Site icon Vistara News

AFC Asian Cup: ಬಲಿಷ್ಠ ಆಸ್ಟ್ರೇಲಿಯಾದ ಸವಾಲು ಗೆದ್ದೀತೇ ಸುನೀಲ್ ಚೇಟ್ರಿ ಪಡೆ?

Australia vs India

ಕತಾರ್​: ಇಂದು ನಡೆಯುವ ಎಎಫ್ಸಿ ಏಷ್ಯನ್ ಕಪ್‌(AFC Asian Cup) ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾದ(Australia vs India) ಸವಾಲು ಎದುರಿಸಲಿದೆ. ಕಳೆದ ವರ್ಷ ನಡೆದ ಹಲವು ಫುಟ್​ಬಾಲ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಸುನೀಲ್ ಚೇಟ್ರಿ ಪಡೆ ಈ ಟೂರ್ನಿಯಲ್ಲೂ ಶ್ರೇಷ್ಠ ಪ್ರದರ್ಶನ ತೋರುವ ನಿರೀಕ್ಷೆ ಇದೆ.

ಈ ಟೂರ್ನಿ 2023ರಲ್ಲಿ ಚೀನಾದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತು. ಬಳಿಕ ಕತಾರ್ ಟೂರ್ನಿಯ ಆತಿಥ್ಯವಹಿಸಿಕೊಂಡಿತು. ಕ್ವಾರ್ಟರ್‌ಫೈನಲ್‌ಗೇರಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಮಹತ್ವದ್ದಾಗಿದೆ.

ಭಾರತ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಈ ಗುಂಪಿನಲ್ಲಿ ಆಸ್ಟ್ರೇಲಿಯಾ, ಉಜ್ಬೇಕಿಸ್ತಾನ ಹಾಗೂ ಸಿರಿಯಾ ತಂಡಗಳಿವೆ. 2011 ಹಾಗೂ 2019ರಲ್ಲಿ ಗುಂಪು ಹಂತದಲ್ಲಿ ಹೊರಬಿದ್ದಿದ್ದ ಭಾರತ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ 8 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು,ಆಸ್ಟ್ರೇಲಿಯಾ 4, ಭಾರತ 3 ಬಾರಿ ಜಯಿಸಿದರೆ, ಒಂದು ಡ್ರಾನಲ್ಲಿ ಅಂತ್ಯ ಕಂಡಿದೆ.

ಭಾರತದ ಸಾಧನೆ


ಭಾರತ ತಂಡ ಈ ಟೂರ್ನಿಯಲ್ಲಿ 1956ರಿಂದ ಈವರೆಗೆ 4 ಬಾರಿ ಕಣಕ್ಕಿಳಿದಿದೆ. 1964ರಲ್ಲಿ ರನ್ನರ್ ಅಪ್ ಆಗಿದ್ದು ತಮಡದ ಶ್ರೇಷ್ಠ ಸಾಧನೆ. ತಂಡದ ನಾಯಕ ಸುನೀಲ್ ಚೇಟ್ರಿಗೆ ಇದು 3ನೇ ಏಷ್ಯನ್ ಕಪ್ ಟೂರ್ನಿ ಎನಿಸಿದೆ. ಒಟ್ಟು 24 ತಂಡಗಳನ್ನು ತಲಾ 4ರಂತೆ 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ-2 ತಂಡ ಹಾಗೂ ಪ್ರತಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ 6 ತಂಡಗಳಲ್ಲಿ ಅತ್ಯುತ್ತಮ 4 ತಂಡಗಳು ಪ್ರಿ ಕ್ವಾರ್ಟರ್​ಫೈನಲ್​ಗೆ ಅರ್ಹತೆ ಪಡೆಯಲಿವೆ.

ಇದನ್ನೂ ಓದಿ Sunil Chhetri: ತಂದೆಯಾದ ಸುನೀಲ್​ ಚೆಟ್ರಿ; ಗಂಡು ಮಗುವಿಗೆ ಜನ್ಮ ನೀಡಿದ ಸೋನಮ್‌

ಸಂಭಾವ್ಯ ಆಡುವ ಬಳಗ


ಭಾರತ: ಗುರುಪ್ರೀತ್ ಸಿಂಗ್ ಸಂಧು, ರಾಹುಲ್ ಭೇಕೆ, ಸಂದೇಶ್ ಜಿಂಗನ್, ಆಕಾಶ್ ಮಿಶ್ರಾ, ನಿಖಿಲ್ ಪೂಜಾರಿ, ಸುರೇಶ್ ಸಿಂಗ್ ವಾಂಗ್ಜಮ್, ಲಾಲಿಂಜುವಲಾ ಚಾಂಗ್ಟೆ, ಸಹಲ್ ಅಬ್ದುಲ್ ಸಮದ್, ಮನ್ವಿರ್ ಸಿಂಗ್, ಸುನಿಲ್ ಚೇಟ್ರಿ, ಮಹೇಶ್ ಸಿಂಗ್.

ಆಸ್ಟ್ರೇಲಿಯಾ: ಜೋ ಗೌಸಿ, ಗೆಥಿನ್ ಜೋನ್ಸ್, ಕ್ಯಾಮೆರಾನ್ ಬರ್ಗೆಸ್, ಹ್ಯಾರಿ ಸೌಟರ್, ಲೆವಿಸ್ ಮಿಲ್ಲರ್, ಕೀನು ಬ್ಯಾಕಸ್, ರಿಲೆ ಮ್ಯಾಕ್‌ಗ್ರೀ ಐಡೆನ್ ಕಾನರ್ ಓ’ನೀಲ್, ಜಾಕ್ಸನ್ ಇರ್ವಿನ್, ಕ್ರೇಗ್ ಗುಡ್ವಿನ್, ಮಿಚೆಲ್ ಡ್ಯೂಕ್.

Exit mobile version