Site icon Vistara News

Australian Open | ಆಸ್ಟ್ರೇಲಿಯಾ ಓಪನ್; ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದ ರಫೆಲ್‌ ನಡಾಲ್‌!

Rafael Nadal ruled out of French Open due to injury

ಮೆಲ್ಬೋರ್ನ್​: ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಅವರು ಆಸ್ಟ್ರೇಲಿಯನ್‌ ಓಪನ್‌(Australian Open) ಟೆನಿಸ್‌ ಕೂಟದ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಸೋಲಿನೊಂದಿಗೆ ದಾಖಲೆ 23ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಅವರ ಕನಸಿಗೆ ಬ್ರೇಕ್ ಬಿದ್ದಿದೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ ಮಕೆಂಝಿ ಮೆಕ್‌ಡೋನಾಲ್ಡ್‌ ವಿರುದ್ಧ ನಡಾಲ್​ 4-6, 4-6, 5-7 ನೇರ ಸೆಟ್​ಗಳ ಸೋಲು ಕಂಡರು. ನಡಾಲ್​ ಈ ಪಂದ್ಯದಲ್ಲಿ ಉತ್ತಮ ಫಾರ್ಮ್​ನಲ್ಲಿರುವಂತೆ ಕಾಣಲಿಲ್ಲ.

ತಾಳ್ಮೆಯ ಆಡಕ್ಕೆ ಹೆಸರುವಾಸಿಯಾದ ನಡಾಲ್ ಈ ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡಂತೆ ಕಂಡುಬಂತು. ಹಲವು ಬಾರಿ ಅಂಪೈರ್​ ವಿರುದ್ಧ ವಾಗ್ವಾದ ಕೂಡ ನಡೆಸಿದರು. ಇದಕ್ಕೆ ಕಾರಣ ಅವರು ಸೋಂಟದ ನೋವಿನಿಂದ ಬಳಲಿದ್ದು. ಸಂಪೂರ್ಣ ಫಿಟ್​ ಇಲ್ಲದಿದ್ದರೂ ಆಡಲಿಳಿದ ಅವರು ತಮ್ಮ ಶ್ರೇಷ್ಠ ಪ್ರದರ್ಶನವನ್ನು ತೋರ್ಪಡಿಸುವಲ್ಲಿ ವಿಫಲರಾದಾದ ತಾಳ್ಮೆ ಕಳೆದುಕೊಂಡು ಈ ರೀತಿಯ ವರ್ತನೆ ತೋರಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೊದಲ ಸುತ್ತಿನ ಪಂದ್ಯದಲ್ಲಿಯೂ ನಡಾಲ್​ ಅವರು ಬ್ರಿಟನ್‌ನ ಜ್ಯಾಕ್‌ ಡ್ರ್ಯಾಪರ್‌ ಅವವರನ್ನು 7-5, 2-6, 6-4, 6-1 ಸೆಟ್‌ಗಳಿಂದ ಉರುಳಿಸಿ ಪ್ರಯಾಸದ ಗೆಲುವು ದಾಖಲಿಸಿದ್ದರು. ಇದೀಗ ದ್ವಿತೀಯ ಸುತ್ತಿನ ಹೊರಾಟದಲ್ಲಿ ಅವರು ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇವರ ನಿರ್ಗಮನದಿಂದ ಈ ಟೂರ್ನಿಯಲ್ಲಿ ನೊವಾಕ್​ ಜೋಕೊವಿಕ್​ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ| Australia Open| ಆಸ್ಟ್ರೇಲಿಯಾ ಓಪನ್​ಗೆ ವೇದಿಕೆ ಸಜ್ಜು; ನೊವಾಕ್‌ ಜೊಕೋವಿಕ್‌ ನೆಚ್ಚಿನ ಆಟಗಾರ

Exit mobile version