ನಾಗ್ಪುರ: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ (Border Gavaskar Trophy) ತಂಡಗಳ ನಡುವೆ ಫೆಬ್ರವರಿ 9ರಂದು ಮೊದಲ ಟೆಸ್ಟ್ ಪಂದ್ಯ ನಡಯಲಿದೆ. ನಾಗ್ಪುರ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಹಣಾಹಣಿ ಅಯೋಜನೆಗೊಂಡಿದೆ. ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಿನ ಈ ಹಣಾಹಣಿಗೆ ಮೊದಲು ಸ್ಪಿನ್ ಪಿಚ್ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಭಾರತ ತಂಡದ ಗೆಲುವಿಗಾಗಿ ಬಿಸಿಸಿಐ ಸ್ಪಿನ್ ಪಿಚ್ಗಳನ್ನು ಹೆಚ್ಚು ಸಿದ್ಧಪಡಿಸಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರು ಆರಂಭದಿಂದಲೂ ಅಪಪ್ರಚಾರ ಮಾಡುತ್ತಿದ್ದಾರೆ. ಅಂತೆಯೇ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ನಮ್ಮ ತಂಡದಲ್ಲೂ 20 ವಿಕೆಟ್ಗಳನ್ನೂ ಕಬಳಿಸಬಲ್ಲ ಬೌಲರ್ ಇದ್ದಾರೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದ ಪ್ರಧಾನ ಸ್ಪಿನ್ನರ್ ನೇಥನ್ ಲಯಾನ್. ಅವರ ಜತೆಗೆ ಆಸ್ಟನ್ ಅಗರ್, ಮಿಚೆಲ್ ಸ್ವಪ್ಸನ್ ಹಾಗೂ ಟಾಡ್ ಮರ್ಫಿ ಇದ್ದಾರೆ. ಇವರೆಲ್ಲರನ್ನೂ ಸೂಕ್ತ ಕಾಲಕ್ಕೆ ಬಳಸಿಕೊಳ್ಳುವ ಸೂಚನೆ ಕೊಟ್ಟಿದ್ದಾರೆ ಕಮಿನ್ಸ್.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್, ನಮ್ಮಲ್ಲೂ ಸಾಕಷ್ಟು ಸ್ಪಿನ್ ಬೌಲಿಂಗ್ ಆಯ್ಕೆಗಳಿವೆ. ಬೆರಳಿನ ಸ್ಪಿನ್ನರ್, ಮಣಿಕಟ್ಟಿನ ಸ್ಪಿನ್ನರ್, ಎಡಗೈ ಸ್ಪಿನ್ನರ್, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಜತೆಗಿದ್ದಾರೆ. ನಮ್ಮ ತಂಡದ ಬೌಲರ್ಗಳೂ 10 ವಿಕೆಟ್ಗಳನ್ನು ಪಡೆಯಬಲ್ಲರು. ಅವರನ್ನು ಸೂಕ್ತ ಕಾರಣಕ್ಕೆ ಬಳಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : AUS VS WI | ಗಾಯದಿಂದ ಪ್ಯಾಟ್ ಕಮಿನ್ಸ್ ಔಟ್; ದ್ವಿತೀಯ ಟೆಸ್ಟ್ಗೆ ಸ್ವೀವನ್ ಸ್ಮಿತ್ ನಾಯಕ
ಆಸ್ಟನ್ ಅಗರ್ ಈ ಹಿಂದಿನ ತಂಡದಲ್ಲಿ ಆಡಿದ್ದಾರೆ. ಸ್ವೆಪ್ಸನ್ ಕಳೆದ ಎರಡು ಪ್ರವಾಸಗಳಲ್ಲಿ ಆಡಿದ್ದಾರೆ. ಮರ್ಫಿ ಕೂಡ ಕಳೆದ ಪ್ರವಾಸದಲ್ಲಿ ಜತೆಗಿದ್ದರು. ಹೀಗಾಗಿ ಅವರೆಲ್ಲರೂ ಉತ್ತಮ ಅನುಭವ ಹೊಂದಿದ್ದಾರೆ ಎಂಬುದಾಗಿ ಕಮಿನ್ಸ್ ಹೇಳಿದ್ದಾರೆ.