ಮೆಲ್ಬೋರ್ನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್(Australian Open) ಟೆನಿಸ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಐಗಾ ಸ್ವಿಯಾಟೆಕ್, ಅಮೆರಿಕದ ಕೊಕೊ ಗಾಫ್ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ದಾಖಲಿಸಿ 4ನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಸ್ಟಾರ್ ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.
ಮಹಿಳಾ ಸಿಂಗ್ಸಲ್ ವಿಭಾಗದ ಪಂದ್ಯದಲ್ಲಿ ಐಗಾ ಸ್ವಿಯಾಟೆಕ್ 6-0, 6-1 ನೇರ ಸೆಟ್ಗಳ ಅಂತರದಿಂದ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ಅವರಿಗೆ ಸೋಲುಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ದಿನದ ಮತ್ತೊಂದು ಪಂದ್ಯದಲ್ಲಿ ಅಮೆರಿಕದ ಕೊಕೊ ಗಾಫ್ 6-3, 6-2ರಿಂದ ತಮ್ಮದೇ ದೇಶದ ಬರ್ನಾರ್ಡ್ ಪೆರಾ ಅವರನ್ನು ಮಣಿಸಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಉಕ್ರೇನ್‌ನ ಮಾರ್ತಾ ಕೋಸ್ಟುéಕ್ ಅವರನ್ನು 6-0, 6-2ರಿಂದ ಮಣಿಸುವಲ್ಲಿ ಯಶಸ್ವಿಯಾದರು.
ಮೆಡ್ವೆಡೇವ್‌ಗೆ ಸೋಲು
ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಟಾರ್ ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಅಚ್ಚರಿಯ ಸೋಲು ಕಂಡಿದ್ದಾರೆ. 22 ವರ್ಷದ ಅಮೆರಿಕನ್ ಟೆನಿಸಿಗ ಸೆಬಾಸ್ಟಿಯನ್ ಕೋರ್ಡ ವಿರುದ್ಧ 7-6 (7), 6-3, 7-6 (4) ಅಂತರದಿಂದ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಯುವ ಆಟಗಾರ ಬಲಿಷ್ಠ ಸರ್ವ್ಗಳ ಮುಂದೆ ಸಂಪೂರ್ಣ ವಿಫಲರಾದ ಎರಡು ಬಾರಿಯ ರನ್ನರ್ ಅಪ್ ಮೆಡ್ವೆಡೇವ್‌ಗೆ ಮೆಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಮತ್ತೊಂದು ಪಂದ್ಯದಲ್ಲಿ ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ನೆದರ್ಲೆಂಡ್ಸ್‌ನ ಟ್ಯಾಲನ್ ಗ್ರೀಕ್‌ಸ್ಪೂರ್ ವಿರುದ್ಧ 6-2, 7-6 (5) ಅಂತರದ ಜಯ ಸಾಧಿಸಿ 4ನೇ ಸುತ್ತು ಪ್ರವೇಶಿಸಿದ್ದಾರೆ.
ಇದನ್ನೂ ಓದಿ | Australian Open | ಆಸ್ಟ್ರೇಲಿಯಾ ಓಪನ್; ಗೆಲುವಿನ ಶುಭಾರಂಭ ಕಂಡ ಸಾನಿಯಾ ಮಿರ್ಜಾ