Site icon Vistara News

Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

Austria vs France

Austria vs France: Kylian Mbappe suffers nose injury in France’s win over Austria

ಮ್ಯೂನಿಚ್: ಡಸೆಲ್ಡಾರ್ಫ್ ಅರೆನಾದಲ್ಲಿ ಮಂಗಳವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್ 1-0 ಗೋಲುಗಳಿಂದ ಆಸ್ಟ್ರಿಯಾ ವಿರುದ್ಧ ಗೆದ್ದು ಯುರೋ ಕಪ್​ ಫುಟ್ಬಾಲ್(Euro 2024)​ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಆದರೆ, ಇದೇ ಪಂದ್ಯದಲ್ಲಿ ಫ್ರಾನ್ಸ್(Austria vs France)​ ತಂಡದ ಸ್ಟಾರ್​ ಆಟಗಾರ ಹಾಗೂ ನಾಯಕ ಕಿಲಿಯನ್‌ ಎಂಬಾಪೆ(Kylian Mbappe) ಅವರು ಮೂಗಿನ ಗಂಭೀರ ಗಾಯಕ್ಕೆ(Mbappe suffers nose injury) ತುತ್ತಾಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

ಪಂದ್ಯದ 86ನೇ ನಿಮಿಷದಲ್ಲಿ ಎದುರಾಳಿ ತಂಡದ ಕೆವಿನ್ ಡಾನ್ಸೊ ಅವರ ಕಾಲು ಮೂಗಿಗೆ ಬಡಿದ ಪರಿಣಾಮ ಎಂಬಪೆ ಗಾಯಗೊಂಡರು. ಈ ವೇಳೆ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ತಕ್ಷಣ ವೈದ್ಯರು ಅವರನ್ನು ಮೈದಾನದಿಂದ ಹೊರಗಡೆ ತಂದು ಚಿಕಿತ್ಸೆ ನೀಡಿದ್ದಾರೆ. ಸದ್ಯ ಅವರಿಗೆ ಯಾವುದೇ ದೊಡ್ಡ ಪ್ರಮಾಣದ ಗಾಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಎಂಬಾಪೆಗೆ 2 ಗೋಲು ಬಾರಿಸುವ ಅವಕಾಶವಿದ್ದರೂ ಕೂಡ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ.

ಫ್ರಾಂಕ್​ಫರ್ಟ್​: ಸೋಮವಾರ ರಾತ್ರಿ ನಡೆದ ಯುರೋ ಕಪ್​ ಫಟ್​​ಬಾಲ್​ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶವೊಂದು ದಾಖಲಾಯಿತು. ಬೆಲ್ಜಿಯಂ ತಂಡದ ಸ್ಟಾರ್​ ಆಟಗಾರ ರೊಮೆಲೂ ಲುಕಾಕೊ 2 ಗೋಲು ಬಾರಿಸಿದರೂ ಕೂಡ ಇದು ಅಮಾನ್ಯಗೊಂಡು ಸ್ಲೋವಾಕಿಯಾ ವಿರುದ್ಧ 1-0 ಅಂತರದ ಸೋಲು ಕಂಡಿತು. ಈ ಸೋಲಿನಿಂದ ಬೆಲ್ಜಿಯಂನ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ.

ಇದನ್ನೂ ಓದಿ Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್

ಪಂದ್ಯ ಆರಂಭಗೊಂಡ 7ನೇ ನಿಮಿಷದಲ್ಲಿ ಸ್ಲೋವಾಕಿಯಾ ಆಟಗಾರ ಇವಾನ್​ ಸ್ಕ್ರಾನ್ಜ್​ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಲುಕಾಕು 55 ಹಾಗೂ 86ನೇ ನಿಮಿಷಲ್ಲಿ 2 ಗೋಲು ಬಾರಿಸಿದರು. ಆದರೆ ವಿಎಆರ್​ ಪರಿಶೀಲನೆಯಲ್ಲಿ 2 ಗೋಲುಗಳು ಅಮಾನ್ಯಗೊಂಡವು. ರೆಫರಿ ಆಫ್ ಸೈಡ್ ಎಂದು ಘೋಷಿಸುವ ಮೂಲಕ ಈ ಗೋಲುಗಳನ್ನು ನಿರಾಕರಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ರೊಮೇನಿಯಾ ತಂಡ ಉಕ್ರೇನ್​ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಯುರೋ ಕಪ್​ನಲ್ಲಿ ರೊಮೇನಿಯಾ ದಾಖಲಿಸಿದ 2ನೇ ಗೆಲುವು ಇದಾಗಿದೆ. ಪಂದ್ಯದ 29ನೇ ನಿಮಿಷದಲ್ಲಿ ನಾಯಕ ನಿಕೋಲೇ ಸ್ಟಾನ್ಸಿಯು ಗೋಲು ಬಾರಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ರಜ್ವಾನ್​ ಮರಿನ್​(53) ಹಾಗೂ ಡೆನಿಸ್​ ಮಿಹೈ ಡ್ರಾಗಸ್​(57) ಗೋಲು ಬಾರಿಸಿ ಮಿಂಚಿದರು. ಎದುರಾಳಿ ಉಕ್ರೇನ್​ಗೆ ಕನಿಷ್ಠ ಒಂದು ಗೋಲು ಕೂಡ ಬಾರಿಸಲು ಸಾಧ್ಯವಾಗಲಿಲ್ಲ. 24 ವರ್ಷಗಳ ಹಿಂದೆ ಇಂಗ್ಲೆಂಡ್​ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ಬಳಿಕ ಯುರೊ ಕಪ್​ನಲ್ಲಿ ರೊಮೇನಿಯಾಗೆ ಒಲಿದ ಮೊದಲ ಗೆಲುವು ಇದಾಗಿದೆ. ಒಟ್ಟಾರೆ 2 ಗೆಲುವು.

Exit mobile version