Site icon Vistara News

Steve Smith | ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್​ ಸ್ಮಿತ್​ ಟೋಪಿಯನ್ನೇ ಕತ್ತರಿಸಿ ಹಾಕಿದ ಇಲಿ!

steve smith

ಅಡಿಲೇಡ್​ : ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ತಂಡದ ನೇತೃತ್ವ ವಹಿಸಿದ್ದ ಸ್ಟೀವ್​ ಸ್ಮಿತ್ (Steve Smith) ಅವರು ಹರಿದ ಟೋಪಿ ಧರಿಸಿಕೊಂಡು ಮೈದಾನಕ್ಕೆ ಬಂದ ವಿಷಯ ಚರ್ಚೆಗೆ ಕಾರಣವಾಗಿತ್ತು. ಆದರೆ, ತಮ್ಮ ಪರಿಸ್ಥಿತಿಗೆ ಇಲಿಯೇ ಕಾರಣ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಕಾಯಂ ನಾಯಕ ಪ್ಯಾಟ್​ ಕಮಿನ್ಸ್ ಗಾಯಗೊಂಡ ಹಿನ್ನೆಲೆಯಲ್ಲಿ ಸ್ಮಿತ್ ಎರಡನೇ ಟೆಸ್ಟ್​ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಅವರ ಬ್ಯಾಗಿ ಗ್ರೀನ್​ ಟೋಪಿ ಹರಿದು ಹೋಗಿತ್ತು. ಬ್ಯಾಗಿ ಗ್ರೀನ್​ ಟೋಫಿ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಲಭಿಸುವ ಅತ್ಯಂತ ದೊಡ್ಡ ಗೌರವ ಎಂದು ಹೇಳಲಾಗುತ್ತದೆ. ಅದಕ್ಕೆ ಸ್ಮಿತ್​ ಅಗೌರವ ತೋರಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

ಇದರಲ್ಲಿ ನಮ್ಮದೇನೂ ತಪ್ಪು ಇಲ್ಲ ಎಂಬುದಾಗಿ ಸ್ಟೀವ್​ ಸ್ಮಿತ್​ ಹೇಳಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವಾಗ ಡ್ರೆಸಿಂಗ್​ ರೂಮ್​ನಲ್ಲಿ ಕ್ಯಾಪ್​ ಬಿಟ್ಟು ಹೋಗಿದ್ದೆ. ಇಲಿ ಅದನ್ನು ಕಡಿದು ಹಾಕಿತ್ತು. ಈ ರೀತಿಯಾಗಿ ಅದು ಹಾಳಾಗಿದೆ ಎಂಬುದಾಗಿ ಸ್ವೀಟ್​ ಸ್ಮಿತ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡ ಪ್ರವಾಸ ವಿದೇಶಕ್ಕೆ ಪ್ರವಾಸ ಹೋಗುವ ಹೊಸ ಬ್ಯಾಗಿ ಕ್ಯಾಪ್ ಅನ್ನು ಕ್ರಿಕೆಟ್​ ಆಸ್ಟ್ರೇಲಿಯಾ ನೀಡುತ್ತದೆ. ಮುಂದಿನ ಪ್ರವಾಸ ತನಕ ಅದನ್ನು ಉಳಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ| 18 ತಿಂಗಳ ಬಳಿಕ ಶತಕ ಬಾರಿಸಿದ ಸ್ಟೀವ್‌ ಸ್ಮಿತ್‌, ಕೊಹ್ಲಿ ಶತಕ ಎಂದು?

Exit mobile version