ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ಟಿ20 ವಿಶ್ವ ಕಪ್ ಫೈನಲ್(Women’s T20 World Cup Final) ಪಂದ್ಯದಲ್ಲಿ ಟಾಸ್ ಗೆದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡಿದೆ.
ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಟಿ20 ವಿಶ್ವಕ ಪ್‌ನಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಿರುವ ಕಾಂಗರೂ ಪಡೆಗೆ ಹರಿಣಗಳ ಬಳಗ ಸಡ್ಡು ಹೊಡೆದು ಮೊದಲ ಅವಕಾಶದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸೀತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ Women’s T20 World Cup Final: ಚೋಕರ್ಸ್ ಪಟ್ಟ ಕಳೆದುಕೊಂಡಿತೇ ದಕ್ಷಿಣ ಆಫ್ರಿಕಾ
ಆಸ್ಟ್ರೇಲಿಯಾ ಮಹಿಳಾ ತಂಡದ ಸಾಮರ್ಥ್ಯ ಮತ್ತು ಅವರು ವಿಶ್ವಕಪ್‌ನಲ್ಲಿ ಮೂಡಿಸಿರುವ ಛಾಪು ಇವುಗಳ ಬಗ್ಗೆ ಎರಡು ಮಾತಿಲ್ಲ. 2009ರ ಚೊಚ್ಚಲ ವಿಶ್ವ ಕಪ್ ಹೊರತು ಪಡಿಸಿದರೆ ಕಾಂಗರೂ ಪಡೆ ವಿಶ್ವಕಪ್ ಫೈನಲ್ ಮಿಸ್ ಮಾಡಿ ಕೊಂಡದ್ದಿಲ್ಲ. 6 ಸಲ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿ 5 ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಹ್ಯಾಟ್ರಿಕ್ ಕಪ್ ಗೆದ್ದ ಸಾಧನೆ ಮಾಡಲಿದೆ. ದಕ್ಷಿಣ ಆಪ್ರಿಕಾ ಗೆದ್ದರೆ ಚೊಚ್ಚಲ ವಿಶ್ವ ಕಪ್ ಜತೆಗೆ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿಕೊಳ್ಳಲಿದೆ.