Site icon Vistara News

Australian Open | ಜೊಕೋ ಆಸ್ಟ್ರೇಲಿಯಾ​ ಓಪನ್​ ಆಡುವುದು ಬಹುತೇಕ ಖಚಿತ; ಸಂತಸ ವ್ಯಕ್ತಪಡಿಸಿದ ವುಡ್‌ಬ್ರಿಡ್ಜ್!

Australian Open

ಸಿಡ್ನಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿ ಕಳೆದ ಆಸ್ಟ್ರೇಲಿಯಾ ಓಪನ್ ಟೆನಿಸ್(Australian Open) ಟೂರ್ನಿಯಿಂದ ಹೊರಬಿದ್ದಿದ್ದ ಸರ್ಬಿಯಾದ ನೊವಾಕ್ ಜೊಕೋವಿಕ್​​ ಈ ಬಾರಿಯ ಟೂರ್ನಿಯಲ್ಲಿ ಆಡುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದರಿಂದ ಸರ್ಕಾರವು ನಿಯಮ ಸಡಿಲಗೊಳಿಸಿದೆ. ಇದರಿಂದ ಜೊಕೋ ಈ ಬಾರಿ ಟೂರ್ನಿ ಆಡಲಿದ್ದಾರೆ ಎಂದು ವರದಿಯಾಗಿದೆ. ಜೊಕೋ ಆಡುವ ಕುರಿತು ಮಾತನಾಡಿದ ಮಾಜಿ ಆಟಗಾರ ಟಾಡ್ ವುಡ್‌ಬ್ರಿಡ್ಜ್, “ನೋವಾಕ್ ಆಡುವುದರಿಂದ ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಮತ್ತೆ ಕಳೆ ಬಂದಿದೆ. ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ” ಎಂದು ವುಡ್‌ಬ್ರಿಡ್ಜ್ ಹೇಳಿದ್ದಾರೆ.

ಜೊಕೋ ಇಲ್ಲಿ ಜಯಗಳಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಅವರಿಗೆ ಇಲ್ಲಿ ಆಡಲು ಅನುಮತಿ ಲಭಿಸಲಿಲ್ಲ. ಇದೀಗ ಅವರು ರಾಫೆಲ್‌ ನಡಾಲ್‌ ಅವರ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲುವಿನ ದಾಖಲೆಯನ್ನು ಮೀರಿ ನಿಲ್ಲುವ ಛಲದಲ್ಲಿದ್ದಾರೆ. ಆದ್ದರಿಂದ ಅವರ ಆಟ ರಂಗೇರಲಿದೆ ಎಂದು ವುಡ್‌ಬ್ರಿಡ್ಜ್ ಅಭಿಪ್ರಾಯಪಟ್ಟಿದ್ದಾರೆ. ಜನವರಿ 16ರಿಂದ ಟೂರ್ನಿ ಆರಂಭವಾಗಲಿದೆ.

ಇದನ್ನೂ ಓದಿ | Asian Cup Table Tennis | ಐತಿಹಾಸಿಕ ಪದಕ ಗೆದ್ದ ಮಣಿಕಾ ಬಾತ್ರಾ; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ

Exit mobile version