ನಾಗ್ಪುರ: ಭಾರತದಲ್ಲಿ ಟೆಸ್ಟ್ ಸರಣಿಗಳು (INDvsAUS) ನಡೆಯುವ ವೇಳೆ ಹೆಚ್ಚು ತಿರುವು ಪಡೆಯುವ ಪಿಚ್ ರೂಪಿಸಿ ಪ್ರವಾಸಿ ಬಳಗಕ್ಕೆ ನೈಜ ಆಟ ಅಡಲು ಬಿಡುವುದಿಲ್ಲ ಎಂದು ಆಸ್ಟ್ರೇಲಿಯಾ ತಂಡ ಮಾಜಿ ಆಟಗಾರರು ಆರೋಪಿಸುತ್ತಲೇ ಇದ್ದಾರೆ. ಇದು ಆಸೀಸ್ ಬಳಗದ ಮೈಂಡ್ ಗೇಮ್ ಎಂಬುದಾಗಿ ಭಾರತ ತಂಡದ ಆಟಗಾರರು ಹಾಗೂ ಮಾಜಿ ಆಟಗಾರರು ಪ್ರತ್ಯುತ್ತ ಕೊಡುತ್ತಿದ್ದಾರೆ. ಇದೀಗ ಮೊದಲ ಟೆಸ್ಟ್ನ ಮೊದಲ ದಿನದಾಟ ಮುಗಿದಿದೆ. ಸಂಜೆಯ ವೇಳೆಗೆ ಪ್ರವಾಸಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಪೀಟರ್ ಹ್ಯಾಂಡ್ಸ್ಕಾಂಬ್, ನಾವು ಅಂದುಕೊಂಡಂತೆ ಪಿಚ್ ಮಿತಿ ಮೀರಿ ತಿರುವು ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಮೊದಲ ದಿನದ ಆಟದಲ್ಲಿ ರವೀಂದ್ರ ಜಡೇಜಾ 47 ರನ್ಗಳಿಗೆ ಐದು ವಿಕೆಟ್ ಪಡೆದರೆ ಆರ್ ಅಶ್ವಿನ್ 42 ರನ್ಗಳಿ ಮೂರ ವಿಕೆಟ್ ಪಡೆದಿದ್ದಾರೆ. ಹೀಗಾಗಿ ಸ್ಪಿನ್ಗೆ ಪಿಚ್ ಹೆಚ್ಚು ನೆರವು ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ರವೀಂದ್ರ ಜಡೇಜಾ ಸ್ಪಿನ್ ಬೌಲಿಂಗ್ಗೆ ಪಿಚ್ ನೆರವು ನೀಡುತ್ತಿದೆ ಎಂಬ ಆರೋಪವನ್ನು ಮೊದಲ ದಿನ ನಿರಾಕರಿಸಿದ್ದಾರೆ. ನಾನು ನನ್ನ ಬೌಲಿಂಗ್ ತಂತ್ರವನ್ನು ಬಳಸಿಕೊಂಡು ಎದುರಾಳಿ ಬ್ಯಾಟರ್ಗಳು ಗೊಂದಲಕ್ಕೆ ಬೀಳುವಂತೆ ಮಾಡಿದೆ ಎಂಬುದಾಗಿ ಹೇಳಿದ್ದಾರೆ. ಇದೇ ಸಮಯದಲ್ಲಿ ಹ್ಯಾಂಡ್ಸ್ಕಾಂಬ್, ಹೆಚ್ಚು ತಿರುವು ಪಡೆಯುತ್ತಿದ ಎಂದು ಹೇಳಿದ್ದಾರೆ.
ಇಲ್ಲಿ ಆಡುವುದು ಸುಲಭವಾಗಿರಲಿಲ್ಲ. ತುಂಬ ಕಷ್ಟಕರವಾಗಿತ್ತು ಹಾಗೂ ಹೆಚ್ಚು ತಿರುವು ಪಡೆಯುತ್ತಿತ್ತು. ನಾವು ಸರಣಿ ಆರಂಭಕ್ಕೆ ಮೊದಲು ಯಾವ ರೀತಿ ಭಯ ಇಟ್ಟುಕೊಂಡಿದ್ದೇವೋ ಅದೇ ರೀತಿಯ ಪಿಚ್ ಎದುರಿಸುತ್ತಿದ್ದೇವೆ. ನಮ್ಮ ನಿರೀಕ್ಷೆ ಮೀರಿ ಚೆಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ravindra Jadeja : ನಾಗ್ಪುರ ಪಿಚ್ ಹೆಚ್ಚು ತಿರುವು ಪಡೆಯುತ್ತಿರಲಿಲ್ಲ ಎಂದ ರವೀಂದ್ರ ಜಡೇಜಾ
ಇದೇ ವೇಳೆ ಅವರು ಸ್ಪಿನ್ನರ್ ರವೀಂದ್ರ ಜಡೇಜಾ ಅವರನ್ನು ಹೊಗಳಲು ಮರೆಯಲಿಲ್ಲ. ಜಡೇಜಾ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರ ವಿರುದ್ಧ ರನ್ ಗಳಿಸಲು ಸಾಧ್ಯವೇ ಆಗುತ್ತಿರಲಿಲ್ಲ. ನಾನು ಕೂಡ ರನ್ ಬಾರಿಸಲು ಕಷ್ಟಪಟ್ಟೆ ಎಂಬುದಾಗಿ ಅವರು ಹೇಳಿದ್ದಾರೆ.