಯಕ, ಆಸ್ಟ್ರೇಲಿಯಾ ತಂಡದ ಆರನ್‌ ಫಿಂಚ್‌(Aaron Finch) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಮೂಲಕ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ(Aaron Finch Retirement) ಎಳೆದಿದ್ದಾರೆ.

ಮಂಗಳವಾರ ಫಿಂಚ್​ ಅವರು ತಮ್ಮ ಕ್ರಿಕೆಟ್​ ನಿವೃತ್ತಿಯನ್ನು ಘೋಷಣೆ ಮಾಡಿದರು. ಆದರೆ ಟಿ20 ಕ್ರಿಕೆಟ್​ ಲೀಗ್​ಗಳಲ್ಲಿ ತಮ್ಮ ಆಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. “2024ರ ಟಿ 20 ವಿಶ್ವ ಕಪ್ ಟೂರ್ನಿ ವರೆಗೆ ನಾನು ಆಡುತ್ತೇನೆ ಎಂದು ನನಗೆ ವಿಶ್ವಾಸವಿಲ್ಲ. ಹೀಗಾಗಿ ಟಿ20 ನಾಯಕತ್ವದಿಂದ ಕೆಳಗಿಳಿದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿದ್ದೇನೆ ಎಂದರು.

“ಕೆಲವು ಉತ್ತಮ ನೆನಪುಗಳೊಂದಿಗೆ ಇದೊಂದು ಅದ್ಭುತ ಸವಾರಿ. ಆಸ್ಟ್ರೇಲಿಯಾ ತಂಡದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ. ಮುಂದಿನ ಟಿ20 ವಿಶ್ವ ಕಪ್‌ಗೆ ಸಿದ್ಧರಾಗಲು ಮತ್ತು ಗೆಲ್ಲಲು ಹೊಸ ನಾಯಕನಿಗೆ ಉತ್ತಮ ಅವಕಾಶವನ್ನು ನೀಡುವ ಸಮಯ ಇದು. ಈ ಹಂತದವರೆಗಿನ ನನ್ನ ಪ್ರಯಾಣಕ್ಕೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ” ಎಂದು ಆರೋನ್ ಫಿಂಚ್ ಹೇಳಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗಮನಹರಿಸಲು ಫಿಂಚ್ ಏಕದಿನ ಸ್ವರೂಪದಿಂದ ನಿವೃತ್ತಿಯಾಗಿದ್ದರು. ಬಳಿಕ ವೇಗಿ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾದ ಏಕ ದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡರು. ಪಿಂಚ್​ ನಾಯಕತ್ವದಲ್ಲಿ 2021ರಲ್ಲಿ ಯುಎಇನಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಆಸೀಸ್​ ಚೊಚ್ಚಲ ವಿಶ್ವ ಕಪ್ ಎತ್ತಿ ಹಿಡಿದಿತ್ತು.

ಇದನ್ನೂ ಓದಿ IND vs AUS : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಜಯವರ್ಧನೆ ಪ್ರಕಾರ ಟೆಸ್ಟ್​ ಸರಣಿಯ ಟ್ರೋಫಿ ಗೆಲ್ಲುವವರು ಯಾರು?

ಆರೋನ್ ಫಿಂಚ್ ತಮ್ಮ ವೃತ್ತಿಜೀವನದಲ್ಲಿ 146 ಏಕ ದಿನ, 103 ಟಿ20, 5 ಟೆಸ್ಟ್​ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.

Exit mobile version