ಸಿಡ್ನಿ : ಕ್ರೀಡೆಗೆ ಗರಿ ಮೀರಿದ ಬಾಂಧವ್ಯವಿದೆ ಎಂಬುದ ಆಗಾಗ ಸಾಬೀತಾಗುತ್ತಿದೆ. ಅದೇ ರೀತಿಯ ಇತ್ತೀಚೆಗೆ ಶ್ರೀಲಂಕಾ ಫ್ರವಾಸ ಮಾಡಿದ್ದ ಆಸ್ಟ್ರೇಲಿಯಾ ತಂಡ ಆರ್ಥಿಕ ತುರ್ತು ಪರಿಸ್ಥಿತಿಯಿಂದ (economic crisis) ಅಲ್ಲಿನ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿ ತಾವು ಸರಣಿಯಲ್ಲಿ ಜಯಿಸಿದ್ದ ಬಹುಮಾನದ ಮೊತ್ತವನ್ನೇ ದತ್ತಿ ನಿಧಿ ರೂಪದಲ್ಲಿ ವಾಪಸ್ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ತಂಡ ಕಳೆದ ಜೂನ್,ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಮಾಡಿ ಟೆಸ್ಟ್ ಹಾಗೂ ಏಕ ದಿನ ಸರಣಿಯಲ್ಲಿ ಪಾಲ್ಗೊಂಡಿತ್ತು. ಈ ವೇಳೆ 35,82,562 ರೂಪಾಯಿ (೪೫ ಸಾವಿರ ಯುಎಸ್ ಡಾಲರ್) ಬಹುಮಾನ ಮೊತ್ತವನ್ನು ಪಡೆದುಕೊಂಡಿತ್ತು. ಅದನ್ನು ಆಸ್ಟ್ರೇಲಿಯಾ ತಂಡದ ಸದಸ್ಯರು ಯುನಿಸೆಫ್ ಮೂಲಕ ಶ್ರೀಲಂಕಾದ ಮಕ್ಕಳ ಅಭಿವೃದ್ಧಿಗೆ ಕೊಟ್ಟಿದ್ದಾರೆ.
ಕಷ್ಟವನ್ನು ಕಣ್ಣಾರೆ ಕಂಡಿದ್ದರು
ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸತ್ತಿರುವ ಶ್ರೀಲಂಕಾದ ಜನರು ಅನುಭವಿಸುತ್ತಿರುವ ಕಷ್ಟವನ್ನು ಆಸ್ಟ್ರೇಲಿಯಾ ತಂಡದ ಸದಸ್ಯರು ಕಣ್ಣಾರೆ ಕಂಡಿದ್ದರು. ಜನರು ಇಂಧನಕ್ಕಾಗಿ ರಾತ್ರಿ-ಹಗಲು ಸರತಿ ಸಾಲಿನಲ್ಲಿ ನಿಂತಿರುವುದು. ಮೂರು ದಿನಗಳಿಗೊಮ್ಮೆ ಶಾಲೆಗಳು ನಡೆಯುವುದು. ಆಹಾರಕ್ಕಾಗಿ ಮಕ್ಕಳ ಪರದಾಟ ಸೇರಿದಂತೆ ನಾನಾ ರೀತಿಯ ಕಷ್ಟಗಳನ್ನು ನೋಡಿದ್ದರು.
ತಾವು ಉಳಿದಿರುವ ಹೋಟೆಲ್‌ನಲ್ಲಿ ಕರೆಂಟ್ ಇಲ್ಲದೇ ತೊಂದರೆಗೆ ಒಳಪಟ್ಟ ವಿಷಯವನ್ನೂ ಆಸೀಸ್ ಆಟಗಾರರು ಫೋಟೋ ಸಮೇತ ಹೇಳಿದ್ದರು. ಅಲ್ಲಿನ ಪರಿಸ್ಥಿತಿಯ ವಾಸ್ತವದ ಅರಿವು ಹೊಂದಿರುವ ಆಸ್ಟ್ರೇಲಿಯಾ ಆಟಗಾರರು ತಮ್ಮ ಗೆಲವಿನ ಮೊತ್ತವನ್ನೇ ವಾಪಸ್ ಕೊಟ್ಟಿದ್ದಾರೆ.
ಇದನ್ನೂ ಓದಿ | CWG- 2022 | ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ಲಂಡನ್‌ನಲ್ಲಿ ಪಲಾಯನ