ಮೆಲ್ಬೋರ್ನ್: ವರ್ಷಾರಂಭದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯಾ ಓಪನ್(Australian Open) ಟೆನಿಸ್ ಟೂರ್ನಿಗೆ ಅಖಾಡ ಸಿದ್ಧವಾಗಿದೆ. ಸೋಮವಾರದಿಂದ ಈ ಕೂಟ ಆರಂಭವಾಗಲಿದೆ. ಕೋವಿಡ್ ಲಸಿಕೆ ಪಡೆಯದೆ ಕಳೆದ ಬಾರಿ ಟೂರ್ನಿ ಯಲ್ಲಿ ಆಡಲು ಅವಕಾಶ ಪಡೆಯದ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೋವಿಕ್ ಈ ಬಾರಿ ಕಣದಲ್ಲಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.
ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೂರ್ನಿ ಭಾರತಕ್ಕೂ ಮಹತ್ವದ ಟೂರ್ನಿಯಾಗಿ ಕಾಣಿಸಿಕೊಂಡಿದೆ. ಏಕೆಂದರೆ ಭಾರತದ ಸ್ಟಾರ್ ಆಟಗಾರ್ತಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಆಡುತ್ತಿರುವ ಕೊನೆಯ ಗ್ರ್ಯಾನ್ ಸ್ಲಾಮ್ ಟೂರ್ನಿ ಇದಾಗಿದೆ. ಆದ್ದರಿಂದ ಇವರ ಆಟವನ್ನು ಕಣ್ತುಂಬಿಕೊಳ್ಳಲು ಭಾರತೀಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಯುಎಸ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಮತ್ತು 7 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಅಮೆರಿಕದ ವೀನಸ್ ವಿಲಿಯಮ್ಸ್ ಗಾಯಗೊಂಡ ಕಾರಣ ಟೂರ್ನಿಯಿಂದ ಹಿಂದೆಸರಿದಿದ್ದಾರೆ.
ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಕೂಡ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಜತೆಗೆ ದಾಖಲೆಯ 23ನೇ ಗ್ರ್ಯಾನ್ ಸ್ಲಾಮ್ ಮೇಲೆ ಕಣ್ಣಿಟ್ಟಿದ್ದಾರೆ. ಮಹಿಳಾ ಸಿಂಗ್ಸ್ನಲ್ಲಿ ಇಗಾ ಸ್ವಿಯಾಟೆಕ್ ಮತ್ತು ಅಮೆರಿಕದ ಕೋಕೊ ಗಾಫ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯರಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | Australian Open | ಜೊಕೋ ಆಸ್ಟ್ರೇಲಿಯಾ ಓಪನ್ ಆಡುವುದು ಬಹುತೇಕ ಖಚಿತ; ಸಂತಸ ವ್ಯಕ್ತಪಡಿಸಿದ ವುಡ್‌ಬ್ರಿಡ್ಜ್!