Site icon Vistara News

INDvsNZ | ಇಂಡೋರ್‌ ಸ್ಟೇಡಿಯಮ್‌ನಲ್ಲಿ ಆಡಿಸಿ ಮಳೆಯ ಅಡಚಣೆ ತಪ್ಪಿಸಿ, ಯುವ ಕ್ರಿಕೆಟಿಗನ ಸಲಹೆ

indvsnz

ವೆಲ್ಲಿಂಗ್ಟನ್‌ : ನ್ಯೂಜಿಲೆಂಡ್ (INDvsNZ) ಪ್ರವಾಸದಲ್ಲಿರುವ ಭಾರತ ತಂಡಕ್ಕೆ ನಿರಾಸೆ ಎದುರಾಗಿದೆ. ಏಕ ದಿನ ಸರಣಿಯ ಎರಡನೇ ಪಂದ್ಯ ಮಳೆಯಿಂದ ರದ್ದಾಗಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಶಿಖರ್ ಧವನ್‌ ಪಡೆ ಎರಡು ಹಾಗೂ ಮೂರನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳ್ಳುವ ಉದ್ದೇಶ ಇಟ್ಟುಕೊಂಡಿತ್ತು. ಆದರೆ, ಮಳೆಯಿಂದಾಗಿ ಪಂದ್ಯ ರದ್ದಾಗಿರುವ ಕಾರಣ ಸರಣಿ ವಶ ಪಡಿಸಿಕೊಳ್ಳುವ ಅವಕಾಶ ನಷ್ಟವಾಯಿತು.

ಈ ಮೊದಲು ನಡೆದ ಟಿ೨೦ ಸರಣಿಯ ಮೊದಲ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಮೂರನೇ ಪಂದ್ಯವೂ ಮಳೆಯ ಕಾರಣಕ್ಕೆ ಡಕ್ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಭಾರತ ಗೆಲುವು ಕಂಡಿತ್ತು. ಇದೀಗ ಏಕ ದಿನ ಸರಣಿಯ ಪಂದ್ಯವೂ ಮಳೆಯಿಂದ ಕೊಚ್ಚಿ ಹೋಗಿದೆ. ಈ ಬಗ್ಗೆ ಭಾರತದ ಯುವ ಆಟಗಾರ ಶುಬ್ಮನ್‌ ಗಿಲ್‌ಗೆ ಸಿಕ್ಕಾಪಟ್ಟೆ ನಿರಾಸೆ ಉಂಟಾಗಿದೆ. ಆ ಬೇಸರವನ್ನು ಅವರು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಶುಬ್ಮನ್‌ ಗಿಲ್‌ ಮಳೆಯಿಂದಾಗಿ ಪಂದ್ಯ ರದ್ದಾಗುವುದನ್ನು ತಪ್ಪಿಸಲು ಇಂಡೋರ್‌ ಸ್ಟೇಡಿಯಮ್‌ನಲ್ಲಿ ಆಯೋಜನೆ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಈ ಮೂಲಕ ಪ್ರೇಕ್ಷಕರು ಹಾಗೂ ಆಟಗಾರರಿಗೆ ಆಗುವ ನಿರಾಸೆಯನ್ನು ತಪ್ಪಿಸುವಂತೆ ಅವರು ಸೂಚನೆ ನೀಡಿದ್ದಾರೆ.

“ಪದೇ ಪದೆ ಮಳೆಯಿಂದಾಗಿ ಪಂದ್ಯ ರದ್ದುಗೊಳ್ಳುವುದು ಆಟಗಾರರು ಹಾಗೂ ಅಭಿಮಾನಿಗಳಿಗೆ ಬೇಸರದ ವಿಷಯವಾಗಿದೆ. ಆಯೋಜಕರು ಪಂದ್ಯಗಳನ್ನು ಒಳಾಂಗಣ ಸ್ಟೇಡಿಯಮ್‌ಗಳಲ್ಲಿ ಅಯೋಜಿಸಬೇಕು. ಇದು ಎಷ್ಟರ ಮಟ್ಟಿಗೆ ಸೂಕ್ತವಾಗಿದೆ ಎಂಬುದು ಗೊತ್ತಿಲ್ಲ. ಆದರೆ, ಮಳೆಯಿಂದಾಗಿ ಪಂದ್ಯ ರದ್ದಾಗುವುದನ್ನು ತಪ್ಪಿಸಲು ಇದೇ ಸೂಕ್ತ ಪರಿಹಾರ ಎಂಬುದಾಗಿ,” ಅವರು ಹೇಳಿದ್ದಾರೆ.

ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ದ್ವಿತೀಯ ಪಂದ್ಯ ಮಳೆಯಿಂದ ರದ್ದು

Exit mobile version