Site icon Vistara News

Ind vs Aus : ಟಾಸ್​ ಗೆದ್ದ ಆಸ್ಟ್ರೇಲಿಯಾ, ಭಾರತ ತಂಡಕ್ಕೆ ಬ್ಯಾಟಿಂಗ್​ಗೆ ಆಹ್ವಾನ

Team India toss

ತಿರುವನಂತಪುರ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ (Ind vs Aus) ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ವೇಡ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಮೊದಲು ಬ್ಯಾಟ್​ ಮಾಡಬೇಕಾಗಿದೆ. ಪಂದ್ಯವು ಅತ್ಯಂತ ಕಠಿಣ ಪಿಚ್​ ಹೊಂದಿರುವ ತಿರುವನಂತಪುರ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಚೇಸಿಂಗ್​ಗೆ ಪೂರಕವಾಗಿಲ್ಲ ಎಂಬುವ ಹೊರತಾಗಿಯೂ ಆಸ್ಟ್ರೇಲಿಯಾ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸರಣಿಯಲ್ಲಿ ಒಟ್ಟು ಐದು ಪಂದ್ಯಗಳಿವೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಕೊನೇ ಎಸೆತದಲ್ಲಿ ಗೆಲುವು ಸಾಧಿಸುವ ಮೂಲಕ 1-0 ಮುನ್ನಡೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿಯೂ ಗೆಲ್ಲುವ ಮೂಲಕ ಮುನ್ನಡೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಟಾಸ್ ಗೆದ್ದ ಬಳಿಕ ಮಾತನಾಡಿದ ಆಸೀಸ್​ ನಾಯಕ ಮ್ಯಾಥ್ಯೂ ವೇಡ್ ನಾವು ಬೌಲಿಂಗ್ ಮಾಡಲಿದ್ದೇವೆ. ಇಬ್ಬನಿ ಪರಿಣಾಮ ಇರಬಹುದು ಎಂದು ಆಶಿಸಿದ್ದೇವೆ. ಇಲ್ಲಿನ ಕ್ಯುರೇಟರ್​ ಜತೆಗಿನ ಸಂಭಾಷಣೆ ನಿರ್ಧಾರಕ್ಕೆ ಪೂರಕವಾಗಿದೆ. ಹಿಂದಿನ ಪಂದ್ಯದಲ್ಲಿ ನಾವು ನಿಜವಾಗಿಯೂ ಉತ್ತಮವಾಗಿ ಆಡಿದ್ದೇವೆ/ ಭಾರತ ಇನ್ನೂ ಉತ್ತಮವಾಗಿ ಆಡಿದೆ. ತಂಡದಲ್ಲಿ ಬದಲಾವಣೆಯಿದೆ. ಬೆಹ್ರೆನ್​ಡಾರ್ಫ್​ ಬದಲಿಗೆ ಆಡಮ್ ಜಂಪಾ ಮತ್ತು ಆರೋನ್ ಹಾರ್ಡಿ ಬದಲಿಗೆ ಗ್ಲೆನ್​ ಮ್ಯಾಕ್ಸ್​ವೆಲ್​ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : IPL 2024 : ಪ್ರಮುಖ ಬೌಲರ್​​ನನ್ನೇ ತಂಡದಿಂದ ಬಿಡುಗಡೆಗೊಳಿಸಿದ ಆರ್​ಸಿಬಿ

ಭಾರತ ತಂಡದ ನಾಯಕ ಸೂರ್ಯಕುಮಾರ್ ಮಾತನಾಡಿ, ಹಿಂದಿನ ರಾತ್ರಿ ಇದ್ದ ಇಬ್ಬನಿಯ ಪ್ರಮಾಣವನ್ನು ನೋಡಿ ನಾವು ಚೇಸ್ ಮಾಡಲು ನಿರ್ಧರಿಸಿದ್ದೆವು. ಸ್ಕೋರ್ ಮಾಡಿ ನಂತರ ಅದನ್ನು ರಕ್ಷಿಸುವುದು ನಮಗೆ ಹೊಸ ಸವಾಲಾಗಿದೆ. ಕಳೆದ ಪಂದ್ಯವು ನಮಗೆ ಸಾಕಷ್ಟು ಆತ್ಮವಿಶ್ವಾಸವನ್ನು ಕೊಟ್ಟಿತ್ತು. ನಮ್ಮ ತಂಡದ ಆಟಗಾರರು ಉತ್ತಮವಾಗಿದ್ದಾರೆ. ಅದೇ ಆವೇಗವನ್ನು ಮುಂದುವರಿಸುತ್ತೇವೆ. ನಾಯಕತ್ವವು ಹೊಸ ಸವಾಲು ಮತ್ತು ಜವಾಬ್ದಾರಿಯಾಗಿದೆ, ನಾನು ಅದನ್ನು ಆನಂದಿಸುತ್ತಿದ್ದೇನೆ. ನಾವು ಅದೇ ತಂಡದೊಂದಿಗೆ ಕಣಕ್ಕಿಳಿಯುತ್ತಿದ್ದೇವೆ ಎಂದು ಹೇಳಿದರು.

ತಂಡಗಳ ವಿವರ ಇಲ್ಲಿದೆ

ಭಾರತ ತಂಡ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್ (ಸಿ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ.

ಆಸ್ಟ್ರೇಲಿಯಾ ತಂಡ: ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಥ್ಯೂ ವೇಡ್ (ಸಿ & ವಿಕೆ), ಸೀನ್ ಅಬಾಟ್, ನಾಥನ್ ಎಲ್ಲಿಸ್, ಆಡಮ್ ಜಂಪಾ, ತನ್ವೀರ್ ಸಂಘಾ.

Exit mobile version