Site icon Vistara News

IPL 2024: ಲಕ್ನೋ ತಂಡ ಸೇರಿದ ಪಡಿಕ್ಕಲ್; ಬೌಲಿಂಗ್​ ಆವೇಶ ತೋರದ ಅವೇಶ್​ಗೆ ಕೊಕ್!​

devdutt padikkal

ಲಕ್ನೋ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ(IPL 2024) ಆಟಗಾರರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಎಲ್ಲ 10 ತಂಡಗಳಿಗೆ ತಾವು ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ನವೆಂಬರ್​ 26 ಅಂತಿಮ ಗಡುವಾಗಿದೆ. ಇದೀಗ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡ ಟ್ರೇಡಿಂಗ್ ವ್ಯಾಪಾರದ ಮೂಲಕ ರಾಜಸ್ಥಾನ್ ರಾಯಲ್ಸ್‌ ತಂಡದಿಂದ ದೇವದತ್ ಪಡಿಕ್ಕಲ್(Devdutt Padikkal) ಅವರನ್ನು ತಮ್ಮ ತಂಡಕ್ಕೆ ಸೇರಿಕೊಂಡಿದೆ. ತಮ್ಮ ತಂಡದಲ್ಲಿದ್ದ ಅವೇಶ್ ಖಾನ್(Avesh Khan) ಅವರನ್ನು ರಾಜಸ್ಥಾನ್​ ರಾಯಲ್ಸ್​ಗೆ(Rajasthan Royals) ಬಿಟ್ಟುಕೊಟ್ಟಿದೆ.

ದೇವದತ್ ಪಡಿಕ್ಕಲ್ ಅವರು ಲಕ್ನೋ ಸೂಪರ್​ ಜೈಂಟ್ಸ್​ ಸೇರಿದ ವಿಚಾರ ಮತ್ತು ತಂಡದಿಂದ ಅವೇಶ್​ ಖಾನ್​ ಅವರನ್ನು ಕೈ ಬಿಟ್ಟ ವಿಚಾರವನ್ನು ಲಕ್ನೋ ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

ಅವೇಶ್ ಇದುವರೆಗೆ 47 ಐಪಿಎಲ್ ಪಂದ್ಯಗಳನ್ನು ಆಡಿದ್ದು, 55 ವಿಕೆಟ್ ಪಡೆದಿದ್ದಾರೆ. 22 ಪಂದ್ಯಗಳಲ್ಲಿ ಎಲ್‌ಎಸ್‌ಜಿಯನ್ನು ಪ್ರತಿನಿಧಿಸಿದ ಬಲಗೈ ವೇಗಿ 2022ರಲ್ಲಿ ಫ್ರಾಂಚೈಸಿಗೆ ಸೇರಿದ್ದರು. ಲಕ್ನೋ ಪರ ಒಟ್ಟು 26 ವಿಕೆಟ್‌ಗಳನ್ನು ಪಡೆದ್ದಾರೆ. ಅವರ ಪ್ರಸ್ತುತ ಮೊತ್ತ 10 ಕೋಟಿ. ರೂ.ಗೆ ರಾಜಸ್ಥಾನ್​ ರಾಯಲ್ಸ್​ಗೆ ಟ್ರೇಡಿಂಗ್​ ವ್ಯಾಪಾರದ ಮೂಲಕ ಸೇಲ್​ ಮಾಡಲಾಯಿತು. ಪಡಿಕ್ಕಲ್ ಅವರನ್ನು ರಾಜಸ್ಥಾನ್​ ತಂಡದಿಂದ ಲಕ್ನೋಗೆ 7.75 ಕೋಟಿ ರೂ.ಗೆ ಖರೀದಿ ಮಾಡಲಾಯಿತು.

ಕರ್ನಾಟಕದ ಪರ ಕ್ರಿಕೆಟ್ ಪರ ಇನಿಂಗ್ಸ್ ಆರಂಭಿಸಿದ ಪಡಿಕ್ಕಲ್ ಅಂಡರ್ 14ನಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ಅಂಡರ್​ 19ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಡಿಕ್ಕಲ್​ಗೆ ಅಂಡರ್​ 19 ಟೀಮ್​ ಇಂಡಿಯಾದಲ್ಲಿ ಸ್ಥಾನ ಲಭಿಸಿತು. ದ್ರಾವಿಡ್ ಗರಡಿಯಲ್ಲಿ ಪಳಗಿದ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ಮತ್ತಷ್ಟು ಪಕ್ವವಾದರು.

2018 ನವೆಂಬರ್​ನಲ್ಲಿ ಮಹಾರಾಷ್ಟ್ರ ವಿರುದ್ಧದ ಪಂದ್ಯದ ಮೂಲಕ ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದರು. ಇನ್ನು ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಮಿಂಚಿದ್ದ ಎಡಗೈ ಬ್ಯಾಟ್ಸ್​ಮನ್​ಗೆ ಐಪಿಎಲ್​ನಲ್ಲೂ ಅವಕಾಶ ಲಭಿಸಿತು. ಅದರಂತೆ 2019 ರಲ್ಲಿ ಆರ್​ಸಿಬಿ ತಂಡದಲ್ಲಿ ಸ್ಥಾನ ಪಡೆದರೂ ಆಡುವ ಅವಕಾಶ ದೊರೆತಿರಲಿಲ್ಲ. 2020 ರ ಐಪಿಎಲ್ ಮೂಲಕ ಪಾದಾರ್ಪಣೆ ಮಾಡಿದ್ದ ಪಡಿಕ್ಕಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 56 ರನ್​ ಬಾರಿಸಿ ಮೊದಲ ಐಪಿಎಲ್ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ ಕೆಲವೇ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡರು.

ಇದನ್ನೂ ಓದಿ IPL 2024: ಲಕ್ನೋ ತೊರೆದು ಕೆಕೆಆರ್ ಸೇರಿದ ಕೊಹ್ಲಿಯ ಬದ್ಧ ವೈರಿ​

57 ಐಪಿಎಲ್ ಪಂದ್ಯಗಳನ್ನು ಆಡಿರುವ ಪಡಿಕ್ಕಲ್​ ಒಟ್ಟು 1521 ರನ್ ಗಳಿಸಿದ್ದಾರೆ, ಒಂದು ಶತಕ ಮತ್ತು 9 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆರ್​ಸಿಬಿ ಪರ ಆಡುವಾಗ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದರು. ಆದರೆ ಇದೇ ಯಶಸ್ಸು ರಾಜಸ್ಥಾನ್​ ಪರ ಆಡುವಾಗ ಸಿಕ್ಕಿರಲಿಲ್ಲ. ಕೆ.ಎಲ್​ ರಾಹುಲ್​ ಅವರ ತಂಡ ಸೇರಿದ ಬಗ್ಗೆ ಸಂತಸಗೊಂಡಿದ್ದೇನೆ ಎಂದು ಪಡಿಕ್ಕಲ್​ ತಿಳಿಸಿದ್ದಾರೆ.

Exit mobile version