Site icon Vistara News

Ind vs Pak | ಪಾಕ್‌ ವಿರುದ್ಧ ಪಂದ್ಯಕ್ಕೆ ಮುನ್ನ ಟೀಮ್ ಇಂಡಿಯಾದ ವೇಗಿಗೆ ಜ್ವರ; ಆತಂಕವಿಲ್ಲ ಎಂದು ಕೋಚ್‌

ind vs pak

ದುಬೈ : ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ((Ind vs Pak)) ಏಷ್ಯಾ ಕಪ್‌ ಸೂಪರ್‌-೪ ಪಂದ್ಯ ಆಗಸ್ಟ್‌ ೪ರಂದು ನಡೆಯಲಿದ್ದು, ಏತನ್ಮಧ್ಯೆ, ಟೀಮ್‌ ಇಂಡಿಯಾದ ವೇಗದ ಬೌಲರ್‌ ಆವೇಶ್‌ ಖಾನ್‌ ಜ್ವರದಿಂದ ಬಳಲಿದ್ದಾರೆ. ಆದರೆ, ಟೀಮ್ ಇಂಡಿಯಾದ ಕೋಚ್ ರಾಹುಲ್‌ ದ್ರಾವಿಡ್‌, ಅದು ಮಾಮೂಲಿ ಜ್ವರ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ.

“ಆವೇಶ್‌ ಖಾನ್‌ ಅವರು ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ಆತಂಕ ಅಗತ್ಯವಿಲ್ಲ. ಜ್ವರದ ಕಾರಣಕ್ಕೆ ಅವರು ಶನಿವಾರದ ಅಭ್ಯಾಸದಲ್ಲಿ ಪಾಲ್ಗೊಂಡಿಲ್ಲ. ಪಾಕ್‌ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗಬಹುದು. ಒಂದು ವೇಳೆ ಆಗದಿದ್ದರೆ ಟೂರ್ನಿಯ ಮುಂದಿನ ಭಾಗಕ್ಕೆ ಸುಧಾರಿಸಿಕೊಂಡು ಬರಬಹುದು,” ಎಂದು ಹೇಳಿದ್ದಾರೆ.

ಇದಕ್ಕಿಂತ ಮೊದಲು ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ಮಂಡಿ ನೋವಿನ ಕಾರಣಕ್ಕೆ ತಂಡದಿಂದ ಹೊರಕ್ಕೆ ಉಳಿದಿದ್ದಾರೆ. ಅದರ ಜತೆಗೆ ಆವೇಶ್‌ ಕೂಡ ಅಲಭ್ಯರಾದರೆ ಭಾರತಕ್ಕೆ ಸ್ವಲ್ಪ ಪ್ರಮಾಣದ ಹಿನ್ನಡೆ ಉಂಟಾಗಲಿದೆ.

ಆವೇಶ್‌ ಖಾನ್‌ ಪಾಕ್‌ ವಿರುದ್ಧದ ಪಂದ್ಯದಲ್ಲಿ ೧೯ ರನ್‌ಗಳಿಗೆ ೧ ವಿಕೆಟ್‌ ಪಡೆದುಕೊಂಡಿದ್ದರು. ಆದರೆ, ಹಾಂಕಾಂಗ್ ವಿರುದ್ಧ ೫೩ ರನ್ ಬಿಟ್ಟುಕೊಡುವ ಮೂಲಕ ಟೀಕೆಗೆ ಒಳಗಾಗಿದ್ದರು. ಒಂದು ವೇಳೆ ಆವೇಶ್‌ ಖಾನ್‌ ಪಾಕ್‌ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಹೋದರೆ ಆಡುವ ೧೧ರ ಬಳಗದಲ್ಲಿ ಬದಲಾವಣೆಗಳು ನಡೆಯಬಹುದು.

ಇದನ್ನೂ ಓದಿ | Team India | ವಿಶ್ವ ಕಪ್‌ಗೆ ಸಿದ್ಧತೆ ನಡೆಸುತ್ತಿದ್ದ ಭಾರತ ತಂಡಕ್ಕೆ ಆಘಾತ, ಪ್ರಮುಖ ಆಲ್‌ರೌಂಡರ್‌ ಅಲಭ್ಯ

Exit mobile version